ಉಡುಪಿ: “ಬಿಜೆಪಿಯವರಿಗೆ ನನ್ನದೇ ಭಯ; ಯಾಕೆಂದರೆ ಅವ ರನ್ನು ಸೋಲಿಸಲು ನನ್ನಿಂದಷ್ಟೇ ಸಾಧ್ಯ ಎಂಬುದು ಅವರಿಗೆ ಗೊತ್ತಿದೆ. ನಾನು ಮತ್ತೆ ಮುಖ್ಯಮಂತ್ರಿ ಆಗು ತ್ತೇನೆ ಎಂಬ ಚಿಂತೆ ಅವರಿಗಿದ್ದು, ಅದೇ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಜ್ಜರಕಾಡು ಪುರಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಸಿದ್ದರಾಮಯ್ಯ ಸರಕಾರ ಬೀಳಿಸು ತ್ತಾರೆ’ ಎಂಬ ಕುಮಾರ ಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, “ನಾನು ಸರಕಾರ ಬೀಳಿಸುತ್ತೇನೆ ಅಂದಿಲ್ಲ. ಬಿಜೆಪಿ ಸರಕಾರ ಉಳಿಯಲು 8 ಸ್ಥಾನ ಗೆಲ್ಲಬೇಕು. ಇಲ್ಲದಿದ್ದರೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ. ಅಂತಹ ಸಂದರ್ಭ ಬಂದರೆ ಮಧ್ಯಾವಧಿ ಚುನಾವಣೆ ಬರಬಹುದು ಎಂದಿದ್ದೆ. ನಾನು ಮುಖ್ಯಮಂತ್ರಿ ಆಗಬೇಕು ಅಂದಿಲ್ಲ; ಕುಮಾರಸ್ವಾಮಿ ತಪ್ಪಾಗಿ ಭಾವಿಸಿದ್ದಾರೆ ಅಷ್ಟೇ.
ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡುವುದಾದರೆ ಕೊಡಲಿ. ಇದರಿಂದ ಜೆಡಿಎಸ್‌ನ ಜಾತ್ಯತೀತ ತಣ್ತೀದ ಬಗ್ಗೆ ಜನರಿಗೆ ತಿಳಿಯುತ್ತದೆ’ ಎಂದರು. ಸುಧಾಕರ್ ಹೇಳಿದ್ದು ಸತ್ಯ: ನಮ್ಮನ್ನು ಅನರ್ಹಗೊಳಿಸಿದ್ದೇ ಸಿದ್ದರಾಮಯ್ಯ ಎಂಬ ಶಾಸಕ ಡಾ|ಸುಧಾಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, “ಪಕ್ಷಾಂತರ ಮಾಡಿದ್ದಕ್ಕೆ ಅನರ್ಹ ಮಾಡಲು ಸ್ಪೀಕರ್‌ಗೆ ನಾನು ಮತ್ತು ದಿನೇಶ್ ಗುಂಡೂರಾವ್ ದೂರು ನೀಡಿದ್ದೆವು. ಸುಧಾಕರ್ ಹೇಳಿದ್ದು ಸತ್ಯ’ ಎಂದರು.
ದೇವೇಗೌಡ ಮತ್ತು ಯಡಿಯೂರಪ್ಪ ನಡುವೆ ಮಾತುಕತೆ ಆಗಿರುವುದು ಸ್ಪಷ್ಟ. ಅದನ್ನು ಗೌಡರು ಮತ್ತು ಕುಮಾರಸ್ವಾಮಿ ಕೂಡ ಒಪ್ಪಿದ್ದಾರೆ.
-ಸಿದ್ದರಾಮಯ್ಯ, ಮಾಜಿ ಸಿಎಂ