Advertisement

ನನ್ನ ಅಪ್ಪ ದೇಶಕ್ಕಾಗಿ ಪ್ರಾಣ ತೆತ್ತರು: ರಾಹುಲ್‌

06:00 AM Jul 15, 2018 | Team Udayavani |

ಹೊಸದಿಲ್ಲಿ: ನೆಟ್‌ಫ್ಲಿಕ್ಸ್‌ನ “ಸೇಕ್ರೆಡ್‌ ಗೇಮ್ಸ್‌’ ವೆಬ್‌ ಸೀರೀಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಕೆ ವಿವಾದಕ್ಕೆ ಸಂಬಂಧಿಸಿ ಮೌನ ಮುರಿದಿರುವ ರಾಹುಲ್‌ ಗಾಂಧಿ, ಶನಿವಾರ ಭಾವನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ. “ನನ್ನ ಅಪ್ಪ ಭಾರತ ಕ್ಕಾಗಿಯೇ ಬದುಕಿ, ಮಡಿದವರು. ಅದನ್ನು ಬದಲಿಸಲು ಕಾಲ್ಪನಿಕ ಪಾತ್ರವೊಂದಕ್ಕೆ ಸಾಧ್ಯವಿಲ್ಲ’ ಎಂದು ರಾಹುಲ್‌ ಬರೆದುಕೊಂಡಿದ್ದಾರೆ. ಜತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೊಲೀಸ್‌ಗಿರಿ ಮೂಲಕ ನಿಯಂತ್ರಿಸಬೇಕು ಎಂದು ಬಿಜೆಪಿ/ಆರೆಸ್ಸೆಸ್‌ ಭಾವಿಸುತ್ತದೆ. ಆದರೆ, ನಾವು ಈ ಸ್ವಾತಂತ್ರ್ಯವನ್ನು ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು ಎಂದು ನಂಬಿದ್ದೇವೆ ಎಂದ ರಾಹುಲ್‌ .

Advertisement
Advertisement

Udayavani is now on Telegram. Click here to join our channel and stay updated with the latest news.

Next