Advertisement

ನನ್ನ ಕುಟುಂಬ ನನ್ನ ಜವಾಬ್ದಾರಿ’ಜಾಗೃತಿ ಸ್ಟಿಕ್ಕರ್‌ ಅಳವಡಿಕೆ

12:36 PM Oct 18, 2020 | Suhan S |

ಉಡುಪಿ, ಅ. 17:  ಕೋವಿಡ್‌ – 19 ಕುರಿತು ಪ್ರತೀ ಮನೆ ಮನೆಗೆ ಅರಿವು ಮೂಡಿಸಲು ಜಿಲ್ಲಾಡಳಿತ ರೂಪಿಸಿರುವ “ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನದ ಸ್ಟಿಕ್ಕರ್‌ನ್ನು ನ್ಯಾಯಾಲಯದ ಸಮೀಪವಿರುವ ವಸತಿ ಸಂಕೀರ್ಣದಲ್ಲಿರುವ ಮನೆ ಬಾಗಿಲಿಗೆ ಅಂಟಿಸುವ ಮೂಲಕ ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ ಸದಸ್ಯ  ಕಾರ್ಯದರ್ಶಿ ಕಾವೇರಿ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್‌ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

Advertisement

ಈ ಸ್ಟಿಕರ್‌ನಲ್ಲಿ ಮನೆಯಲ್ಲಿನ ಪ್ರತೀ ಸದಸ್ಯರು ಕೋವಿಡ್‌ 19 ನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ಪಾಲಿಸಬೇಕಾದ ಕೋವಿಡ್‌-19 ನಿಯಂತ್ರಣಾ ಮುನ್ನೆಚ್ಚರಿಕಾ ಕ್ರಮ ಗಳು ಮತ್ತು ಕುಟುಂಬದ ಹಿರಿಯ ಸದಸ್ಯರನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತೇನೆ, ಗರ್ಭಿಣಿ ಮಹಿಳೆಯರನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತೇನೆ, ಕುಟುಂಬದ ಸದಸ್ಯರಿಗೆ ರೋಗ ಲಕ್ಷಣಗಳಿದ್ದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲು ಬದ್ಧನಾಗಿದ್ದೇನೆ ಎಂದು ಸ್ವಯಂ ಘೋಷಣಾ ಪ್ರಮಾಣ ಪತ್ರದ ಪ್ರತಿ ಇರುತ್ತದೆ. ಇದನ್ನು ಪ್ರತೀ ಮನೆಯವರು ಮನೆ ಬಾಗಿಲಿಗೆ ಅಂಟಿಸಬೇಕು.

ಜಿಲ್ಲಾ ಪಂಚಾಯತ್‌ ಸಿಇಓ ಡಾ| ನವೀನ್‌ ಭಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ,  ಜಿಲ್ಲಾ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಡಾ| ಪ್ರೇಮಾನಂದ್‌, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮ್‌ ಸಾಗರ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಷನ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next