ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕುರಿ ತು ಅವಹೇಳನಕಾರಿ ಟ್ವೀಟ್ ಮಾಡಿದ ನಟ ಸಿದ್ದಾರ್ಥ್ ವಿರುದ್ಧದ ಆಕ್ರೋಶ ಮಂಗಳವಾರವೂ ಮುಂದುವರಿದಿದೆ. “ನನ್ನ ಮಗಳು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ. ಅವರೇನು ಮಾಡಿದ್ದಾರೆ?’ ಎಂದು ಸೈನಾರ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಪ್ರಶ್ನಿಸಿದ್ದಾರೆ.
“ನನ್ನ ಮಗಳ ಪರವಾಗಿ ಎಲ್ಲರೂ ನಿಂತಿದ್ದಾರೆ. ಏಕೆಂದರೆ ಪ್ರತಿಯೊಬ್ಬರಿಗೂ ಒಬ್ಬ ಕ್ರೀಡಾಪಟುವಾಗುವ ಹಿಂದಿನ ಪರಿಶ್ರಮ ಗೊತ್ತಿದೆ’ ಎಂದು ಹರ್ವೀರ್ ಸಿಂಗ್ ಹೇಳಿದ್ದಾರೆ. ಇನ್ನೊಂದೆಡೆ, ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಸಿದ್ದಾರ್ಥ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್‌ಗೆ ಉಗಿತಾ ಇದ್ದಾರೆ : ಜ್ಞಾನೇಂದ್ರ
“ಭಾರತವನ್ನು ಕ್ರೀಡಾ ಶಕ್ತಿಕೇಂದ್ರ ಮಾಡುವಲ್ಲಿ ಅಪಾರ ಕೊಡುಗೆ ಕೊಟ್ಟಿರುವ ಸೈನಾ ಭಾರತದ ಹೆಮ್ಮೆ. ಅವರು ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಅಪ್ಪಟ ದೇಶಪ್ರೇಮಿ. ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡುವುದು ವ್ಯಕ್ತಿಯ ಅವಿವೇಕದ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಿರಿಯ ನಟಿ, ಬಿಜೆಪಿ ನಾಯಕಿ ಖುಷೂº ಸುಂದರ್ ಕೂಡ ಸಿದ್ದಾರ್ಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.