Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಹಾಗೂ ಉಳಿದವರು ನನಗೆ ಅವಕಾಶ ಕೊಟ್ಟಿದಕ್ಕೆ ನಾನು ಎರಡನೇ ಬಾರಿ ಸಂಸದನಾಗಿದ್ದೇನೆ. ಪೊಲೀಸ್ ಇಲಾಖೆ, ಕ್ರೀಡಾ ಕ್ಷೇತ್ರದಿಂದ ರಾಜಕಾರಣಿಗಳಾಗಿದ್ದಾರೆ. ಮಕ್ಕಳು ಸಂಬಂಧಿಕರು ದುಡ್ಡಿರುವವರಿಗೆ ಮಾತ್ರ ಅವಕಾಶವಿತ್ತು. ಆದರೆ ಎಲ್ಲರನ್ನೂ ಕರೆ ತಂದವರು ಮೋದಿ. ಸಂತೋಷ್ ಅವರ ಹೇಳಿಕೆ ಸೂಕ್ತವಾಗಿದೆ. ರಾಜಕಾರಣ ಯಾರ ಅಪ್ಪನ ಆಸ್ತಿ ಅಲ್ಲ. ಯಾರು ಕೆಲಸ ಮಾಡುತ್ತಾರೋ ಅವರು ರಾಜಕಾರಣದಲ್ಲಿ ಇರುತ್ತಾರೆ. ಮಾಡದವರನ್ನು ಮನೆಗೆ ಕಳುಹಿಸುತ್ತಾರೆ. ಅವರ ಮಾತಿಗೆ ನನ್ನ ಸಂಪೂರ್ಣ ಸಹಮತ ಇದೆ. ಅವರು ಯೋಚನೆ ಮಾಡಿಯೇ ಮಾತನಾಡಿದ್ದಾರೆ. ಇದು ಎಲ್ಲಾ ಕಡೆಯೂ ಯಶಸ್ವಿಯಾಗುತ್ತದೆ ಎಂದರು.
ಆಂಜನೇಯ ಪ್ರಕರಣ ಆದಾಗ ಏನು ಕ್ರಮ ತೆಗೆದುಕೊಂಡರು. ಹಿಂದೆ ಸಿದ್ದರಾಮಯ್ಯ ಜತೆ ಸಚಿವರಾಗಿದ್ದವರು ಹಿಂದೆ ಏನಾಗಿದ್ದರು. 25-30 ವರ್ಷದ ಹಿಂದೆ ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್, ಡಿ. ಕೆ. ಶಿವಕುಮಾರ್ ಏನಾಗಿದ್ದರು? ಎಲ್ಲಿ ದುಡಿದು ಸಂಪಾದನೆ ಮಾಡಿದ್ದಾರೆ ? ವೈಟಾಪಿಂಗ್ ಸ್ಟೀಲ್ ಬ್ರಿಡ್ಜ್ ನಲ್ಲಿ ಎಷ್ಟು ಲೂಟಿ ಮಾಡಲು ಮುಂದಾಗಿದ್ದರು ? 5 ವರ್ಷದ ಹಿಂದಿನದು ಜನ ಮರೆತಿದ್ದಾರೆ ಎಂದು ಭಾವಿಸಬೇಡಿ. ದೇಶಕ್ಕೆ 10 ಪರ್ಸೆಂಟ್ ಸರ್ಕಾರ ಅಂತಾ ನಿಮ್ಮ ಸರ್ಕಾರ ಫೇಮಸ್ ಆಗಿತ್ತು. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ. ತಿನ್ನೋದು ಬದನೆಕಾಯಿ ಹೇಳೋದು ವೇದಾಂತ . ಇವರೆಲ್ಲರ ಆಸ್ತಿ 30 ವರ್ಷದ ಹಿಂದೆ ಎಷ್ಟು ಇತ್ತು? ಈಗ ಇರುವ ಆಸ್ತಿ ಎಲ್ಲಿ ದುಡಿದರು ಹೇಳಲಿ. ಸಿದ್ದರಾಮಯ್ಯನ ಹುಂಡಿಯಿಂದ ಬಂದೆ ಅಂತಾರೆ. ಒಂದುವರೆ ಕೋಟಿ ವಾಚ್ ಎಲ್ಲಿಂದ ಬಂತು ? ಯಾರಿಗೂ ಲಾಭ ಆಗದೇ ವಾಚ್ ಕೊಟ್ಟರಾ ? ಇಷ್ಟರ ಮಟ್ಟಿಗೆ ನಿಮ್ಮನ್ನು ಮೇಲೆ ಏರಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ? ಸುಮ್ಮನೆ ಆರೋಪ ಟಾರ್ಗೆಟ್ ಮಾಡುವುದನ್ನು ಜನ ಒಪ್ಪಲ್ಲ, ಸೊಪ್ಪು ಹಾಕಲ್ಲ. ನೀವು ಸಿಎಂ ಆದಾಗಲೇ ನಿಮ್ಮ ಕ್ಷೇತ್ರದ ಜನ ನಿಮ್ಮನ್ನು ಒಪ್ಪಲಿಲ್ಲ ಎಂದರು. ಬಾಯಲ್ಲಿ ಕಡುಬು ಹಾಕಿಕೊಂಡಿದ್ದರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ , ವು ಕಡುಬು ಹಾಕಿಕೊಂಡಿರಲಿಲ್ಲ. ನಾವು ಹೇಳಿದಕ್ಕೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದು. ಸ್ವಕ್ಷೇತ್ರದಲ್ಲಿ ಅವರನ್ನು ಜನ ಸೋಲಿಸಿದ್ದು. ಸ್ವಕ್ಷೇತ್ರದಲ್ಲಿ ಸೋತಿದ್ದು ಯಾವಾಗ ? ಸಿದ್ದರಾಮಯ್ಯ ವೈಫಲ್ಯ ಜನರಿಗೆ ನಾವು ಹೇಳಿದಕ್ಕೆ ಜನ ಅವರನ್ನು ಕಿತ್ತು ಒಗೆದಿದ್ದು ಎಂದರು.
Related Articles
Advertisement