ಮುಜಫರಪುರ : ಮುಜಫರಪುರ ಆಸರೆ ಮನೆ ಸೆಕ್ಸ್ ಹಗರಣದ ಪ್ರಮುಖ ಆರೋಪಿಯಾಗಿರುವ ಬೃಜೇಶ್ ಠಾಕೂರ್ ನ ನಿಕಟವರ್ತಿಯಾಗಿರುವ ಹಾಗೂ ಸಿಬಿಐ ಗೆ ಶರಣಾಗಿರುವ ಮಧು, ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದು ಆಸರೆ ಮನೆಗಳಲ್ಲಿ ಏನು ನಡೆಯುತ್ತಿತ್ತು ಎಂಬದು ತನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹಾಗಿದ್ದರೂ ಈ ಸೆಕ್ಸ್ ಹಗರಣದಲ್ಲಿ ಸರಕಾರದ ಯಾವೆಲ್ಲ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದರು ಎಂಬುದನ್ನು ಆಕೆ ಬಹಿರಂಗಪಡಿಸಬಹುದೆಂದು ತಿಳಿಯಲಾಗಿದೆ. ಮಧು ತಾನಾಗಿಯೇ ಶರಣಾಗಿರುವುದರಿಂದ ಆಕೆಗೆ ಸಿಬಿಐ ರಕ್ಷಣೆ ಇದೆ.
ಹುಡುಗಿಯರ ಅತ್ಯಾಚಾರನಡೆಯುತ್ತಿದ್ದ ಮುಜಫರಪುರ ಆಸರೆ ಮನೆಗಳಿಗೆ ಮಧು ಆಗೀಗ ಎಂಬಂತೆ ಭೇಟಿ ಕೊಡುತ್ತಿದ್ದದರ ಬಗ್ಗೆ ತನಲ್ಲಿ ಸಾಕ್ಷ್ಯಗಳಿವೆ ಎಂದು ಸಿಬಿಐ ಹೇಳಿಕೊಂಡಿದೆ.
ಸಿಬಿಐ ಅಧಿಕಾರಿಗಳು ತನಿಖೆ ಸಂಬಂಧ ಆಗೀಗ ಎಂಬಂತೆ ನನ್ನ ಮನೆಗೆ ಭೇಟಿಕೊಡುತ್ತಿದ್ದುದರಿಂದ ನನ್ನ ಮನೆಯವರಿಗೆ ಕಿರಿಕಿರಿ ಆಗುತ್ತಿರುವುದನ್ನು ಲೆಕ್ಕಿಸಿ ನಾನೇ ತನಿಖೆಗೆ ನೆರವಾಗಲು ಸಿಬಿಐಗೆ ಶರಣಾಗಿದ್ದೇನೆ ಎಂದು ಮಧು ಹೇಳಿಕೊಂಡಿದ್ದಾಳೆ.
ನಾನು ಠಾಕೂರ್ ಕೈಕೆಳಗೆ ಕೆಲಸ ಮಾಡುತ್ತಿದ್ದುದು ನಿಜ; ಆದರೆ ಆಸರೆ ಮನೆಗಳಲ್ಲಿ ಹುಡುಗಿಯರ ಮೇಲೆ ಅತ್ಯಾಚಾರ ನಡೆಯುತ್ತಿತ್ತೆಂಬ ವಿಷಯ ನನಗೆ ತಿಳಿದಿರಲಿಲ್ಲ ಎಂದು ಮಧು ಹೇಳಿದ್ದಾಳೆ.