Advertisement
ಆ ರೀತಿ ಒಂದೆಡೆ ಕೂಡಿ ಮಾಡಿದ ಮ್ಯೂಚುವಲ್ ಫಂಡ್ ಅನ್ನು ಆರಂಭಮಾಡುವ ಸಂಸ್ಥೆಗೆ ಸ್ಪಾನ್ಸರ್ ಅನ್ನುತ್ತಾರೆ. ಆ ಸ್ಪಾನ್ಸರ್, ಫಂಡಿನ ಒಟ್ಟಾರೆ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಒಂದು ಟ್ರಸ್ಟೀ ಹಾಗೂ ದಿನದ ವಹಿವಾಟನ್ನು ನೋಡಿಕೊಳ್ಳುವ ಒಂದು ಫಂಡ್ ಹೌಸ್ ಅಥವ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಯನ್ನು ಹುಟ್ಟು ಹಾಕುತ್ತದೆ. ಉದಾ: ರಿಲಯನ್ಸ್ ಮ್ಯೂಚುವಲ್ ಫಂಡ್, ಎಚ್.ಡಿ.ಎಫ್.ಸಿ ಮ್ಯೂಚುವಲ್ ಫಂಡ್, ಇತ್ಯಾದಿ. ಆ ಫಂಡ್ ಹೌಸಿನೊಳಗೆ ಅದನ್ನೇ ಉದ್ಯೋಗವಾಗಿಸಿಕೊಂಡ ಒಬ್ಬ ಪೊ›ಫೆಶನಲ್ ಫಂಡ್ ಮ್ಯಾನೇಜರ್ ದುಡ್ಡನ್ನು ಯುನಿಟ್‌ದಾರರ ಪರವಾಗಿ ನಿರ್ವಹಿಸುತ್ತಾನೆ. ಈ ಫಂಡ್ ಹೌಸ್‌ಗಳು ಹಲವಾರು ಫಂಡ್‌ಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಿರುತ್ತವೆ ಮತ್ತು ಪ್ರತಿಯೊಂದು ಫಂಡಿಗೂ ಒಂದು ತನ್ನದೇ ಆದ ಒಂದು ಹೂಡಿಕಾ ಧೋರಣೆ ಮತ್ತು ಉದ್ಧೇಶ ಇರುತ್ತದೆ.
Related Articles
ಮ್ಯೂಚುವಲ… ಫಂಡುಗಳು ಶೇರುಗಳಷ್ಟು ಅಪಾಯಕಾರಿ ಅಲ್ಲ. ಯಾರೋ ಒಬ್ಬರು ವೃತ್ತಿಪರ ಫಂಡ್ ನಿರ್ವಾಹಕರು ಅದನ್ನು 24 ಗಂಟೆ ನೋಡಿಕೊಳ್ಳುತ್ತಾರೆ ಎನ್ನುವುದು ಸರ್ವ ವಿಧಿತ. ಆದರೂ ಮ್ಯೂಚುವಲ… ಫಂಡುಗಳಲ್ಲಿ ಕಣ್ಣುಮುಚ್ಚಿ ದುಡ್ಡು ಹಾಕುವಂತಿಲ್ಲ. ಬೇರೆಲ್ಲಾ ಹೂಡಿಕೆಗಳಲ್ಲಿ ಮಾಡುವಂತೆ ಇಲ್ಲೂ ಸಾಕಷ್ಟು ಚಿಂತನೆ ನಡೆಸಿ ಹೂಡಿಕಾ ತಂತ್ರವನ್ನು ರೂಪಿಸಬೇಕು. ಮ್ಯೂಚುವಲ… ಫಂಡ್ ಕ್ಷೇತ್ರದಲ್ಲಿ ಕೇಳಿಬರುವ ಅಂತಹ ಒಂದು ಮಹತ್ವಪೂರ್ಣ ತಂತ್ರದ ಹೆಸರು ಸಿಪ್ ತಂತ್ರ.
Advertisement
ಏನಿದು ಸಿಪ್?SIP ಅಂದರೆ Systematic Investment Plan, ಒಂದು ಕ್ರಮಬದ್ಧವಾದ ಹೂಡಿಕಾ ಕ್ರಮ. ಇಲ್ಲಿ ಒಂದು ಪೂರ್ವ ನಿಗದಿತ ಸಮಯಾನುಸಾರ ಪ್ರತಿ ತಿಂಗಳು, ಪ್ರತಿ ಪಕ್ಷ, ಪ್ರತಿ ವಾರ ಅಥವ ಪ್ರತಿ ದಿನ ಕೂಡಾ ಒಂದು ಪೂರ್ವ ನಿಗದಿತ ಮೊತ್ತವನ್ನು ಒಂದು ನಿಗದಿತ ಅವಧಿಯವರೆಗೆ ಒಂದು ಮ್ಯೂಚುವಲ್ ಫಂಡಿನಲ್ಲಿ ಹೂಡುತ್ತಾ ಹೋಗುವುದು. ಅದು ಹೇಗೆ ನಡೆಯುತ್ತದೆ ಎಂದು ಕೆಳಗಿನ ಟೇಬಲ್ ನೋಡಿ ತಿಳಿಯೋಣ:
ಈ ಟೇಬಲ್‌ನಲ್ಲಿ ಹತ್ತು ತಿಂಗಳುಗಳಲ್ಲಿ ಪ್ರತಿ ಬಾರಿಯೂ ರೂ 1000 ಕೊಟ್ಟು ಪ್ರಚಲಿತ ಮಾರುಕಟ್ಟೆ ಬೆಲೆಗೆ ಮ್ಯೂಚುವಲ್ ಫಂಡ್ ಒಂದರ ಯುನಿಟ್ಸ್‌ಗಳನ್ನು ಕೊಳ್ಳಲಾಗುತ್ತದೆ. ಪ್ರತಿ ತಿಂಗಳೂ ಆ ಮೂಲಕ ವೆಚ್ಚವು ಸರಾಸರಿ ಆಗುತ್ತಾ ಹೋಗುತ್ತದೆ. ಪ್ರತಿ ಬಾರಿಯೂ ನಿಶ್ಚಿತ ರೂ 1000 ವನ್ನೇ ಹೂಡುವುದರಿಂದ ಆ ಮೊತ್ತಕ್ಕೆ ಬರುವ ಯುನಿಟ್ಸ್‌ಗಳ ಸಂಖ್ಯೆ Net Asset Value (NAV) ಅಥವಾ ಅದರ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿಕೊಂಡು ಹೆಚ್ಚು ಕಡಿಮೆಯಾಗುತ್ತದೆ. ಹಾಗಾಗಿ ಯುನಿಟ್ಸ್‌ಗಳಿಗೆ ಬೆಲೆ ಜಾಸ್ತಿಇರುವಾಗ ಕಡಿಮೆ ಯುನಿಟ್ಸ್‌ಗಳು ಹಾಗೂ ಯುನಿಟ್ಸ್‌ಗಳಿಗೆ ಬೆಲೆ ಕಡಿಮೆುರುವಾಗ ಜಾಸ್ತಿ ಯುನಿಟ್ಸ್‌ಗಳು ಖರೀದಿಸಲ್ಪಡುತ್ತವೆ. ಇದರಿಂದಾಗಿ ತೂಕಾಧಾರಿತ ಸರಾಸರಿ ವೆಚ್ಚ ಕಡಿಮೆಯಾಗುತ್ತದೆ. ಈ ರೀತಿ ಏರಿಳಿಯುತ್ತಿರುವ ಮಾರುಕಟ್ಟೆಯಲ್ಲಿ ವೆಚ್ಚವನ್ನು ಸರಾಸರಿ ಆಗಿಸುವುದೇ ಸಿಪ್ ಮಾದರಿಯ ಹೂಡಿಕೆಯ ವೈಶಿಷ್ಟ್ಯ! ಈಗ ಮೇಲಿನ ಟೇಬಲ್ ಅನ್ನು ಇನ್ನೊಮ್ಮೆ ಸರಿಯಾಗಿ ನೋಡಿ. ಇಲ್ಲಿ ಸರಾಸರಿ ವೆಚ್ಚ ರೂ 15.88 ರಂತೆ ಒಟ್ಟು ರೂ 10,000 ಹೂಡಲಾಗಿದೆ. ಯುನಿಟ್ಟೊಂದರ ದರ ರೂ 15.88 ಕನಿಷ್ಠವೇನೂ ಅಲ್ಲ. ಹಾಗೆ ನೋಡಿದರೆ ಕನಿಷ್ಠ ದರ ರೂ 12.77 (3 ನೇ ತಿಂಗಳಲ್ಲಿ). ಈ ಸಿಪ್ ಬೈ ಸಿಪ್ ಮಾಡುವುದರಿಂದ ಗರಿಷ್ಟ ದರದ ತೊಂದರೆ ಹೇಗೆ ಉಂಟಾಗುವುದಿಲ್ಲವೋ ಹಾಗೆಯೇ ಕನಿಷ್ಟ ದರದ ಫಲವೂ ದೊರೆಯುವುದಿಲ್ಲ! ಇಂದು ಸರಾಸರಿ ಬೆಲೆಯಲ್ಲಿ ಫಂಡು ಕೊಳ್ಳುವ ಒಂದು ಕಾರ್ಯತಂತ್ರ ಮಾತ್ರ. ಸಾಧಕ-ಬಾಧಕಗಳು
ಆದರೆ ಒಂದು ಮಾತ್ರ ಸತ್ಯ. ಮಾರುಕಟ್ಟೆಯ ಕನಿಷ್ಠ ಗರಿಷ್ಠಗಳನ್ನು ತಿಳಿಯಲಾರದ ಸಂದರ್ಭದಲ್ಲಿ ಸುಮ್ಮನೇ ಬಿ.ಪಿ ಏರಿಸಿಕೊಂಡು ಮನೆಯಲ್ಲಿ ಬೈದುಕೊಂಡು, ಆಫೀಸಿನಲ್ಲಿ ಬೈಸಿಕೊಂಡು ಶೇರು ಮೋನಿಯಾಟ್ಟಂನ ಮೇಲೆ ರಿಸರ್ಚ್ ಮಾಡುವುದರಿಂದ, ಆರಾಮವಾಗಿ ಕುಳಿತುಕೊಂಡು ಸರಾಸರಿ ವೆಚ್ಚದಲ್ಲಿ ಶೇರು ಖರೀದಿಸುತ್ತಾ ಹೋಗಬಹುದು. ಶೇರು ಬೆಲೆಯ ಸರಾಸರಿ ಹೂಡಿಕೆ ಹಣಕಾಸಿನ ದೃಷ್ಟಿಯಿಂದಲೂ, ಮನುಕುಲದ ಆರೋಗ್ಯದ ದೃಷ್ಟಿಯಿಂದ ಉತ್ತಮ. ಕನಿಷ್ಠ ಮಟ್ಟ ಎಂದು ಹೊರಟು ಟಾರ್ಚ್‌ನಂತೆ ಮುಖದಿಂದ ಟೆನÒನ್ ಬೀರುತ್ತಾ, ಎದೆಯಲ್ಲಿ ಅವಲಕ್ಕಿ ಮಿಲ್ಲಿನಂತೆ ಗುಡು ಗುಡು ಕುಟ್ಟಿಸಿಕೊಳ್ಳುತ್ತಾ ಕೇವಲ ಕನ್ನಡಿಯ ಗಂಟಾದ ಹೆಚ್ಚುವರಿ ಲಾಭಕ್ಕಾಗಿ ಅರೋಗ್ಯ ಹಾಳುಮಾಡಿಕೊಳ್ಳುವುದು ಯಾವ ಪುರುಷಾರ್ಥಕ್ಕೆ? ರಿಟರ್ನ್ ಸ್ವಲ್ಪ ಕಡಿಮೆಯಾದರೂ ಸರಿ ಆರಾಮದಲ್ಲಿ ಕುಳಿತಲ್ಲೇ ದುಡ್ಡು ಮಾಡುವುದು ಒಳ್ಳೆಯದಲ್ಲವೇ? ಅಷ್ಟಕ್ಕೂ ಅಂತಹ ಕನಿಷ್ಠ ಮಟ್ಟ ನಮ್ಮ ಕೈಗೆ ಸಿಗುತ್ತದೆಯೇ? ಈ ನಿಟ್ಟಿನಲ್ಲಿ ಸಿಪ್ ಅತ್ಯಂತ ಉಪಕಾರಿ. ಸಿಸ್ಟಮಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್‌ನಿಂದ ಇನ್ನೊಂದು ಲಾಭವಿದೆ- ಮಾರುಕಟ್ಟೆ ಎಷ್ಟು ಕೆಳಗೆ ಇದೆ ಎಂದು ಗೊತ್ತಿದ್ದರೂ ಆ ಸಂದರ್ಭಗಳಲ್ಲೆಲ್ಲವೂ ಕೈಯಲ್ಲಿ ದುಡ್ಡಿರುವುದಿಲ್ಲ. ಎಷ್ಟೋ ಉಳಿತಾಯ ಮಾಡಿಕೊಳ್ಳುವುದೂ ಕೂಡಾ ಕಷ್ಟಸಾಧ್ಯವಾಗಿರುತ್ತದೆ. ಹಾಗಾಗಿ ಈ ರೀತಿ ಪ್ರತಿ ತಿಂಗಳೂ/ವಾರವೂ ಶಿಸ್ತುಬದ್ಧವಾಗಿ ಮ್ಯೂಚುವಲ್ ಫಂಡುಗಳಲ್ಲಿ ಹೂಡುವುದು ಒಂದು ಉತ್ತಮ ಪದ್ಧತಿ. ಇಕ್ವಿಟಿಯಲ್ಲಿ ಸಿಪ್/ಎಸ್‌ಟಿಪಿ:
ಮ್ಯೂಚುವಲ್ ಫಂಡುಗಳಲ್ಲಿ ಸುಮಾರು 2.5% ವಾರ್ಷಿಕ ಫಂಡ್ ಮ್ಯಾನೆಜ್ಮೆಂಟ್ ಚಾರ್ಜ್ ವಿಧಿಸುತ್ತಾರೆ. ಅದಕ್ಕೆ ಸರಿಯಾದ ಪ್ರತಿಫಲ ಕೆಲವು ಉತ್ತಮ ಆಡಳಿತದ ಮ್ಯೂಚುವಲ್ ಫಂಡುಗಳಲ್ಲಿ ಮಾತ್ರ ಸಿಗಲು ಸಾಧ್ಯ. ಎಲ್ಲಾ ಮ್ಯೂಚುವಲ್ ಫಂಡುಗಳೂ ಒಂದೇ ರೀತಿಯ ಸಾಧನೆಯನ್ನು ತೋರಿಸುವುದಿಲ್ಲ. ಆದರೂ ‘ಮಾರುಕಟ್ಟೆಯ ಉಸಾಬರಿ ನಮಗೆ ಬಿಲ್ಕುಲ್ ಬೇಡಾಪ್ಪ, ಅದರಲ್ಲಿ ಹೂಡಿಕೆ ಮಾತ್ರ ಬೇಕು’ ಎಂಬವರಿಗೆ ಮ್ಯೂಚುವಲ್ ಫಂಡ್ ಒಳ್ಳೆಯ ದಾರಿ. ಅಂತವರು ಉತ್ತಮ ಫಂಡ್ ಹೌಸಿನ ಉತ್ತಮ ಫಂಡನ್ನು ಆಯ್ದು ಅದರಲ್ಲಿ ಸಿಪ್ ಮಾಡಬಹುದು. ಮ್ಯೂಚುವಲ್ ಫಂಡುಗಳಿಗೆ ಈಗ ಸ್ಟಾರ್ ರೇಟಿಂಗ್ ಲಭ್ಯ. ಆದರೆ ‘ನನಗೆ ಮಾರುಕಟ್ಟೆ ಗೊತ್ತಿದೆ. ನಾನು ಸುಮಾರು 2.5% ರ್ವಾಕ ಫಂಡ್ ವೆಚ್ಚ ಕೊಡಲು ಇಷ್ಟ ಪಡುವುದಿಲ್ಲ, ಉತ್ತಮ ರಿಟರ್ನ್ ಕೊಡುವ ಅತ್ಯುತ್ತಮ ಶೇರುಗಳದ್ದು ನನಗೆ ಮುಖಪರಿಚಯ ಇದೆ’ ಎಂದು ಹೇಳುವವರು ನೇರವಾಗಿ ಇಕ್ವಿಟಿಯಲ್ಲೂ ಸಿಪ್ ಅಥವಾ ಎಸ್‌ಟಿಪಿ ಮಾಡಬಹುದು. ಒಂದು ಉತ್ತಮ ಶೇರು ಒಂದು ಉತ್ತಮ ಮ್ಯೂಚುವ್‌ಲ್ ಫಂಡಿಗಿಂತ ಜಾಸ್ತಿ ಪ್ರತಿಫಲ ಕೊಡಬಲ್ಲುದು. (ಆದರೆ ಅದು ಯಾವ ಶೇರು ಎಂದು ಗೊತ್ತು ಬೇಕು ಅಷ್ಟೆ) ಆ ರೀತಿ ಇಕ್ವಿಟಿಯಲ್ಲಿ ನೇರವಾಗಿ ಸಿಪ್/ಎಸ್‌ಟಿಪಿ ಮಾಡುವ ಕೆಲವರನ್ನು ನಾನು ಬಲ್ಲೆ. ಪ್ರತೀ ತಿಂಗಳೂ ಸಂಬಳ ಬಂದಂತೆ 1 ಇನ್ಫೋಸಿಸ್ ಕೊಳ್ಳುವವರಿದ್ದಾರೆ, ಅಥವ 1 ಎಲ್ಲೆಂಟಿ ಖರೀದಿಸುವವರು ಇದ್ದಾರೆ. ಡಿ-ಮಾಟ್ ಮತ್ತು ಆನ್‌ಲೈನ್ ಟ್ರೇಡಿಂಗ್ ಬಂದ ಮೇಲೆ ಇದೆಲ್ಲ ಅತ್ಯಂತ ಸುಲಭವಾಗಿದೆ. ಏಕಗಂಟಿನ ಹೂಡಿಕೆ
ಅಂತೆಯೇ ಏಕಗಂಟಿನಲ್ಲಿ ದೊಡ್ಡ ಮೊತ್ತದ ದುಡ್ಡಿದ್ದವರು ಏನು ಮಾಡಬಹುದು ಎನ್ನುವುದು ಇನ್ನೊಂದು ಪ್ರಶ್ನೆ. ಇದ್ದ ದುಡ್ಡನ್ನೆಲ್ಲಾ ಒಂದೇ ಸಮಯಕ್ಕೆ ಯಾವುದಾದರು ಈಕ್ವಿಟಿ ಫಂಡಿಗೆ ಪ್ರಚಲಿತ ಮಾರುಕಟ್ಟೆಯ ಮಟ್ಟದಲ್ಲಿ ಹಾಕುವ ಬದಲಾಗಿ ಅದನ್ನು ತಾತ್ಕಾಲಿಕವಾಗಿ ಒಂದು ಒಳ್ಳೆಯ ಲಿಕ್ವಿಡ್ ಫಂಡಿನಲ್ಲಿ ಹಾಕಿಡಬಹುದು. ಲಿಕ್ವಿಡ್ ಫಂಡು ಜಾಸ್ತಿ ರಿಸ್ಕ್ ಇಲ್ಲದೆ ಎಸ್‌ಬಿ/ಎಫ್ಡಿ ಖಾತೆಗಳಿಗಿಂತ ಜಾಸ್ತಿ ಆದಾಯತೆರಿಗೆಯ ಬಳಿಕದ ಪ್ರತಿಫಲವನ್ನು ನಿರಂತರವಾಗಿ ನೀಡುತ್ತದೆ. ಅಲ್ಲಿಂದ ಪ್ರತಿ ವಾರ/ತಿಂಗಳು ಶಿಸ್ತುಬದ್ಧವಾಗಿ ನಿಮಗೆ ಬೇಕೆನಿಸಿದ ಈಕ್ವಿಟಿ ಫಂಡಿಗೆ ದುಡ್ಡನ್ನು ವರ್ಗಾುಸುತ್ತಾ ಹೋಗಬಹುದು. ಈ ಕಾರ್ಯತಂತ್ರವನ್ನು ಸಿಸ್ಟಮ್ಯಾಟಿಕ್ ಟ್ರಾನ್ಸ್ಫರ್ ಪ್ಲಾನ್ (ಎಸ್‌ಟಿಪಿ) ಅನ್ನುತ್ತಾರೆ. ಈ ಕಾರ್ಯತಂತ್ರ ಮಾರುಕಟ್ಟೆಯ ಏರಿಳಿತಗಳನ್ನು ಮೀರಿ ಸರಾಸರಿ ಮಟ್ಟದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗುತ್ತದೆ. ಎಸ್‌ಬಿ/ಎಫ್ಡಿಗಳ ಆದಾಯಕರಭಾರವನ್ನೂ ತಪ್ಪಿಸಿ ಲಿಕ್ವಿಡ್ ಫಂಡಿನ ಉತ್ತಮ ಪ್ರತಿಫಲ ಪಡೆದಂತೆಯೂ ಆಗುತ್ತದೆ. ಜಯದೇವ ಪ್ರಸಾದ ಮೊಳೆಯಾರ