Advertisement
ಇಲ್ಲಿಗೆ ಸಮೀಪದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯದ ಹೊರಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಚುನಾವಣೆ ಜವಾಬ್ದಾರಿಯನ್ನು ಮದ್ದೂರು ಕ್ಷೇತ್ರದಲ್ಲಿ ಮಧು ಜಿ.ಮಾದೇಗೌಡ, ಬಿ.ರಾಮಕೃಷ್ಣ, ಗುರುಚರಣ್ ಅವರಿಗೆ ನೀಡಲಾಗಿದೆ. ಈ ಮೂವರು ಒಗ್ಗಟ್ಟಿನಿಂದ ಚುನಾವಣೆ ಮಾಡಲಿದ್ದಾರೆ ಎಂದರು. ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಅಧಿಕಾರ ಸಿಕ್ಕರೂ ಜನಪರ ಕೆಲಸ ಮಾಡಲಿಲ್ಲ.
Related Articles
Advertisement
ಇದೇ ವೇಳೆ ಮಾಜಿ ಸಚಿವರಾದ ಆತ್ಮಾನಂದ, ನರೇಂದ್ರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಮಲ್ಲಾಜಮ್ಮ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಅಭ್ಯರ್ಥಿ ದಿನೇಶ್‌ಗೂಳಿಗೌಡ, ಚಂದೂಪುರ ಪಾಪಣ್ಣ, ಬಿ.ಎಂ.ನಂಜೇಗೌಡ, ಎ.ಎಸ್.ರಾಜೀವ್, ಕದಲೂರು ರಾಮಕೃಷ್ಣ, ಅಜ್ಜಹಳ್ಳಿ ರಾಮಕೃಷ್ಣ, ಮುಟ್ಟನಹಳ್ಳಿ ಶಿವಲಿಂಗೇಗೌಡ, ಸಿ.ಎಂ.ದ್ಯಾವಪ್ಪ, ಮೆಳ್ಳಹಳ್ಳಿ ವಿನಯ್, ಅಣ್ಣೂರು ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಮಲತಾ ಕೈಗೆ ಬೆಂಬಲ
ಭಾರತೀನಗರ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ದಿನೇಶ್ ಗೂಳಿಗೌಡ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ನೀಡಲ್ಲಿದ್ದಾರೆಂದು ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ ಹೇಳಿದರು. ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದ್ದರಿಂದ ಸುಮಲತಾ ಅವರು ಆಯ್ಕೆಗೊಂಡಿದ್ದಾರೆ.
ಹಾಗಾಗಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಬಹುದು ಎಂದರು. ಪಕ್ಷಾತೀತವಾಗಿ ಸುಮಲತಾ ಅವರನ್ನು ಆಯ್ಕೆಗೊಳಿಸಿದ ಹಿನ್ನೆಲೆಯಲ್ಲಿ ರೈತ ಸಂಘದ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಬಗ್ಗೆ ಹೆಚ್ಚು ಒಲವು ಇದೆ. ಹಾಗಾಗಿ ದಿನೇಶ್ ಗೂಳಿಗೌಡ ಅವರನ್ನು ಬೆಂಬಲಿಸಬಹುದು ಎಂದರು.
ಯಾವ ಪಕ್ಷಕ್ಕೂ ಬೆಂಬಲ ಇಲ್ಲ
ಭಾರತೀನಗರ: ಸ್ಥಳೀಯ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಬೆಂಬಲ ಯಾವ ಪಕ್ಷಕ್ಕೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು. ದೊಡ್ಡರಸಿನಕೆರೆಯಲ್ಲಿ ಮಾತನಾಡಿದ ಅವರು, ವೋಟು ಹಾಕಿದ ಜನತೆಗೆ ನಾನು ಬೆಂಬಲವಾಗಿರುತ್ತೇನೆ. ಯಾವುದೇ ಪಕ್ಷದ ಪರವಾಗಿ ಈ ಸಂದರ್ಭದಲ್ಲಿ ಹೋಗುವುದಿಲ್ಲ. ಎಲ್ಲಾ ಪಕ್ಷದವರು ನನಗೆ ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ.
ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಕಾರ್ಯಕರ್ತರೆಲ್ಲರೂ ನನ್ನೊಂದಿಗೆ ಸುತ್ತಾಡಿ ಗೆಲ್ಲಿಸಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾರನ್ನೂ, ಯಾವ ಪಕ್ಷವನ್ನು ಬೆಂಬಲಿಸುವುದು ಸೂಕ್ತವಲ್ಲ, ನಾನು ತಟಸ್ಥಳಾಗಿರುತ್ತೇನೆ ಎಂದರು. ಗ್ರಾಪಂ ಸದಸ್ಯರು ಬೆಂಬಲ ನೀಡುವುದರಿಂದ ನನ್ನ ಬೆಂಬಲ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅಂತಹವರಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.