ಮ್ಯೂಚುವಲ ಫಂಡ್‌ಗಳ ಖರೀದಿ ಈ ಹಿಂದೆ ಏಜೆಂಟರುಗಳ ಮೂಲಕ ನಡೆಯುತ್ತಿತ್ತು. ಆಗ ನೇರವಾಗಿ ಗ್ರಾಹಕರೇ ಕಂಪನಿಯಿಂದ ಅವುಗಳನ್ನು ಖರೀದಿ ಮಾಡುವ ಅವಕಾಶವಿರಲಿಲ್ಲ. ಹೀಗಾಗಿ ಏಜೆಂಟರಿಗೆ ಪಾವತಿ ಮಾಡುವ ಕಮಿಷನ್ ದರವನ್ನೂ ಗ್ರಾಹಕರಿಂದಲೇ ಕಂಪನಿಗಳು ಪಡೆಯುತ್ತಿದ್ದವು. ಆದರೆ ಈಗ ಹಾಗಲ್ಲ. ಡೈರೆಕ್ಟ್ ಫಂಡ್‌ಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿವೆ. ಇವುಗಳನ್ನು ನೇರವಾಗಿ ಗ್ರಾಹಕರು ಖರೀದಿಸಬಹುದು. ಇದರಲ್ಲಿ ಏಜೆಂಟರುಗಳಿಗೆ ಪಾವತಿಸುವ ಕಮೀಷನ್ ಸೇರಿರುವುದಿಲ್ಲ. ಅಷ್ಟೇ ಅಲ್ಲ, ಗ್ರೋತ್ ರೇಟ್ ಕೂಡ ಹೆಚ್ಚು.
ಇದಕ್ಕಾಗಿಯೇ ಹಲವು ಅಪ್ಲಿಕೇಶನ್‌ಗಳು ಚಾಲ್ತಿಗೆ ಬಂದಿವೆ. ಝೆರೋಧಾದ ಕಾಯ್ನ್ , ಪಿಗ್ಗಿ, ಸ್ಕ್ವಿರಲ್ , ಗ್ರೋವ್ ಜೊತೆಗೆ ಇತ್ತೀಚಿಗೆ ಪೇಟಿಎಂ ಕೂಡ ತನ್ನ ಮನಿ ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರಿಂದ ಜನರು ಇಂಟರ್‌ನೆಟ್‌ನಲ್ಲೇ ನೇರವಾಗಿ ಫಂಡ್‌ಗಳನ್ನು ಖರೀದಿ ಮಾಡಬಹುದು.
Advertisement
ಡೈರೆಕ್ಟ್ ಬೆಸ್ಟೋ? ರೆಗ್ಯುಲರ್ ಪ್ಲಾನ್ ಒಳ್ಳೆಯದೋ?ಡೈರೆಕ್ಟ್ ಹಾಗೂ ರೆಗ್ಯುಲರ್ ಪ್ಲಾನ್‌ಗಳಲ್ಲಿ ದೀರ್ಘಕಾಲದಲ್ಲಿ ಹೂಡಿಕೆ ಮಾಡಿದರೆ ಇರುವ ವ್ಯತ್ಯಾಸ ಗಮನಾರ್ಹ. ಸುಮಾರು ಶೇ. 13 ರಿಂದ ಶೇ. 15ರ ವರೆಗೆ ರಿಟರ್ನ್ಸ್ನಲ್ಲಿ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ 5 ಲಕ್ಷ$ ರೂ.ಗಳನ್ನು ಈಗ ಒಂದು ಡೈರೆಕ್ಟ್ ಮ್ಯೂಚುವಲ… ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೀರಿ ಅಂದುಕೊಳ್ಳಿ. ಇದರ ವಾರ್ಷಿಕ ಶೇ. 15ರ ರಿಟರ್ನ್ಸ್ ದರದಲ್ಲಿ 15 ವರ್ಷಗಳವರೆಗೆ ಇಟ್ಟಿದ್ದೀರಿ. ಇದರ ಖರ್ಚಿನ ರೇಶಿಯೋ ಶೇ. 1.7 ಎಂದು ಊಹಿಸಿದರೆ 15 ವರ್ಷದ ನಂತರದ ರಿಟರ್ನ್ಸ್ 60.75 ಲಕ್ಷ$ ರೂ. ಇರುತ್ತದೆ. ಆದರೆ ರೆಗ್ಯುಲರ್ ಪ್ಲಾನ್‌ನಲ್ಲಿ ಎಕ್ಸೆಪೆನ್ಸ್ ರೇಶಿಯೋ ಶೇ. 2.5 ಆಗಿದ್ದು, 15 ವರ್ಷಗಳ ನಂತರದ ರಿಟರ್ನ್ಸ್ ಮೊತ್ತ 52.72 ಲಕ್ಷ$ ರೂ. ಆಗಿರುತ್ತದೆ. ಅಂದರೆ 15 ವರ್ಷಗಳ ಅಂತರದಲ್ಲಿ ರಿಟರ್ನ್ಸ್ ಪ್ರಮಾಣವು 8.02 ಲಕ್ಷ$ ರೂ. ಆಗಿರುತ್ತದೆ.
ಅಪ್ಲಿಕೇಷನ್ ಮೂಲಕ ಹೂಡಿಕೆ ಮಾಡುವುದು ತುಂಬಾ ಸರಳ. ಯಾವುದೇ ದಾಖಲೆಗಳನ್ನು ಅಂಚೆಯಲ್ಲಿ ಕಳುಹಿಸುವ ಅಗತ್ಯವೇನೂ ಇಲ್ಲ. ಪ್ಯಾನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆಗಳನ್ನು ನೀಡಿದರೆ ಸಾಕು. ಈಗಾಗಲೇ ಇ-ಕೆವೈಸಿ ಆಗಿದ್ದರೆ ಪ್ಯಾನ್ ಕಾರ್ಡ್ ನಂಬರ್ ನೀಡಿದಾಕ್ಷಣ ನಮ್ಮ ಎಲ್ಲ ವಿವರಗಳನ್ನೂ ಈ ಅಪ್ಲಿಕೇಶನ್‌ಗಳು ಪಡೆದುಕೊಳ್ಳುತ್ತವೆ. ಕೆಲವೇ ಸೆಕೆಂಡುಗಳಲ್ಲಿ ಅಪ್ಲಿಕೇಶನ್ ಮೂಲಕ ಹೂಡಿಕೆ ಮಾಡಲು ಆರಂಭಿಸಬಹುದು. ಒಂದು ವೇಳೆ ಇ-ಕೆವೈಸಿ ವೆರಿಫಿಕೇಶನ್ ಪ್ರಕ್ರಿಯೆ ಸರಾಗವಾಗಿ ನಡೆಯದಿದ್ದರೆ ಮಾತ್ರವೇ ದಾಖಲೆಗಳನ್ನು ಕಳುಹಿಸುವ ಅಗತ್ಯ ಬೀಳುತ್ತದೆ. ಅಷ್ಟೂ ಅಲ್ಲದೇ, ಆಧಾರ್ ಮೂಲಕವೂ ಇ-ಕೆವೈಸಿ ಮಾಡಿಕೊಳ್ಳಬಹುದು. ಒಟಿಪಿ ವೆರಿಫಿಕೇಶನ್ ಮೂಲಕ ಆಧಾರ್ ಬಳಸಿ ವೆರಿಫಿಕೇಶನ್ ಮಾಡಿಸಿಕೊಳ್ಳುವುದು ಅತ್ಯಂತ ಸುಲಭ. ಹೂಡಿಕೆಯ ಅರಿವು ಬೇಕು
ಈ ಹೂಡಿಕೆ ಅಪ್ಲಿಕೇಶನ್‌ಗಳು ಹಾಗೂ ಡೈರೆಕ್ಟ್ ಪ್ಲಾನ್‌ಗಳ ದೊಡ್ಡ ಹಿನ್ನಡೆ ಎಂದರೆ ಇಲ್ಲಿ ಹೂಡಿಕೆಯ ಕುರಿತು ಸಲಹೆ ಲಭ್ಯವಾಗದೇ ಇರುವುದು. ಕಳೆದ ಕೆಲವು ವರ್ಷಗಳಲ್ಲಿ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ಸುದ್ದಿ ಕಿವಿಗೆ ಬೀಳುತ್ತಿವೆ. ಜಾಹೀರಾತುಗಳು ಕಾಣಿಸುತ್ತಿವೆ. ಹೀಗಾಗಿ ಬ್ಯಾಂಕ್ ಎಫ್ಡಿ ರೀತಿಯ ಇದೂ ಒಂದು ಫಿಕ್ಸೆಡ್ ರಿಟರ್ನ್ಸ್ ನೀಡುವ ಫಂಡ್ ಎಂದು ಭಾವಿಸಿದವರಿ¨ªಾರೆ. ಆದರೆ ವಾಸ್ತವ ಹಾಗಿಲ್ಲ. ಮ್ಯೂಚುವಲ… ಫಂಡ್‌ಗಳು ಶೇ.100ರಷ್ಟು ಸುರಕ್ಷಿತವಲ್ಲ. ಇದರಲ್ಲಿ ಷೇರು ಮಾರುಕಟ್ಟೆಯಲ್ಲಿರುವಷ್ಟು ರಿಸ್ಕ್ ಇಲ್ಲದಿದ್ದರೂ, ಎಫ್ಡಿಯಲ್ಲಿರುವಷ್ಟು ಸೇಫ್ ಅಲ್ಲ.
Related Articles
Advertisement
ಏನಿದೆ ಅನುಕೂಲ?ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಮೊಬೈಲ… ಅಪ್ಲಿಕೇಶನ್‌ನಿಂದಾಗಿ ಬಾಳೆಹಣ್ಣು ಸುಲಿದಷ್ಟು ಸುಲಭ. ಕಾಸಿದ್ದವರು ಸುಮ್ಮನೆ ಕಾರಿನಲ್ಲಿ ಹೋಗುತ್ತಿದ್ದರೂ ಒಂದು ಕ್ಲಿಕ್‌ನಲ್ಲಿ ಹೂಡಿಕೆ ಆರಂಭಿಸಬಹುದು. ಅಷ್ಟೇ ಯಾಕೆ, ದಿನ ದಿನವೂ ನನ್ನ ಮ್ಯೂಚುವಲ… ಫಂಡ್ ಎಷ್ಟು ರಿಟರ್ನ್ಸ್ ಕೊಡುತ್ತಿದೆ, ನಿನ್ನೆಯಿಂದ ಇಂದಿಗೆ ಹೆಚ್ಚಾಯಿತೇ, ಕಡಿಮೆ ಆಯಿತೇ ಎಂದು ನೋಡಬಹುದು. ಡೈರೆಕ್ಟ್ ಮ್ಯೂಚುವಲ… ಫಂಡ್‌ಗಳ ಸಂಖ್ಯೆ ಆರಂಭದಲ್ಲಿ ಕಡಿಮೆ ಇದ್ದರೂ, ಇತ್ತೀಚೆಗೆ ಇವುಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆಯ್ಕೆ ಸುಲಭ, ಅನುಕೂಲಕ್ಕೆ ತಕ್ಕಂಥ ಮ್ಯೂಚುವಲ… ಫಂಡ್‌ಗಳು ಸಿಗುವುದೂ ಸಾಧ್ಯ. ಇವುಗಳಲ್ಲಿ ನಮ್ಮ ಸೇವಿಂಗ್ಸ್ ಅಕೌಂಟಿನಿಂದ ನೇರವಾಗಿ ಪಾವತಿಯಾಗುವಂತೆ ಹೂಡಿಕೆ ಮಾಡಬಹುದು. ಸಮಸ್ಯೆಯೂ ಇದೆ
ಮ್ಯೂಚುವಲ ಫಂಡ್‌ಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳು ರೆಫರ್ ಮಾಡುತ್ತಲೇ ಇರುತ್ತವೆ. ಅದಕ್ಕೆ ಮರುಳಾಗಬಾರದು. ಏಕೆಂದರೆ, ಅಪ್ಲಿಕೇಶನ್ ಕಂಪನಿಗಳು ತಮಗೆ ಹೆಚ್ಚು ಕಮೀಷನ್ ನೀಡುವ ಅಥವಾ ಉತ್ತಮ ಜಾಹೀರಾತು ನೀಡುವ ಫಂಡ್‌ಗಳನ್ನು ಗ್ರಾಹಕರಿಗೆ ರೆಫರ್ ಮಾಡಬಹುದು. ಅಷ್ಟೇ ಅಲ್ಲ, ಜಾಹೀರಾತುಗಳಲ್ಲಿ ಕಾಣುವ ಕಡಿಮೆ ರಿಟರ್ನ್ಸ್ ನೀಡುವ ಫಂಡ್ ಆಯ್ಕೆ ಮಾಡಿಕೊಂಡು ಮೋಸ ಹೋಗಬಹುದು. ಮೊಬೈಲ… ಆಪ್‌ಗ್ಳಲ್ಲಿ ಗ್ರಾಹಕರ ಅಗತ್ಯಕ್ಕೆ ಆಧರಿಸಿ, ಗ್ರಾಹಕೀಯ ಸೇವೆ ಲಭ್ಯವಿರುವುದಿಲ್ಲ. ಒಟ್ಟಾರೆ ಬಳಕೆದಾರರಿಗೆ ಒಂದಷ್ಟು ಫಂಡ್‌ಗಳನ್ನು ನೀಡಲಾಗುತ್ತದೆ. ಹೂಡಿಕೆದಾರರಿಗೆ ಸರಿಯಾದ ಸಮಯಕ್ಕೆ ಸಲಹೆಯೂ ಸಿಗುವುದಿಲ್ಲ. ಅಷ್ಟೇ ಅಲ್ಲ, ಫಂಡ್ ಬಗ್ಗೆ ಹೆಚ್ಚು ಸಂಶೋಧನೆ ನಡೆಸಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಯಾವುದೋ ಫಂಡ್‌ನಲ್ಲಿ ಹೂಡಿಕೆ ಮಾಡಿ ಆಮೇಲೆ ಪಶ್ಚಾತ್ತಾಪ ಪಡುವುದಕ್ಕೆ ಕಾರಣವಾದೀತು. ಇದರ ಜೊತೆಗೆ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ, ಫಂಡ್‌ಗಳ ರಿಸ್ಕ್ ಪೊ›ಫೈಲ… ಅನ್ನು ಬಹುತೇಕ ಅಪ್ಲಿಕೇಶನ್‌ಗಳು ನೀಡುವುದಿಲ್ಲ. ಇದರಿಂದ ಹೂಡಿಕೆದಾರರಿಗೆ ಫಂಡ್ ಆಯ್ಕೆ ಕಷ್ಟವಾಗುತ್ತದೆ. ರಿಸ್ಕ್ ಪೊ›ಫೈಲಇಲ್ಲದೇ ಹೆಚ್ಚು ರಿಸ್ಕ್ ಇರುವ ಮ್ಯೂಚುವಲ… ಫಂಡ್‌ಗಳ ಮೇಲೆ ಗ್ರಾಹಕರು ಹೂಡಿಕೆ ಮಾಡಿ ಕೊನೆಗೆ ಪೇಚಾಡುವಂತಾದೀತು.
ಮೊಬೈಲ ಅಪ್ಲಿಕೇಶನ್ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಿಟರ್ನ್ಸ್ ತೋರಿಸಬಹುದು. ಅಂದರೆ 5 ವರ್ಷಕ್ಕೂ ಹಿಂದಿನಿಂದಲೂ ಫಂಡ್ ಇದ್ದರೂ 1 ವರ್ಷ ಅಥವಾ 3 ವರ್ಷಗಳವರೆಗೆ ಮಾತ್ರವೇ ರಿಟರ್ನ್ಸ್ ತೋರಿಸಬಹುದು. ಇನ್ನೂ ಕೆಲವು ಅಪ್ಲಿಕೇಶನ್‌ಗಳು ವಿಭಿನ್ನ ವಿಭಾಗದ ಫಂಡ್ ಜೊತೆಗೆ ಹೋಲಿಕೆ ಮಾಡಿ ಹೂಡಿಕೆದಾರರಿಗೆ ತಪ್ಪು ಚಿತ್ರಣ ನೀಡಬಹುದು. ಅಪ್ಲಿಕೇಶನ್ ಸರಿಯಾದ ಸಮಯಕ್ಕೆ ಅಪ್‌ಡೇಟ್ ಆಗುತ್ತದೆಯೇ ಎಂದು ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಕೆಲವು ಅಪ್ಲಿಕೇಶನ್‌ಗಳು ಫಂಡ್ ಮ್ಯಾನೇಜರ್ ಕಂಪನಿಯನ್ನೇ ತೊರೆದರೂ, ಆತನ ಹೆಸರನ್ನೇ ಫಂಡ್ ಮ್ಯಾನೇಜರ್ ಎಂದು ತೋರಿಸುತ್ತಿರುತ್ತವೆ. ಇನ್ನೂ ಕೆಲವು ನಿಂತುಹೋದ ಫಂಡ್‌ಗಳನ್ನೂ ಲಿಸ್ಟ್ ಮಾಡಿರಬಹುದು. ಮೊಬೈಲ್ ಅಪ್ಲಿಕೇಶನ್‌ಗಳು ಹಣ ಮಾಡುವುದು ಹೇಗೆ?
ಅಪ್ಲಿಕೇಶನ್‌ಗಳು ಗ್ರಾಹಕರಿಂದಲೂ ಹಣ ತೆಗೆದುಕೊಳ್ಳುವುದಿಲ್ಲ. ಅವು ಯಾರಿಗೂ ಏಜೆಂಟರಂತೂ ಅಲ್ಲವೇ ಅಲ್ಲ. ಹಾಗಾದರೆ ನಮಗೆ ಉಚಿತ ಸೇವೆ ಒದಗಿಸಲು ಇವರಿಗೆ ದುಡ್ಡು ಎಲ್ಲಿಂದ ಬರುತ್ತದೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಮೊದಲು ಹೂಡಿಕೆ ಅಥವಾ ರಿಟರ್ನ್ಸ್ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಷ್ಟೇ ಅಲ್ಲ, ಈ ಅಪ್ಲಿಕೇಶನ್ ಮಾಲೀಕರಿಗೆ ಇತರ ಹಿತಾಸಕ್ತಿಗಳೂ ಇರುತ್ತವೆ.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಗಾಗಿ ನೀಡಿದ ಇ-ಕೆವೈಸಿಯಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಇವರು ಇತರ ಉತ್ಪನ್ನಗಳ ಕ್ರಾಸ್ ಸೆಲ್ ಮಾಡಲು ಪ್ರಯತ್ನಿಸಬಹುದು. ವಿಮೆ ಸ್ಕೀಮ್‌ಗಳು, ಸಾಲ ಅಥವಾ ಕ್ರೆಡಿಟ್ ಕಾರ್ಡ್ ಇತ್ಯಾದಿ ಇತರ ಸೇವೆಗಳನ್ನು ಕೊಡುತ್ತೇವೆ ಎಂದು ನಿಮ್ಮ ವೈಯಕ್ತಿಕ ಮಾಹಿತಿಯನ್ನಿಟ್ಟುಕೊಂಡು ಈ ಕಂಪನಿ ಅಥವಾ ಇದರ ಅಂಗಸಂಸ್ಥೆಗಳು ನಿಮ್ಮನ್ನು ಪೀಡಿಸಬಹುದು. ಹೀಗಾಗಿ ಅಪ್ಲಿಕೇಶನ್‌ಗಳು ಯಾವ ಹಿತಾಸಕ್ತಿ ಹೊಂದಿವೆ ಮತ್ತು ಅವು ನಿಮಗೆ ಬಾಧ್ಯವೇ ಎಂಬುದನ್ನು ಗಮನಕ್ಕೆ ತೆಗೆದುಕೊಂಡು ಮುಂದುವರಿಯಿರಿ. ಕಂಪನಿಗಳ ಉದ್ದೇಶ ಹೀಗಿದೆ
ಕಾಯ್ನ್ ಎಂಬಿಎಫ್ಸಿ ಆರಂಭಿಸುವ ಉದ್ದೇಶವನ್ನು ಮಾತೃಸಂಸ್ಥೆ ಝೆರೋಧಾ ಹೊಂದಿದ್ದು, ಇದರ ಅಡಿಯಲ್ಲಿ ಸೆಕ್ಯುರಿಟಿಗಳ ಮೇಲೆ ಸಾಲ ನೀಡುವ ಗುರಿ ಇದೆ. ಹೀಗಾಗಿ ತಮ್ಮ ಒಟ್ಟು ಹೋಲ್ಡಿಂಗ್ಸ್ ಮೇಲೆ ಸಾಲ ನೀಡುವ ಮೂಲಕ ಈ ಹೋಲ್ಡಿಂಗ್ಸ್ ಅನ್ನು ಬಳಸಿಕೊಳ್ಳಲಿದೆ.
ಗ್ರೋವ್ ಪ್ರೀಮಿಯಂ ಅಡ್ವೆ„ಸರಿ ಸೇವೆಗಳನ್ನು ಆರಂಭಿಸುವ ಉದ್ದೇಶವನ್ನು ಕಂಪನಿ ಹೊಂದಿದ್ದು, ಷೇರುಗಳಲ್ಲಿ ಹೂಡಿಕೆ, ವಿಮೆ ಮಾರಾಟ, ಸಾಲ ನೀಡುವಿಕೆ ಇತ್ಯಾದಿ ಹೊಸ ಪ್ಲಾಟ್‌ಫಾರಂಗಳನ್ನು ಪರಿಚಯಿಸಬಹುದು.
ಪೇಟಿಎಂ ಮನಿ ಈಗಾಗಲೇ ಇತರ ಆರ್ಥಿಕ ವಲಯದಲ್ಲೂ ಹೆಸರು ಮಾಡಿರುವ ಕಂಪನಿ. ಇದು ಇತರ ಉತ್ಪನ್ನ ಹಾಗೂ ಸೇವೆಗಳನ್ನು ಕ್ರಾಸ್‌ಸೆಲ್ ಮಾಡಲಿದೆ. ಕೃಷ್ಣಭಟ್