Advertisement

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

03:01 PM Oct 05, 2024 | Team Udayavani |

ಕೊಲ್ಕತ್ತಾ: ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ವಿಶೇಷ ಆಹಾರದ ಮೆನುವೊಂದನ್ನು ಗೃಹ ಇಲಾಖೆ ಸಿದ್ಧಪಡಿಸಿದೆ.

Advertisement

ಅದರಂತೆ ದುರ್ಗಾ ಪೂಜೆಯ ಸಂದರ್ಭದಲ್ಲಿ ಜೈಲಿನಲ್ಲಿರುವ ಕೈದಿಗಳು ಹಬ್ಬದ ಸಂಭ್ರಮದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಗೃಹ ಇಲಾಖೆ ಈ ವಿಶೇಷ ದಿನದಂದು ಕೈದಿಗಳಿಗೆ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಬಸಂತಿ ಪಲಾವ್‌ ಸೇರಿದಂತೆ ಹಲವಾರು ಬಂಗಾಲಿ ಖಾದ್ಯಗಳನ್ನು ನೀಡಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅದರಂತೆ ಬರುವ ಅಕ್ಟೋಬರ್ 9 ರಿಂದ ಅಕ್ಟೋಬರ್ 12 ರವರೆಗೆ ಈ ನಾಲ್ಕು ದಿನದಂದು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿದ ಜೈಲು ಅಧಿಕಾರಿ ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಕೈದಿಗಳು ಏನಾದರು ವಿಶೇಷ ಖಾದ್ಯವನ್ನು ನೀಡುವಂತೆ ಆಗ್ರಹಿಸುತ್ತಾರೆ ಆದರೆ ಇದುವರೆಗೂ ಯಾವುದೇ ವಿಶೇಷ ಆಹಾರ ಕೈದಿಗಳಿಗೆ ನೀಡಿಲ್ಲ ಹಾಗಾಗಿ ಈ ಬಾರಿ ಕೈದಿಗಳ ಭೋಜನದಲ್ಲಿ ವಿಶೇಷ ಖಾದ್ಯಗಳನ್ನು ನೀಡಲು ಮುಂದಾಗಿದ್ದೇವೆ, ಜೊತೆಗೆ ಈ ಆಹಾರವನ್ನು ಜೈಲಿನಲ್ಲಿರುವ ಕೈದಿಗಳೇ ತಯಾರಿಸಲಿದ್ದಾರೆ ಎಂದು ಹೇಳಿದ್ದಾರೆ.

ಕೈದಿಗಳೇ ತಯಾರಿಸುವ ಈ ವಿಶೇಷ ಖಾದ್ಯದಲ್ಲಿ ಚನ್ನಾ ದಾಲ್, ಪೂರಿ, ಮೀನು ಸಾರು, ಕೋಳಿ ಸಾಂಬಾರ್, ಆಲೂಗಡ್ಡೆ ಸೋರೆಕಾಯಿ ಜೊತೆಗೆ ಸಿಗಡಿ, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಪಾಯಸ, ಬಸಂತಿ ಪುಲಾವ್ ಇಷ್ಟೆಲ್ಲಾ ಖಾದ್ಯಗಳನ್ನು ಸ್ವತಃ ಕೈದಿಗಳೇ ತಯಾರು ಮಾಡಲಿದ್ದಾರಂತೆ.

Advertisement

ಇದನ್ನೂ ಓದಿ: Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next