ಇನ್ನುಳಿದ ರಸ್ತೆ ಹದಗೆಟ್ಟು ದೊಡ್ಡ ಕಂದಕಗಳಾಗಿ ಪರಿವರ್ತನೆಯಾಗಿವೆ. ನಿರ್ಮಾಣವಾದ ರಸ್ತೆಯ
ಮೇಲೆ ಮರಳು ಹಾಗೂ ಕಂಕರ್ ಹಾಕಿರುವುದರಿಂದ ರಸ್ತೆ ಇಕ್ಕಟ್ಟಾಗಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಮುಖಂಡರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಜನಪ್ರತಿನಿ ಧಿಗಳು ಹಾಗೂ ಅ ಧಿಕಾರಿಗಳು ರಸ್ತೆ
ನಿರ್ಮಾಣಕ್ಕೆ ಮುಂದಾಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ ಸಮಸ್ಯೆ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ರಸ್ತೆ ಮೇಲೆಲ್ಲ ನೀರು ಹರಿದಾಡುತ್ತಿದೆ. ಇದರಿಂದ
ಗ್ರಾಮದ ಕೊಳಚೆ ನೀರು ತಗ್ಗುಗಳಲ್ಲಿ ಸೇರಿಕೊಂಡು ಹೊಂಡಗಳಾಗಿ ನಿರ್ಮಾಣವಾಗಿವೆ. ಇದರಿಂದ ಸುಲಭ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವುದಲ್ಲದೇ ರಸ್ತೆಯ ಮೇಲೆ ಮೂಗು ಮುಚ್ಚಿಕೊಂಡೇ
ತಿರುಗಾಡುವಂತಾಗಿದೆ. ಬಳಕೆಗೆ ಬಾರದ ಶೌಚಾಲಯ: ಗ್ರಾಮದಲ್ಲಿ ಸಾರ್ವಜನಿಕ
ಮಹಿಳಾ ಶೌಚಾಲಯವೇನೋ ಇದೆ. ಬಳಸಲು ಯೋಗ್ಯವಾಗಿಲ್ಲ. 2011-12ನೇ ಸಾಲಿನಲ್ಲಿ ಅಂದಿನ
ಜಿಪಂ ಸದಸ್ಯೆ ಪಾರ್ವತಿ ಚವ್ಹಾಣ ಅವರು ಶೇ. 60 ರಲ್ಲಿ 3 ಲಕ್ಷರೂ. ಅನುದಾನದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಆದರೆ ನೀರಿನ ವ್ಯವಸ್ಥೆ ಮಾಡದ ಕಾರಣ ಅದು
ಬಳಕೆಗೆ ಬಾರದಾಗಿದೆ. ಇದರಿಂದ ಗ್ರಾಮದ ಮಹಿಳೆಯರಿಗೆ ಮುಳ್ಳು ಕಂಟಿಗಳೇ ಶೌಚಕ್ಕೆ ಆಶ್ರಯವಾಗಿವೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಅ ಧಿಕಾರಿಗಳಿಗೆ ಮಹಿಳಾ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಹಲವಾರು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ
ಕ್ಯಾರೇ ಎನ್ನುತ್ತಿಲ್ಲ. ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಸಾಕಷ್ಟು ಸಹಾಯಧನ ನೀಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯಾತನದಿಂದ ಯೋಜನೆ ಮಾತ್ರ ಹಳ್ಳ ಹಿಡಿಯುತ್ತಿದೆ. ಕೂಡಲೇ ಇನ್ನುಳಿದ ರಸ್ತೆ ನಿರ್ಮಾಣ ಮಾಡಬೇಕು. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮದ ಮಲ್ಲೇಶಿ ಜಿರಕಲ್ ಆಗ್ರಹಿಸಿದ್ದಾರೆ.
Advertisement