Advertisement

ಮುತ್ತೂಟ್‌ ಫೈನಾನ್ಸ್‌ನ ಮುಖ್ಯಸ್ಥ ಮಥಾಯ್‌.ಜಿ. ಜಾರ್ಜ್‌ ನಿಧನ

09:27 PM Mar 06, 2021 | Team Udayavani |

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ (ಎನ್‌ಬಿಎಫ್ಸಿ) ಮುತ್ತೂಟ್‌ ಫೈನಾನ್ಸ್‌ನ ಮುಖ್ಯಸ್ಥ ಮಥಾಯ್‌.ಜಿ. ಜಾರ್ಜ್‌ ಮುತ್ತೂಟ್‌ (71), ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಮುತ್ತೂಟ್‌, ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಚಿನ್ನದ ಮೇಲಿನ ಸಾಲ, ರಿಯಲ್‌ ಎಸ್ಟೇಟ್‌, ಮೂಲ ಸೌಕರ್ಯ, ಆಸ್ಪತ್ರೆಗಳು, ಹೋಟೆಲ್‌ಗ‌ಳು ಸೇರಿದಂತೆ 20ಕ್ಕೂ ಹೆಚ್ಚು ದೊಡ್ಡ ಸಂಸ್ಥೆಗಳನ್ನು ನಡೆಸುತ್ತಿದ್ದ ಅವರು, ತಮ್ಮ ಎಲ್ಲಾ ಸಂಸ್ಥೆಗಳ ಕೇಂದ್ರ ಕಚೇರಿಯನ್ನು ಕೊಚ್ಚಿಯಲ್ಲೇ ನಿರ್ಮಿಸಿದ್ದರು. ಆದರೆ, ಹಲವಾರು ದಶಕಗಳಿಂದ ಅವರು ನವದೆಹಲಿಯಲ್ಲೇ ನೆಲೆಸಿದ್ದರು.

ಅವರ ನಿಧನದ ಬಗ್ಗೆ ಮುತ್ತೂಟ್‌ ಗೋಲ್ಡ್‌ ಲೋನ್‌ ಸಂಸ್ಥೆ ಶೋಕ ವಕ್ತಪಡಿಸಿದ್ದು, ಎಂ.ಜಿ. ಜಾರ್ಜ್‌ ಮುತ್ತೂಟ್‌ ನಿಧನದಿಂದ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಎಡರನೇ ಡೋಸ್ ಪಡೆದ ಮೇಲೂ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ..!

ಮಣಿಪಾಲ ಕಾಲೇಜಿನ ವಿದ್ಯಾರ್ಥಿ:
ಮುತ್ತೂಟ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಿನಾನ್‌ ಮಥಾಯ್‌ ಅವರ ಮೊಮ್ಮಗನಾಗಿ ಹಾಗೂ ಉದ್ಯಮಿ ಎಂ. ಜಾರ್ಜ್‌ ಮುತ್ತೂಟ್‌ ಅವರ ಪುತ್ರನಾಗಿ 1949ರ ನವೆಂಬರ್‌ನಲ್ಲಿ ಕೇರಳದ ಕೊಯೆಂಚೇ ರಿಯಲ್ಲಿ ಮಥಾಯ್‌ ಮುತ್ತೂಟ್‌, ತಮ್ಮ ಶಾಲಾ-ಕಾಲೇಜುಗಳ ಶಿಕ್ಷಣದ ನಂತರ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಿಂದ ಇಂಜಿನಿಯರಿಂಗ್‌ ಪದವಿ ಪಡೆದಿದ್ದರು. 1979ರಲ್ಲಿ ಕುಟುಂಬ ನಡೆಸುತ್ತಿದ್ದ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಮುತ್ತೂಟ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ 1993ರಲ್ಲಿ ಅಧಿಕಾರ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next