ಸವದತ್ತಿ: ಶ್ರೀಯಲ್ಲಮ್ಮ ದೇವಸ್ಥಾನ ಸನ್ನಿಧಿಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹಾಗೂ ದೇವಸ್ಥಾನ ಅಧಿಕಾರಿಗೆ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಶನಿವಾರ ಮನವಿ ಸಲ್ಲಿಸಿದರು.
ಆ ಬಳಿಕ ಮಾತನಾಡಿದ ಮುತಾಲಿಕ್, ಧಾರ್ಮಿಕ ದತ್ತಿ 12ನೇ ಕಲಂ ಪ್ರಕಾರ ಪುಣ್ಯಕ್ಷೇತ್ರಗಳಲ್ಲಿ ಹಿಂದೂಯೇತರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಆದಾಗ್ಯೂ ಇಲ್ಲಿ ಶೇ.50 ವ್ಯಾಪಾರ ಮುಸ್ಲಿಮರ ಹಿಡಿತದಲ್ಲಿದೆ. ಇವರಿಗೆಲ್ಲ ನೋಟಿಸ್ ನೀಡಿ ತೆರವುಗೊಳಿಸುವಂತೆ ಆಗ್ರಹಿಸಿದರು.
ದೇವಸ್ಥಾನ ಪರಿಸರದಲ್ಲಿ ಮಾಂಸ, ತಂಬಾಕು, ಮದ್ಯ ನಿಷೇಧವಿದ್ದರೂ ಸಲೀಸಾಗಿ ಲಭ್ಯವಾಗುತ್ತಿದೆ. ಇದೆಲ್ಲ ನಿಲ್ಲಬೇಕು. ಮುಜರಾಯಿ ಇಲಾಖೆಯಲ್ಲಿನ ಹಿಂದೂಯೇತರರನ್ನು ಬೇರೆಡೆ ವರ್ಗಾಯಿಸಿ. ಧಾರ್ಮಿಕ ದತ್ತಿಯಿಂದ ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಿ. ಇಲ್ಲದಿದ್ದಲ್ಲಿ ದೇಶಾದ್ಯಂತ ಹೋರಾಟ ಅನಿವಾರ್ಯ. ಅಲ್ಲಾ ಒಬ್ಬನೇ ದೇವರು, ಉಳಿದವರೆಲ್ಲ ಕಾಫೀರರು ಎನ್ನುವ ಮುಸ್ಲಿಮರಿಗೆ ಹಿಂದೂ ಕ್ಷೇತ್ರದಲ್ಲಿ ಕೆಲಸ ಏನಿದೆ ಎಂದು ಪ್ರಶ್ನಿಸಿ ಹಿಂದೂ ದೇವಸ್ಥಾನ, ದೇಶದ ರಕ್ಷಣೆಗೆ ಸಿದ್ಧರಿದ್ದೇವೆ ಎಂದರು.
ಮುಂದೆ ದೇಶ ಭಯಾನಕ ಸ್ಥಿತಿ ತಲುಪಬಹುದು. ಮತ್ತೆ ಔರಂಗಜೇಬ್, ಖೀಲ್ಜಿಗಳಂತ ಕ್ರೂರಿಗಳ ಯುಗ ಆರಂಭವಾದೀತು. ಸವದತ್ತಿ ಮುಸ್ಲಿಮರು ಏನು ಮಾಡಿದ್ದಾರೆಂದು ಪ್ರಶ್ನಿಸುವವರು, 10 ಲಕ್ಷಕ್ಕೂ ಅಧಿಕ ಕಾಶ್ಮೀರಿ ಹಿಂದೂಗಳು ಅವರಿಗೇನು ಮಾಡಿದ್ದರೆನ್ನುವುದನ್ನು ಉತ್ತರಿಸಲೆಂದು ಗುಡುಗಿದರು.
ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದು, ಸರಕಾರ ಭಕ್ತರಿಗೆ ಕುಡಿಯುವ ನೀರು, ಸ್ನಾನಗೃಹ ಮೊದಲಾದ ಮೂಲ ಸೌಕರ್ಯ ಒದಗಿಸಬೇಕು. ಚಕ್ಕಡಿ, ವಾಹನಗಳಲ್ಲಿ ಬಂದ ಭಕ್ತರು ಮುಖ್ಯವಾಗಿ ವಾಹನ ನಿಲುಗಡೆ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಮಾಮನಿ, ಇದು ಕೇವಲ ಯಲ್ಲಮ್ಮ ದೇವಸ್ಥಾನ ಮಾತ್ರವಲ್ಲ ಸ್ಥಳೀಯ ಗುರ್ಲಹೊಸೂರಿನ ದ್ಯಾಮವ್ವನ ಜಾತ್ರೆಗೂ ಅನ್ವಯಿಸುತ್ತದೆ. ಈ ಕುರಿತು ಡಿಸಿ ಹಾಗೂ ತಾಲೂಕಾಡಳಿತದ ಜೊತೆ ಚರ್ಚಿಸಿ ನಿರ್ಣಯಿಸಲಾಗುವುದು. ಗುತ್ತಿಗೆ ನೀಡಿದ ಅಂಗಡಿಗಳ ಟೆಂಡರ್ ಅವ ಧಿ, ಪಾವತಿಸಿದ ಮೊತ್ತ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು. ಶಂಕರ ವಣ್ಣೂರ ಸೇರಿ ಪ್ರಮುಖರು ಇದ್ದರು.