Advertisement

ಮುಸ್ಲಿಮರು ಶವ ದಹನ ಮಾಡಲಿ; 20 ಕೋಟಿ ಜನರಿಗೆ ಜಾಗ ಇಲ್ಲ: ಸಾಕ್ಷಿ

11:26 AM Mar 01, 2017 | Team Udayavani |

ಹೊಸದಿಲ್ಲಿ :  ಕಬರಿಸ್ಥಾನ ನಿರ್ಮಾಣಕ್ಕೆ ಸಾಕಷ್ಟು ಪ್ರಮಾಣದಲ್ಲಿ  ಭೂಮಿ ಅಲಭ್ಯವಿರುವುದರಿಂದ ಮುಸ್ಲಿಮರು ಶವ ದಫ‌ನದ ಬದಲು ಶವ ದಹನಕ್ಕೆ ಮುಂದಾಗಬೇಕು; ಅಂತೆಯೇ ಕಬರಿಸ್ಥಾನ ನಿರ್ಮಾಣದ ತಡೆಗೆ ಸೂಕ್ತಕಾನೂನನ್ನು ರೂಪಿಸಬೇಕು ಎಂದು, ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಅಗ್ರಗಣ್ಯರಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ. 

Advertisement

“ನೀವದನ್ನು ಕಬರಿಸ್ಥಾನ ಎನ್ನಿ; ಶ್ಮಶಾನ ಎನ್ನಿ. ಯಾರಿಗೂ ಶವ ದಫ‌ನ ಸಮ್ಮತವಲ್ಲ. ಈ ದೇಶದಲ್ಲಿ ಎರಡೂವರೆ ಕೋಟಿ ಹಿಂದೂ ಸಂತರಿದ್ದಾರೆ. ಅವರ ದೇಹಾಂತ್ಯದ ಬಳಿಕ ಅವರಿಗೆ ಸ್ಮಾರಕ ರೂಪಿಸಬೇಕಾಗುತ್ತದೆ. ದೇಶದಲ್ಲಿ 20 ಕೋಟಿ ಮುಸ್ಲಿಮರಿದ್ದಾರೆ. ಅವರಿಗೂ ಶವ ದಫ‌ನಕ್ಕೆ ಕಬರಿಸ್ಥಾನ ನಿರ್ಮಿಸಲು ಭೂಮಿ ಬೇಕು. ಆದರೆ ಅಷ್ಟೊಂದು ಪ್ರಮಾಣದ ಭೂಮಿ ಹಿಂದುಸ್ಥಾನದಲ್ಲಿ ಎಲ್ಲಿದೆ ? ಆದುದರಿಂದ ಶವ ದಫ‌ನದ ಕಬರಿಸ್ಥಾನ ನಿರ್ಮಾಣವನ್ನು ತಡೆಯುವ ಕಾನೂನನ್ನು ರೂಪಿಸುವುದು ಅಗತ್ಯ ಎಂದು ಸಾಕ್ಷಿ ಮಹಾರಾಜ್‌ ಅವರು ಉನ್ನಾವೋದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. 

ಸಾಕ್ಷಿ ಮಹಾರಾಜ್‌ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್‌ ಪಕ್ಷ, “ಉತ್ತರ ಪ್ರದೇಶದಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಾಗಲೇ ಕೇಸರಿ ಪಕ್ಷವು ರಾಜ್ಯದಲ್ಲಿ ಕೋಮು ವಾತಾವಾರಣವನ್ನು ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಟೀಕಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next