ಮಂಡ್ಯ: ಬಿಜೆಪಿ ನಾಯಕರು ಬುರ್ಖಾ ಹಾಕಿಕೊಂಡು ಓಡಾಡಿದರೂ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ. ಹೀಗಿರುವಾಗ ಮುಸ್ಲಿಮರ ಒಲೈಕೆಯನ್ನು ಏಕೆ ಮಾಡಬೇಕೆಂದು ಬಿಜೆಪಿ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ನಗರದ ಕರ್ನಾಟಕ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮುಸ್ಲಿಮರಿಗೆ ಹೆದರುತ್ತಿದ್ದು, ಮಸೀದಿಯಲ್ಲಿ ಸರ್ಕಾರಕ್ಕೆ ಮೈಕ್ ಬಂದ್ ಮಾಡಲು ಆಗದಿದ್ದರೆ ನಾವು ಬಂದ್ ಮಾಡಲು ತಯಾರಿದ್ದೇವೆ ಎಂದರು.
ರಾಜ್ಯದ ದೇಗುಲಗಳಲ್ಲಿ ಈಗಾಗಲೇ ಸಪ್ರಭಾತ ಪಠಣಕ್ಕೆ ಅರ್ಚಕರು ಹಾಗೂ ಟ್ರಸ್ಟ್ ನ ಮುಖ್ಯಸ್ಥರು ಒಪ್ಪಿದ್ದಾರೆ. ಬೆಳಿಗ್ಗನ ಜಾವ ಭಕ್ತಿ ಗೀತೆ, ಹುನುಮಾನ್ ಚಾಲೀಸ್ ಪಠಣ ಮಾಡಲು ಒಪ್ಪಿದ್ದಾರೆ. ಎಲ್ಲೆಡೆ ಸಂತೋಷವೂ ಇದೆ. ಆಕ್ರೋಶವೂ ಇದೆ. ಜೊತೆಗೆ ಮುಸ್ಲಿಮರ ಉದ್ದಟತನವು ಸಹ ಹೆಚ್ಚಾಗಿದೆ. ಸರ್ಕಾರ ಅಭಿಯಾನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ನಾವು ಸಂಪರ್ಕಿಸಿದ ದೇಗುಲಕ್ಕೆ ಹೋಗಿ ಹೆದರಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರದ ಈ ದಾದಾಗಿರಿ ನಡೆಯಲ್ಲ. ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ. ನಮ್ಮ ಓಟಿನಿಂದಲೇ ನೀವು ಗೆದ್ದಿರುವುದು. ಪೊಲೀಸರಿಂದ ದೇವಾಲಯಗಳನ್ನು ಹೆದರಿಸುವ ಕೆಲಸ ಸರಿಯಲ್ಲ. ಗಲಭೆ ಅಶಾಂತಿ ಮಸೀದಿ ಮೈಕ್ ಮೂಲಕ ಆಗುತ್ತಿದ್ದು, ಈಗಾಗಲೇ ಯುಪಿಯಲ್ಲಿ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ನಮ್ಮ ರಾಜ್ಯದಲ್ಲಿ ಏಕೆ ಆಗುತ್ತಿಲ್ಲ. ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಗಡ್ಸ್ ತೋರುತ್ತಿಲ್ಲ. ಸುಪ್ರೀಂ ಆದೇಶ ಎಲ್ಲರಿಗೋ? ಸರ್ಕಾರ ಆದೇಶ ಪಾಲಿಸದಿದ್ದರೆ ಹೋರಾಡುವುದಾಗಿ ಎಚ್ಚರಿಸಿದರು.