Advertisement

ಉತ್ತರ ಪ್ರದೇಶದಲ್ಲಿ ಮಸೀದಿ ಒಡೆದು ಕುಂಭಮೇಳಕ್ಕಾಗಿ ದಾರಿ ಕೊಟ್ಟರು!

08:40 AM Jul 04, 2018 | Team Udayavani |

ಅಲಹಾಬಾದ್‌: ಕುಂಭಮೇಳದ ಸಂಭ್ರಮ ಕ್ಕಾಗಿ ಉತ್ತರ ಪ್ರದೇಶದ ಅಲಹಾ ಬಾದ್‌ನಲ್ಲಿರುವ ಮುಸಲ್ಮಾನರು ಮಸೀದಿ ಒಡೆದು ಸೋದರ ಪ್ರೇಮ ಮೆರೆದಿದ್ದಾರೆ. ರಸ್ತೆ ಬದಿಯಲ್ಲಿದ್ದ ಮಸೀದಿಗಳ ಗೋಡೆಗಳನ್ನು ಭಾಗಶಃ ಒಡೆದುಹಾಕಲಾಗಿದ್ದು ಈ ಮೂಲಕ ಕುಂಭಮೇಳಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

Advertisement

2019ರ ಆರಂಭದಲ್ಲಿ ಕುಂಭಮೇಳ ನಡೆಯುತ್ತಿದ್ದು, ಇದಕ್ಕಾಗಿ ಸರ್ಕಾರ ಭರ್ಜರಿ ತಯಾರಿ ನಡೆಸುತ್ತಿದೆ. ರಸ್ತೆ ಅಗಲೀಕರಣವನ್ನೂ ನಡೆಸುತ್ತಿದ್ದು ಇದಕ್ಕೆ ಬೀದಿ ಬದಿಯಲ್ಲಿನ ಮಸೀದಿಗಳು ಅಡ್ಡವಾಗಿದ್ದವು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಎಲ್ಲ ಸಮುದಾಯದವರ ಜತೆ ಮಾತುಕತೆ ನಡೆಸಿ ಮನವೊಲಿಕೆ ಮಾಡಿತ್ತು. ಇದಾದ ನಂತರ ಅವರೇ ಸ್ವಯಂ ಪ್ರೇರಣೆ ಯಿಂದ ಮಸೀದಿಯ ಗೋಡೆ ಒಡೆದಿರುವುದ ಲ್ಲದೇ, ರಸ್ತೆ ಅಗಲೀಕರಣಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ.

ಕುಂಭಮೇಳಕ್ಕಾಗಿ ರಸ್ತೆ ಅಗಲೀಕರಣ ಮಾಡುವ ಸರ್ಕಾರದ ನಿರ್ಧಾರದ ಜತೆ ನಾವಿದ್ದೇವೆ. ಹೀಗಾಗಿ ನಾವೇ ರಸ್ತೆ ಅಗಲೀಕರಣಕ್ಕೆ ಬೇಕಾದ ಮತ್ತು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮಸೀದಿ ಭಾಗಗಳನ್ನು ಒಡೆದುಹಾಕುತ್ತಿದ್ದೇವೆ ಎಂದು ಸ್ಥಳೀಯ ಮುಸಲ್ಮಾನರು ಹೇಳಿದ್ದಾರೆ.
ಅದ್ಧೂರಿ ಕುಂಭಮೇಳ: ಉತ್ತರ ಪ್ರದೇಶ ಸರ್ಕಾರ ಕುಂಭಮೇಳವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದೆ. ಕಳೆದ ಡಿಸೆಂಬರ್‌ನಲ್ಲೇ ಸಿದ್ಧತಾ ಕಾರ್ಯ ಆರಂಭವಾಗಿದ್ದವು. ರಾಜ್ಯಪಾಲ ರಾಮ್‌ನಾಯಕ್‌ ಕುಂಭಮೇಳಕ್ಕೆ  ಸ್ವಸ್ತಿಕ್‌ ಲೋಗೋ ಅನಾವರಣ ಮಾಡಿದ್ದರು. 

ಯಾವಾಗ ಕುಂಭಮೇಳ?
ಜ. 15 – ಶಾಹಿ ಸ್ನಾನ
ಫೆ.4 – ಮೌನಿ ಅಮಾವಾಸೆ
ಫೆ.10 – ಬಸಂತ್‌ ಪಂಚಮಿ

2019ರ ಆರಂಭದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಸಜ್ಜಾಗುತ್ತಿರುವ ನಗರ
ದಾರಿ ಬದಿಯ ಮಸೀದಿ ಭಾಗಶಃ ಒಡೆದು ರಸ್ತೆ ನಿರ್ಮಿಸಲು ಅನುವು

Advertisement
Advertisement

Udayavani is now on Telegram. Click here to join our channel and stay updated with the latest news.

Next