Advertisement

ಭಾರತದಲ್ಲಿ ಹಿಂದೂಗಳ ಕಾರಣದಿಂದ ಮುಸ್ಲಿಮರು ಸಂತೋಷದಿಂದಿದ್ದಾರೆ: ಮೋಹನ್ ಭಾಗವತ್

10:10 AM Oct 14, 2019 | keerthan |

ಹೊಸದಿಲ್ಲಿ: ಈ ಜಗತ್ತಿನ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವುದು ಭಾರತದಲ್ಲಿ. ಅದು ಕೂಡಾ ಹಿಂದೂಗಳ ಕಾರಣದಿಂದ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.

Advertisement

ಒರಿಸ್ಸಾದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ನಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೂ ಕೇವಲ ಒಂದು ಧರ್ಮವಲ್ಲ. ಒಂದು ಭಾಷೆಯಲ್ಲ, ಅಥವಾ ಈ ದೇಶದ ಹೆಸರಲ್ಲ. ಬದಲಾಗಿ ಭಾರತದಲ್ಲಿ ವಾಸಿಸುವ ಎಲ್ಲರ ಸಂಸ್ಕೃತಿ. ಮತ್ತು ಎಲ್ಲಾ ಧರ್ಮವನ್ನು ಇದು ಗೌರವಿಸುತ್ತದೆ ಎಂದರು.

ಯಹೂದಿಗಳಿಗೆ ರಕ್ಷಣೆ ನೀಡಿದ ಏಕೈಕ ದೇಶ ಭಾರತ. ಪಾರ್ಸಿಗಳು ಸಂತೋಶದಿಂದಲೇ ಈ ದೇಶದಲ್ಲಿ ಆಚರಣೆ ನಡೆಸುತ್ತಿದ್ದಾರೆ. ವಿಶ್ವದ ಅತ್ಯಂತ ಸುಖಿ ಮುಸ್ಲಿಮರು ಇರುವುದು ಭಾರತದಲ್ಲಿ. ಯಾಕೆಂದರೆ ನಾವು ಹಿಂದೂಗಳು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next