ಚೆನ್ನೈ: ವಿಚ್ಛೇದನ ಪಡೆಯಲು ಮುಸ್ಲಿಂ ಮಹಿಳೆಯರು ಕೇವಲ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕೇ ಹೊರತು ಶರಿಯಾ ಕೌನ್ಸಿಲ್‌ನಂಥ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಅಷ್ಟೇ ಅಲ್ಲ, ಖಾಸಗಿ ಸಂಸ್ಥೆಗಳು ನೀಡುವಂಥ ವಿಚ್ಛೇದನ (ಖುಲಾ) ಪ್ರಮಾಣ ಪತ್ರವು ಕಾನೂನಿನ ಪ್ರಕಾರ ಮಾನ್ಯತೆ ಹೊಂದಿರುವುದಿಲ್ಲ ಎಂದೂ ತಿಳಿಸಿದೆ.
ಇದನ್ನೂ ಓದಿ:ಅಮೃತ ಪೀಳಿಗೆಗೆ ಬಣ್ಣದ ಕನಸು: ಕೌಶಲಾಭಿವೃದ್ಧಿಗೆ ಮತ್ತಷ್ಟೂ ಉತ್ತೇಜನ
2017ರಲ್ಲಿ ತಮ್ಮ ಪತ್ನಿಯು ಶರಿಯಾ ಕೌನ್ಸಿಲ್‌ನಿಂದ ಪಡೆದಿರುವಂಥ ವಿಚ್ಛೇದನ ಪ್ರಮಾಣ ಪತ್ರವನ್ನು ರದ್ದುಪಡಿಸ ಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ. ಜತೆಗೆ, ತಮಿಳುನಾಡು ತೌಹೀದ್ ಜಮಾತ್‌ನ ಶರಿಯಾ ಕೌನ್ಸಿಲ್ ವಿತರಿಸಿದ್ದ ಖುಲಾ ಪ್ರಮಾಣಪತ್ರವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ವಿಷಯದಲ್ಲಿ, ಅರ್ಜಿದಾರರು ವಿಶ್ವ ಮದನ್ ಲೋಚನ್ Vs ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು (2014) ನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಅವಲಂಬಿಸಿದ್ದಾರೆ, ಇದರಲ್ಲಿ ಮೊಘಲ್ ಅಥವಾ ಬ್ರಿಟಿಷರ ಆಳ್ವಿಕೆಯಲ್ಲಿ ‘ಫತ್ವಾ’ ಯಾವುದೇ ಸ್ಥಾನಮಾನವಿರಲಿ ಅದಕ್ಕೆ ಸಂವಿಧಾನಾತ್ಮಕ ಯೋಜನೆಯಡಿಯಲ್ಲಿ ಸ್ವತಂತ್ರ ಭಾರತದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ನ್ಯಾಯಾಲಯವು ಹೇಳಿದೆ.