Advertisement
ನಗರದಲ್ಲಿ ಸೋಮವಾರ (ಸೆ.23) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಲಾದರೂ ಕಾಂಗ್ರೆಸ್ ನಾಯಕರಿಗೆ ಒಳ್ಳೆಯ ಸಂಸ್ಕೃತಿ ಬರುತ್ತದೆ. ನಾಲ್ಕು ದಿನ ಶಾಖೆಗೂ ಬರಲಿ, ಅಲ್ಲೂ ಒಳ್ಳೆಯ ಭಾಷೆ, ತಿಳಿವು ಬರುತ್ತದೆ. ದೂರ ನಿಂತು ಏನೇನೋ ತಿಳಿದುಕೊಂಡು ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದು ವಾರ ಬರಲಿ ಎಂದು ಆಹ್ವಾನ ನೀಡಿದರು.
Related Articles
Advertisement
ನೀವು ಮುಸ್ಲಿಂರ ಸೆರಗಿನಲ್ಲಿ ಕುಳಿತುಕೊಂಡು ಮಾತನಾಡಿದರೆ ಹೇಗೆ? ಅವರ ಬೆಂಬಲದಿಂದ ಅಲ್ಲವೇ ರಾಜ್ಯದಲ್ಲಿ ಹಲವು ಘಟನೆಗಳು ನಡೆಯುತ್ತಿರುವುದು. ಅವರು ವಿರುದ್ದ ಕಠಿಣ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಲ್ವಾ? ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ನೆಲಮಂಗಲ, ಗಣೇಶನಿಗೆ ಕಲ್ಲು ಕೊನೆಗೆ ಸರಕಾರ ಗಣೇಶನನ್ನು ವ್ಯಾನಿನಲ್ಲಿ ಕೊಂಡೊಯ್ಯಲಿಲ್ಲವೇ ಎಂದು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ತ್ರಿ ಒನ್ ತ್ರಿ (313) ಎನ್ನುವ ಬ್ಯಾನರ್ ದೊಡ್ಡದಾಗಿ ಕಾಣುತ್ತೆ. ಇದು ಅಲ್ ಬದರ್ ಯುದ್ಧದ ಘಟನೆ. ಆ ಯುದ್ದಲ್ಲಿ ಪೈಗಂಬರ್ ಜತೆ 313 ಜನ ಇದ್ದರು. ಆ ಯುದ್ದ ಹೇಗೆ ಗೆದ್ದರೋ ಹಾಗೆ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುವಂತಹದ್ದು, ಅದನ್ನು ತೆಗೆಯಿಸಲು ಸರಕಾರಕ್ಕೆ ಆಗಿಲ್ಲ. ಇದು ನಿರ್ವೀರ್ಯ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು