Advertisement

ಜಮೀರ್‌ಗೆ ನಿರ್ಬಂಧ: ಡಿಕೆಶಿ ವಿರುದ್ದ ಕಾಂಗ್ರೆಸ್ ಮುಸ್ಲಿಂ ಮುಖಂಡರ ಆಕ್ರೋಶ

04:55 PM Feb 16, 2022 | Team Udayavani |

ಕುಣಿಗಲ್ : ಹಿಜಾಬ್ ವಿಷಯದ ಬಗ್ಗೆ ಮಾತನಾಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿ.ಝಡ್.ಜಮೀರ್ ಅಹ್ಮದ್ ಅವರಿಗೆ ತಾಕೀತು ಪಡಿಸಿರುವುದು ಸರಿಯಲ್ಲ ಎಂದು ಮುಸ್ಲಿಂ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್‌ಅಮೀದ್, ಮುಖಂಡರಾದ ಸನಾವುಲ್ಲಾ, ಅಕ್ಬರ್‌ಬಾಷ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಜಾಬ್ ಸಂಬಂಧ ಯಾವುದೇ ವಿಷಯ ಪ್ರಸ್ತಾಪ ಮಾಡದೆಂದು ಶಾಸಕ ಜಮೀರ್ ಅಹ್ಮದ್ ಅವರನ್ನು ನಿರ್ಬಂಧಿಸಿರುವುದು ಸರಿಯಲ್ಲ, ಚುನಾವಣೆಗಳಿಗೆ ಜಮೀರ್ ಅಹ್ಮದ್ ಅವರನ್ನು ಬಳಿಸಕೊಂಡು ಪ್ರಚಾರ ಮಾಡಿಸಿ ಅವರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿಕೊಳ್ಳುತ್ತೀರ. ಈಗ ಅವರು ಅವರ ಸಮುದಾಯ ಪರವಾಗಿ ಮಾತನಾಡಲು ನಿರ್ಬಂಧ ಏಕೆ ಹೇರುತ್ತೀರಿ ಎಂದು ಪ್ರಶ್ನಿಸಿದರು.

ಹಾಗಾಗದರೇ ನಮ್ಮ ಸಮುದಾಯದ ಪರವಾಗಿ ಯಾರು ಮಾತನಾಡುತ್ತಾರೆ, ಇತರೆ ಸಮುದಾಯಗಳ ಜನರಿಗೆ ಅನ್ಯಾಯವಾದರೇ ಅವರ ಪರವಾಗಿ ಆ ಸಮುದಾಯ ಮುಖಂಡರು ಮಾತನಾಡುತ್ತಾರೆ, ಅವರನ್ನು ಏಕೆ ನಿರ್ಬಂಧಿಸುವುದಿಲ್ಲ ಎಂದು ಕಿಡಿಕಾರಿದರು, ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಕುಣಿಗಲ್ ತಾಲೂಕಿಗೆ ಬಂದು ಪ್ರಚಾರ ಮಾಡಿ ಶೇ 90 ರಷ್ಟು ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸಿದರು, ಇಂತಹ ವ್ಯಕ್ತಿಯನ್ನು ಮಾತನಾಡದಂತೆ ನಿರ್ಬಂಧಿಸಿರುವುದು ಏಕೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹರಿದಾಯ್ದಿದರು.

ವೋಟು ಕೇಳಲು ಬರಬಾರದು

Advertisement

ಕಾಂಗ್ರೆಸ್‌ನ ಮುಸ್ಲಿಂ ಶಾಸಕರು ಹಾಗೂ ಮುಖಂಡರು ಹಿಜಾಬ್ ಬಗ್ಗೆ ಮಾತನಾಡದಿದ್ದರೇ ಮುಂಬರುವ ಚುನಾವಣೆ ವೇಳೆ ಕಾಂಗ್ರೆಸ್ ಪರವಾಗಿ ಯಾರು ವೋಟು ಕೇಳಲು ಬರಬಾರದು ಎಂದು ಮುಖಂಡರಿಗೆ ತಾಕೀತು ಪಡಿಸಿದರು, ಸಮುದಾಯದ ಪರವಾಗಿ ನಿಲ್ಲದ ಮೇಲೆ ನಾವು ನಿಮ್ಮ ಪರವಾಗಿ ಏಕೆ ರಾಜಕಾರಣ ಮಾಡಬೇಕು, ಜಮೀರ್ ಅಹ್ಮದ್ ಪರವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿದರು.

ಸಮಸ್ಯೆಗೆ ಸರ್ಕಾರವೇ ಹೊಣೆ
ಉಡುಪಿ ಹಾಗೂ ಕುಂದಾಪುರ ಕಾಲೇಜುಗಳಲ್ಲಿ ಹಿಜಾಬ್ ವಿರಿದ್ದು ಕಾಣಿಸಿಕೊಂಡ ಸಮಸ್ಯೆಯನ್ನು ತಕ್ಷಣವೇ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಮಸ್ಯೆ ಬಗ್ಗೆ ಹರಿಸಬಹುದ್ದಾಗಿತ್ತು, ಆದರೆ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗಲಿಲ್ಲ ಹೀಗಾಗಿ ಅದು ರಾಜ್ಯಾಧ್ಯಂತ ವ್ಯಾಪಿಸಿದೆ, ಸಮಸ್ಯೆಯನ್ನು ಸರ್ಕಾರವೇ ಸೃಷ್ಠಿ ಮಾಡಿರುವುದು ತಪ್ಪು ಇದಕ್ಕೆ ಸರ್ಕಾರವೇ ನೇರ ಹೊಣೆಗಾರಿಕೆಯಾಗಿದೆ ಎಂದು ಆರೋಪಿಸಿದರು.

ನ್ಯಾಯಾಲಯದ ಬಗ್ಗೆ ನಂಬಿಕೆ
ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಂದು ಧರ್ಮ, ಪ್ರತಿಯೊಂದು ಸಮುದಾಯಗಳಿಗೆ ಆನೇಕ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದ್ದಾರೆ, ಅದನ್ನು ನಾವು ಗೌರವಿಸುತ್ತೇವೆ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಹೇಳಿದ ಅಬ್ದುಲ್ ಅಮೀದ್ ಹಿಜಾಬ್ ಸಂಬAಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಅಲ್ಲಿ ಇದರ ವಿರುದ್ದವಾಗಿ ತೀರ್ಪು ಬಂದರೇ ಅದನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್ಗೆ ಹೋಗುತ್ತೇವೆ, ಅಲ್ಲೂ ಸಹಾ ನ್ಯಾಯ ಸಿಗದಿದ್ದರೇ ಈ ಸಂಬAಧ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಹಿಜಾಬ್ ಸಮರ್ಥನೆ

ಮುಖಂಡ ಸನಾವುಲ್ಲಾ ಮಾತನಾಡಿ ನಮ್ಮ ಸಮುದಾಯದ ಹೆಣ್ಣು ಮಕ್ಕಳು ನೂರಾರು ವರ್ಷಗಳಿಂದ ಹಿಜಾಬ್ ಅನ್ನು ದರಿಸುತ್ತಿದ್ದಾರೆ, ಆಗ ಇದನ್ನು ವಿರೋಧಿಸಲಿಲ್ಲ, ಈಗ ಏಕೆ ವಿರೋಧಿಸುತ್ತೀದ್ದಾರೆ, ಇದನ್ನು ವಿರೋಧಿಸುವವರ ವಿರುದ್ದ ಕ್ರಮ ಜರುಗಿಸಿ, ನಮ್ಮ ಹೆಣ್ಣು ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ಸರ್ಕಾರ ರಕ್ಷಣೆ ನೀಡಬೇಕೆಂದು ಆಗ್ರಪಡಿಸಿದರು.

ಮುಖಂಡರಾದ ಕೆ.ಬಾಷ, ಅಯೂಬ್‌ಬಾಷ, ಮುಜೀಪ್‌ಬಾಷ, ಹಂಜಾನ್, ಮುನಾವರ್, ಕಾಜಾವಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next