Advertisement

ಮಸ್ಕ್ ಕಂಪನಿಯಿಂದ ಗ್ರಾಹಕರಿಗೆ ಮೊತ್ತ ವಾಪಸ್‌ !

09:38 PM Jan 04, 2022 | Team Udayavani |

ನವದೆಹಲಿ: ದೇಶದಲ್ಲಿ ಉಪಗ್ರಹ ಮೂಲಕ ಇಂಟರ್‌ನೆಟ್‌ ಸಂಪರ್ಕ ಒದಗಿಸಲು ಮುಂದಾಗಿದ್ದ ಉದ್ಯಮಿ ಎಲಾನ್‌ ಮಸ್ಕ್ ಅವರ ಕಂಪನಿ ಸ್ಟಾರ್‌ಲಿಂಕ್‌ ಗ್ರಾಹಕರಿಂದ ಪಡೆದುಕೊಂಡಿದ್ದ ಮುಂಗಡ ಮೊತ್ತವನ್ನು ವಾಪಸ್‌ ಮಾಡಲಾರಂಭಿಸಿದೆ.

Advertisement

ಈ ಬಗ್ಗೆ ಕೇಂದ್ರ ದೂರಸಂಪರ್ಕ ಸಚಿವಾಲಯದ ಆದೇಶ ಮೇರೆ ಈ ಕ್ರಮ ಕೈಗೊಳ್ಳಲಾಗಿದೆ.

ಮಸ್ಕ್ ಅವರ ಕಂಪನಿ ಸ್ಟಾರ್‌ಲಿಂಕ್‌ ಗ್ರಾಹಕರಿಗೆ ಉಪಗ್ರಹ ಮೂಲಕ ಇಂಟರ್‌ನೆಟ್‌ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮುಂಗಡ ಶುಲ್ಕ ಪಡೆದುಕೊಂಡಿತ್ತು.

ಆದರೆ, ಕಂಪನಿಗೆ ಕೇಂದ್ರ ಸರ್ಕಾರದ ವತಿಯಿಂದ ಪರವಾನಗಿ ಸದ್ಯಕ್ಕೆ ಸಿಕ್ಕಿಲ್ಲ.

ಹೀಗಾಗಿ, ಪಡೆದುಕೊಂಡಿರುವ ಮುಂಗಡ ಶುಲ್ಕ ವಾಪಸ್‌ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ.

Advertisement

ಇದನ್ನೂ ಓದಿ:ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್

 

Advertisement

Udayavani is now on Telegram. Click here to join our channel and stay updated with the latest news.

Next