Advertisement

“ಆಫೀಸಿಗೆ ಬನ್ನಿ, ಇಲ್ಲವೇ ಕೆಲಸ ಬಿಡಿ’: ಎಲಾನ್‌ ಮಸ್ಕ್

10:57 PM Jun 01, 2022 | Team Udayavani |

ವಾಷಿಂಗ್ಟನ್‌: ಕೊರೊನಾ ಬಂದಾಗಿನಿಂದ “ವರ್ಕ್‌ ಫ್ರಂ ಹೋಂ’ ಎನ್ನುತ್ತಿದ್ದ ಕಂಪನಿಗಳು ಇದೀಗ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಅಂತೆಯೇ ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್ ಕೂಡ ಮಂಗಳವಾರದಂದು ಸಂಸ್ಥೆಯ ಸಿಬ್ಬಂದಿಗೆ ಇ-ಮೇಲ್‌ ಹಾಕಿದ್ದಾರೆ.

Advertisement

“ಇನ್ನು ಮುಂದೆ ರಿಮೋಟ್‌ ವರ್ಕ್‌ ಇರುವುದಿಲ್ಲ. ಪ್ರತಿ ಸಿಬ್ಬಂದಿ ವಾರದ ಕನಿಷ್ಠ 40 ತಾಸು ಕೆಲಸದ ಅವಧಿಯನ್ನು ಕಚೇರಿಯಲ್ಲೇ ಕಳೆಯಬೇಕು. ಇಲ್ಲವಾದಲ್ಲಿ ಅಂಥವರು ಕೆಲಸ ಬಿಟ್ಟು ಹೋಗಬಹುದು’ ಎಂದಿದ್ದಾರೆ.

“ವರ್ಕ್‌ ಫ್ರಂ ಹೋಂ’ ತೀರಾ ಅವಶ್ಯಕ ಎನ್ನುವಂತವರಿದ್ದರೆ ಅವರ ಪ್ರಕರಣವನ್ನು ಖುದ್ದು ಮಸ್ಕ್ ಅವರೇ ಪರಿಶೀಲನೆ ಮಾಡಲಿದ್ದಾರೆ ಎಂದೂ ಮೇಲ್‌ನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next