Advertisement

Elon Musk: ಟ್ವಿಟರ್‌ ಪೋಸ್ಟ್‌ ನೋಡಲೂ ಮಿತಿ ಹಾಕಿದ್ದಾರೆ ಮಸ್ಕ್! 

09:12 PM Jul 02, 2023 | Team Udayavani |

ನವದೆಹಲಿ: ಟ್ವಿಟರ್‌ನಲ್ಲಿ ಬ್ಲೂಟಿಕ್‌ ಬೇಕಾ? ಹಾಗಿದ್ರೆ ಹಣ ಪಾವತಿಸಿ! ಎಕ್ಸ್ಟ್ರಾಫೀಚರ್, ಫಾಲೋವರ್ಸ್‌ ಬೇಕಾ ಹಾಗಿದ್ದರೂ ಹಣಪಾವತಿಸಿ.. ಹೀಗೆ ಸಾಮಾಜಿಕ ತಾಣ ಟ್ವಿಟರನ್ನು ಎಲಾನ್‌ ಮಸ್ಕ್ ಸಂಪೂರ್ಣ ವಾಣಿಜ್ಯಮಯ ಮಾಡಿದ್ದಾರೆ. ಈಗ ಟ್ವಿಟರ್‌ ಬಳಕೆದಾರರಿಗೆ ಮಸ್ಕ್ ಮತ್ತೂಂದು ಶಾಕ್‌ ನೀಡಿದ್ದಾರೆ..

Advertisement

ಪೋಸ್ಟ್‌ಗಳ ಮೇಲೆ ಮಿತಿ.
ಪೋಸ್ಟ್‌ಗಳಿಗೆ ನಿಯಂತ್ರಣ ಅಂದರೆ ನೀವು ಮಾಡುವ ಟ್ವೀಟ್‌ ಅಥವಾ ಪೋಸ್ಟ್‌ ಮಾತ್ರವಲ್ಲ! ನಿಮ್ಮ ಟ್ವಿಟ್ಟರ್‌ ವಾಲ್‌ಗ‌ಳಲ್ಲಿ ನೀವು ನೋಡುವ ಟ್ವೀಟ್‌ ಪೋಸ್ಟ್‌ಗಳ ಪ್ರಮಾಣದ ಮೇಲೂ ಮಸ್ಕ್ ಕಡಿವಾಣ ಹಾಕಿದ್ದಾರೆ. ಅರ್ಥಾತ್‌ ಟ್ವಿಟರ್‌ ಬಳಕೆದಾರರಾದ ನೀವು, ದಿನದಲ್ಲಿ ಎಷ್ಟು ಟ್ವೀಟ್‌ಗಳನ್ನುನೋಡಬಹುದು? ಎಷ್ಟು ಪ್ರೊಫೈಲ್‌ಗ‌ಳನ್ನು ಚೆಕ್‌ ಮಾಡಬಹುದು ಎಂಬುದಕ್ಕೆ ಮಸ್ಕ್ ಮಿತಿ ವಿಧಿಸಿದ್ದಾರೆ.

ಹೌದು, ದಿನವೊಂದರಲ್ಲಿ ನೀವು ಇಂತಿಷ್ಟೇ ಪೋಸ್ಟ್‌ಗಳನ್ನು ನೋಡಬಹುದು, ಮಿತಿ ದಾಟಿದ ತಕ್ಷಣ ಟ್ವಿಟರ್‌ ನಿಮ್ಮನ್ನು ಹೊರದಬ್ಬುತ್ತದೆ. ಅಂದರೆ, ಲಾಗ್‌ಔಟ್‌ ಆಗುತ್ತದೆ. ಆ ಬಳಿಕ ನೀವು ಯಾವುದೇ ಟ್ವೀಟ್‌ಗಳನ್ನ ಮಾಡುವುದಿರಲಿ, ನೋಡುವುದಕ್ಕೂ ಸಾಧ್ಯವಾಗುವುದಿಲ್ಲ. ಇಂಥ ವಿಚಿತ್ರವಾದ ನಿಯಮ ಈಗಾಗಲೇ ಟ್ವಿಟರ್‌ನಲ್ಲಿ ಜಾರಿಯಾಗಿದ್ದು, ಸಾವಿರಾರು ಬಳಕೆದಾರರು ತಾವು ಟ್ವೀಟ್‌ಗಳನ್ನು ನೋಡಲು ಸಾಧ್ಯವಾಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಟ್ವಿಟರ್‌ ಮಾಜಿ ಸಿಇಒ, ಟ್ವಿಟರ್‌ ಸಹ ಸಂಸ್ಥಾಪಕ ಜ್ಯಾಕ್‌ ಡೋರ್ಸೆ ಕೂಡ ಟ್ವಿಟರ್‌ ಅನ್ನು ಮುನ್ನಡೆಸುವುದು ಕಷ್ಟ ಸಾಧ್ಯ ಎಂದಿದ್ದಾರೆ.

ಮಸ್ಕ್ ಸಮರ್ಥನೆಯೇನು?
ಜಾಲತಾಣದಲ್ಲಿ ಅತಿಯಾದ ಪೋಸ್ಟ್‌ಗಳಿಂದಾಗಿ ಅಗತ್ಯವಾಗಿರುವಂಥ ಅನೇಕ ಅಮೂಲ್ಯ ಮಾಹಿತಿಗಳು ಬಳಕೆದಾರರಿಗೆ ಸಿಗದೇ ಹೋಗುತ್ತಿವೆ. ಅಂಥವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಮಸ್ಕ್ ಸಮರ್ಥನೆ ನೀಡಿದ್ದಾರೆ.

ಮಿತಿ ಎಷ್ಟು ?
ಸಾಮಾನ್ಯ ಬಳಕೆದಾರರಿಗೆ ಸದ್ಯಕ್ಕೆ ದಿನವೊಂದಲ್ಲಿ 600 ಪೋಸ್ಟ್‌ಗಳನ್ನು ನೋಡಲು ಅನುಮತಿಸಲಾಗಿತ್ತು. ವೆರಿಫೈಡ್‌ ಅಂದರೆ ಬ್ಲೂéಟಿಕ್‌ ಪಡೆದಿರುವಂಥ ಖಾತೆದಾರರಿಗೆ ದಿನಕ್ಕೆ 6 ಸಾವಿರ ಪೋಸ್ಟ್‌ಗಳನ್ನು ಸಾðಲ್‌ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ನೆಟ್ಟಿಗರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬಳಿಕ ಸಾಮಾನ್ಯರಿಗೆ 1 ಸಾವಿರ, ಬ್ಲೂéಟಿಕ್‌ ಇರುವವರಿಗೆ 10 ಸಾವಿರ ಟ್ವೀಟ್‌ಗಳ ಸಾðಲಿಂಗ್‌ಗೆ ಅವಕಾಶ ನೀಡಲಾಗಿದೆ.

Advertisement

ಮಸ್ಕ್ ಮಿತಿಗೆ ತೀವ್ರ ಟ್ರೋಲ್‌
ಟ್ವೀಟ್‌ ಮಿತಿ ಪರಿಚಯವಾಗುತ್ತಿದ್ದಂತೆ ಜಾಲತಾಣದಾದ್ಯಂತ ಹೊಸ ನೀತಿಯ ಬಗ್ಗೆ ಹಲವಾರು ಟೀಕೆಗಳು, ಟ್ರೋಲ್‌ಗ‌ಳು ಶುರುವಾಗಿವೆ. ಹಲವು ನೆಟ್ಟಿಗರು ಇದೊಂಥರಾ ಹುಚ್ಚು ನೀತಿ ಎಂದು ಬಣ್ಣಿಸಿದರೆ, ಇನ್ನೂ ಹಲವರು ಪೋಸ್ಟ್‌ ನೋಡಲೂ ಮುಂದೆ ಹಣ ಪಾವತಿಸುವ ಸ್ಕೀಮ್‌ ಬರಬಹುದು ಎಂದಿದ್ದಾರೆ. ಮತ್ತಷ್ಟು ವಿಡಿಯೊಗಳಲ್ಲಿ ಟ್ವಿಟರ್‌ನಿಂದ ಲಾಗ್‌ಔಟ್‌ ಆಗುತ್ತಿದ್ದಂತೆ ಜನರು ಇನ್‌ಸ್ಟಾಗ್ರಾಮ್‌ನತ್ತ ಹೇಗೆ ಓಡುವರು ಎಂಬುವಂಥ ಫ‌ನ್‌ ವಿಡಿಯೊಗಳನ್ನೂ ಹರಿಬಿಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next