Advertisement
ಅತ್ತ ಟ್ವಿಟರ್ ಮಸ್ಕ್ ಮಡಿಲಿಗೆ ಬೀಳುತ್ತಿದ್ದಂತೆ, ಇತ್ತ ಟ್ವಿಟರ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಾರತ ಮೂಲದ ಅಧಿಕಾರಿಗಳಾದ ಸಿಇಒ ಪರಾಗ್ ಅಗರ್ವಾಲ್, ಕಾನೂನು ಸಲಹೆಗಾರ್ತಿ ವಿಜಯ ಗದ್ದೆ ಮಾತ್ರವಲ್ಲದೇ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಸೆಯಾನ್ ಇಡೆjಟ್ ಅವರನ್ನು ವಜಾ ಮಾಡ ಲಾಗಿದೆ. ಜತೆಗೆ, ಹೊಸ ಮಾಲೀಕ ಮಸ್ಕ್ ಅವರು “ದ ಬರ್ಡ್ ಈಸ್ ಫ್ರೀ’ (ಹಕ್ಕಿ ಈಗ ಸ್ವತಂತ್ರಗೊಂಡಿದೆ) ಎಂದು ಮೊದಲ ಟ್ವೀಟ್ ಮಾಡಿದ್ದಾರೆ.
Related Articles
Advertisement
ಸಿಬಂದಿ ಜತೆಗೂಡಿ ಹೊರ ನಡೆದರು: ಖರೀದಿ ಪ್ರಕ್ರಿಯೆ ವೇಳೆ ವಜಾಗೊಂಡ ಅಗರ್ವಾಲ್ ಸಹಿತ ಎಲ್ಲ ನಾಲ್ವರು ಅಧಿಕಾರಿಗಳೂ ಟ್ವಿಟರ್‌ನ ಪ್ರಧಾನ ಕಚೇರಿ ಯಲ್ಲಿಯೇ ಇದ್ದರು. ಪ್ರಕ್ರಿಯೆ ಮುಗಿದಾಗ ಅಗರ್ವಾಲ್, ಸೆಗಾಲ್‌ರನ್ನು ವಜಾಗೊಳಿಸಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಭದ್ರತಾ ಸಿಬಂದಿ ಜತೆಗೂಡಿ ಅವರಿಬ್ಬರನ್ನು ಕಚೇರಿಯ ಮುಖ್ಯ ದ್ವಾರದವರೆಗೆ ಕಳುಹಿಸಿಕೊಡಲಾಯಿತು.
ಪರಾಗ್‌ಗೆ 321 ಕೋಟಿ ರೂ.ಟ್ವಿಟರ್ ಸಿಇಒ ಹುದ್ದೆಯಿಂದ ವಜಾಗೊಂಡಿರುವ ಪರಾಗ್ ಅಗರ್ವಾಲ್ ಅವರಿಗೆ 321 ಕೋಟಿ ರೂ. ಪರಿಹಾರ ಸಿಗಲಿದೆ. ಅವರ ಮೂಲ ವೇತನ, ಈಕ್ವಿಟಿ ಪಾವತಿ ಸೇರಿದಂತೆ ನೀಡಬೇಕಾಗಿರುವ ಎಲ್ಲÉ ಭತ್ಯೆ ಗಳು ಇದರಲ್ಲಿ ಒಳಗೊಂಡಿವೆ ಎಂದು ಸಂಶೋಧನ ಸಂಸ್ಥೆ ಈಕ್ವಿಲರ್ ನಡೆಸಿದ ಅಧ್ಯಯನದಲ್ಲಿ ಉಲ್ಲೇಖೀ ಸಲಾಗಿದೆ. ಪರಾಗ್ ಅಗರ್ವಾಲ್ ಅವರು ಐಐಟಿ ಬಾಂಬೆ ಮತ್ತು ಸ್ಟಾನ್‌ಫೋರ್ಡ್ ವಿ.ವಿ.ಯ ಹಳೆ ವಿದ್ಯಾರ್ಥಿ. ದಶಕದ ಹಿಂದೆ ಅವರು ಟ್ವಿಟರ್‌ಗೆ ಸೇರ್ಪಡೆಯಾಗಿದ್ದರು. ಕಾನೂನು ಪಾಲಿಸಲೇಬೇಕು
ಟ್ವಿಟರ್‌ನ ಮಾಲಕರು ಯಾರೇ ಆದರೂ ನಮ್ಮ ನಿಯಮಗಳಲ್ಲಿ ಬದಲಾವಣೆ ಆಗುವುದಿಲ್ಲ. ಭಾರತದ ಕಾನೂನುಗಳನ್ನು ಎಲ್ಲರೂ ಪಾಲಿಸಲೇಬೇಕು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಹೇಳಿ ದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಟ್ವೀಟ್ ಮಾಡಿ, “ಟ್ವಿಟರ್ ಸಂಸ್ಥೆಯು ದ್ವೇಷಭಾಷಣದ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ. ವಜಾ ನಿರ್ಧಾರದ ಹಿಂದೆ
ಪರಾಗ್ ಅಗರ್ವಾಲ್ ಮತ್ತು ಮಸ್ಕ್ ನಡುವೆ ಹಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಟ್ವಿಟರ್‌ನ ಫೇಕ್ ಖಾತೆಗಳ ಬಗ್ಗೆ ಪರಾಗ್ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಈ ಹಿಂದೆ ಮಸ್ಕ್ ಆರೋಪಿಸಿದ್ದರು. ಇದಕ್ಕೆ ಅಗರ್ವಾಲ್ ಅವರು ಅಂಕಿಅಂಶಗಳೊಂದಿಗೆ ವಿವರಣೆ ನೀಡಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮಸ್ಕ್ “ಮಲ’ದ ಇಮೋಜಿಯನ್ನು ಅಪ್‌ಲೋಡ್ ಮಾಡಿದ್ದರು. ಇನ್ನು, ಕಾನೂನು ವಿಭಾಗದ ಅಧಿಕಾರಿ, ಭಾರತ ಮೂಲದ ವಿಜಯ ಗದ್ದೆ ಬಗ್ಗೆ ಕೂಡ ಮಸ್ಕ್ ಒಲವು ಹೊಂದೀರಲಿಲ್ಲ. ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ದಂಗೆಗೆ ಕಾರಣರಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೀವನ ಪರ್ಯಂತ ಟ್ವಿಟರ್‌ನಲ್ಲಿ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದು ವಿಜಯ ಗದ್ದೆ. ಅವರ ನಿರ್ಧಾರದ ಬಗ್ಗೆಯೂ ಮಸ್ಕ್ ಸಹಮತ ಹೊಂದಿರಲಿಲ್ಲ. ಜತೆಗೆ, “ಬ್ರಾಹ್ಮಣಶಾಹಿ ಅಧಿಪತ್ಯವನ್ನು ಕೊನೆಗೊಳಿಸಿ’ ಎಂಬ ಅಭಿ ಯಾನಕ್ಕೆ ಬೆಂಬಲ ನೀಡುವ ಮೂಲಕ ವಿಜಯ ಗದ್ದೆ ಅವರು ಎಡಪಂಥೀಯರ ಪರ ಎಂಬ ಆರೋಪವನ್ನು ಎದುರಿಸಿದ್ದರು. ಇದು ಕೂಡ ಮಸ್ಕ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.