ಚಿತ್ತಾಪುರ: ವಿಧ್ಯಾರ್ಥಿಗಳು ಸಂಗೀತ ಜ್ಞಾನ ಬೆಳೆಸಿ ಕೊಳ್ಳವುದು ಅಗತ್ಯವಾಗಿದೆ ಎಂದು ನಿಡಗುಂದಾ ಮೊರಾರ್ಜಿ ವಸತಿ ಶಾಲೆ ಸಂಗೀತ ಶಿಕ್ಷಕ ರೇವಣ ಸಿದ್ಧಯ್ಯ ಸ್ವಾಮಿ ಹೇಳಿದರು.
ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಜ್ಞಾನ ಜ್ಯೋತಿ ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಸಂಗೀತ ತರಗತಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂಗೀತಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದರು.ಸರಿಗಮಪ ಸೀಜನ್ ಕಾರ್ಯಕ್ರಮದಲ್ಲಿ ಅನೇಕ ಚಿಕ್ಕಮಕ್ಕಳು ಹಾಡಿ ಉತ್ತಮ ಕಲಾವಿದರಾಗುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಬಹುದು, ಉತ್ತಮ ಕಲಾವಿದ ಆಗಬಹುದು, ಕೇಂದ್ರ ಸರ್ಕಾರದಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಅನೇಕ ಉದ್ಯೋಗ ಪಡೆದುಕೊಳ್ಳಬಹುದು. ಪಠ್ಯದ ಜೊತೆಗೆ ಸಂಗೀತ ಜ್ಞಾನ ಅಳವಡಿಸಿಕೊಳ್ಳಲು ಜ್ಞಾನ ಜ್ಯೋತಿ ಶಾಲೆ ಅಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ ಲೊಡ್ಡೇನೋರ್ ಮಾತನಾಡಿ, ಗ್ರಾಮೀಣ ಮಕ್ಕಳು ಸಂಗೀತ ಕಲಿಕೆಯಿಂದ ವಂಚನೆಯಾಗಬಾರದು ಎಂಬ ಉದ್ದೇಶದಿಂದ ಶಾಲೆಯಲ್ಲಿ ತರಗತಿ ಆರಂಭಿಸಲಾಗಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಶಾಲೆ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಅಧ್ಯಕ್ಷತೆ ವಹಿಸಿದ್ದರು. ತಬಲಾ ಕಲಾವಿದ ರಾಜಶೇಖರ ಸ್ವಾಮಿ, ಸಂಗೀತ ಕಲಾವಿದ ದೇವಿಂದ್ರಪ್ಪ ಬಳೊಬಾ, ಶಾಲೆ ಅಬಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಸ್ವಾಮಿ, ಸದಸ್ಯರಾದ ಅಯುಬ್ ಖಾನ್, ರಾಜಶೇಖರ ವಿಶ್ವಕರ್ಮ, ಅನಸೂಯಾ, ಕೀರ್ತಿ, ವೆಂಕಟೇಶ, ಸಾವಿತ್ರಿ, ಶ್ವೇತಾ, ಮಂಜುಳಾ, ಶಾಂತಮ್ಮ ಹಾಗೂ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.ಶಿಕ್ಷಕಿ ಮೈಮೂನ್ನಾ ಬೇಗಂ ಸ್ವಾಗತಿಸಿದರು, ಮುಖ್ಯಶಿಕ್ಷಕಿ ಲಿಂಗಣ್ಣ ಮಲ್ಕನ್ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಬಸವರಾಜ ಹೊಟ್ಟಿ ನಿರೂಪಿಸಿ, ವಂದಿಸಿದರು.