Advertisement
ಸಂಗೀತವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆಪಠ್ಯದೊಂದಿಗೆ ಸಂಗೀತವನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸಂಗೀತವನ್ನು ಸರಳವಾಗಿ ಆಲಿಸುವಾಗ ಉತ್ತಮ ನರ ಸಂಸ್ಕರಣೆಯನ್ನು ಕಾಣಬಹುದೆಂದು ಅಧ್ಯಯನ ಕಂಡು ಹಿಡಿದಿದೆ.ಸಂಗೀತದಲ್ಲಿ ತೊಡಗಿರುವ ಇತರ ಅಧ್ಯಯನಗಳು ಮಕ್ಕಳಲ್ಲಿ ಐಕ್ಯೂ ಪಾಯಿಂಟ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ. ಎಲ್ಲ ಮಕ್ಕಳಿಗೆ ಓದುವುದು ಒಂದು ಪ್ರಮುಖ ಕೌಶಲವಾಗಿದ್ದು. ಎಲ್ಲ ವಿಷಯಗಳನ್ನು ಗ್ರಹಿಸಲು ಸಂಗೀತ ಸಹಕರಿಸುತ್ತದೆ.
ಸಂಗೀತ ಶಿಕ್ಷಣವೂ ಮುಖ್ಯವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಇತರ ಜನರೊಂದಿಗೆ ಸಂಪರ್ಕ ಸಾಧಿಸಲು ಒಂದು ಮಾರ್ಗವನ್ನು ನೀಡುತ್ತದೆ. ಶಾಲಾ ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇದು ಪ್ರೇರೇಪಿಸುವುದಲ್ಲದೆ, ಎಲ್ಲ ವಯಸ್ಸಿನ ಜನರೊಡನೆ ಬೆರೆಯಲು ಮತ್ತು ಉತ್ತಮ ಸಂಬಂಧವನ್ನು ಬೆಸೆಯಲು ಸಹಕರಿಸುತ್ತದೆ. ಸಂಗೀತವು ವಿವಿಧ ವಿಷಯಗಳನ್ನು ಸಂಯೋಜಿಸುತ್ತದೆ
ಸಂಗೀತ ಶಿಕ್ಷಣವು ಒಂದೇ ಬಾರಿಗೆ ಹಲವಾರು ವಿಭಿನ್ನ ವಿಷಯ ಕ್ಷೇತ್ರಗಳನ್ನು ಸಂಯೋಜಿಸುತ್ತದೆ. ಸಂಗೀತ ಶಿಕ್ಷಣವು ಮಕ್ಕಳಿಗೆ ಸಂಗೀತ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವುದಲ್ಲದೆ, ಅವರ ಗಣಿತ ಕೌಶಲ , ಓದುವ ಮತ್ತು ಬರೆಯುವ ಕೌಶಲ, ವಿಜ್ಞಾನ,ಇತಿಹಾಸ ಜ್ಞಾನದ ಬಗ್ಗೆ ಹೆಚ್ಚಿನ ಒಲವು ನೀಡುತ್ತದೆ.
Related Articles
ಸಮಯ ನಿರ್ವಹಣೆ, ಕೌಶಲ, ಮತ್ತು ಶಿಸ್ತನ್ನು ಬೆಳೆಸಲು ಸಂಗೀತವು ಮಕ್ಕಳಿ ಮತ್ತು ಕಲಿಸುತ್ತದೆ.
Advertisement
ಸಂಗೀತವು ಒತ್ತಡವನ್ನು ನಿವಾರಿಸುತ್ತದೆಒತ್ತಡವನ್ನು ನಿವಾರಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ. ಇದು ಶಾಲಾ ಪಠ್ಯೇತರ ಚಟುವಟಿಕೆಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತವೆ.ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.ಸಂಗೀತ ಆಲಿಸುವುದರಿಂದ ಕೇಂದ್ರೀಕೃತ ಕಲಿಕೆಯ ವತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಸಂಗೀತ ತರಬೇತಿ ಭಾಷೆ ಮತ್ತು ತಾರ್ಕಿಕತೆಯನ್ನು ಅಭಿವೃದ್ದಿ ಪಡಿಸಲು ಸಹಾಯ ಮಾಡುತ್ತದೆ
ಮೆದುಳಿನ ಉತ್ತಮ ಅಭಿವೃದ್ಧಿಯಿಂದಾಗಿ ಮನಸ್ಸಿನ ಮಾಹಿತಿಯನ್ನು ಮುಗರಿಸಲು ಸಂಗೀತ ಸಹಾಯ ಮಾಡುತ್ತದೆ. ಕಂಠಪಾಠ ಪಾಂಡಿತ್ಯವನ್ನು ಹೆಚ್ಚಿಸುತ್ತದೆ
ಸಂಗೀತದಿಂದ ಅಗತ್ಯ ಪಠ್ಯವನ್ನು ಕಂಠಪಾಠ ಮಾಡುವ ಕೌಶಲ ಹೆಚ್ಚುತ್ತದೆ.ಮತ್ತು ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಸುಧಾರಿಸಲು ಕಲಿಯುತ್ತಾರೆ. ಸಂಗೀತ ಕರಕುಶಲತೆಯನ್ನು ಉತ್ತೇಜಿಸುತ್ತದೆ ಮತ್ತು ಸಾದಾರಣ ಕೆಲಸದ ಬದಲು ಉತ್ತಮ ಕೆಲಸವನ್ನು ರೂಪಿಸಲು ಸಹಕರಿಸುತ್ತದೆ. ಸಾಧನೆಯ ಪ್ರಜ್ಞೆ ಹೆಚ್ಚುತ್ತ¨. ಜತೆಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಭಾವನಾತ್ಮಕ ಬೆಳವಣಿಗೆ: ಸಂಗೀತದಿಂದ ವಿದ್ಯಾರ್ಥಿಗಳು ಹೆಚ್ಚು ಭಾವನಾತ್ಮಕವಾಗಿ ಅಭಿವೃದ್ಧಿ ಹೊಂದುತ್ತಾರೆ.ಮತ್ತು ಆತಂಕವನ್ನು ನಿಭಾಯಿಸುವಲ್ಲಿ ಉತ್ತಮರಾಗಿರುತ್ತಾರೆ. ಸೃಜನಶೀಲ ಚಿಂತನೆಯಲ್ಲಿ ಅಭಿವೃದ್ಧಿ: ಕಲೆಯ ಜತೆಗೆ ಕಲಿಕೆಯಿಂದ ಮಕ್ಕಳು ಸೃಜನಾತ್ಮಕವಾಗಿ ಯೋಚಿಸಲು ಕಲಿಯಬಹುದು. ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಲು ಸಹರಿಸುತ್ತದೆ. ಮತ್ತು ಕಾರ್ಯ ಸಾಧನೆಯಲ್ಲಿ ಯಶಸ್ವಿಯಾಗಲು , ತಮ್ಮ ಸಾಮಾರ್ಥ್ಯವನ್ನು ತಲುಪಲು ಸಹಾಯ ಮಾಡುತ್ತದೆ.ಜತೆಗೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.