ಢಾಕಾ: ಬಾಂಗ್ಲಾದೇಶ ಬ್ಯಾಟ್ಸ್ ಮ್ಯಾನ್ ಮುಶ್ಫಿಕರ್ ರಹೀಮ್ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಬುಧವಾರ ಅಪರೂಪದ ಔಟ್ ಗೆ ಗುರಿಯಾದರು.
ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಮುಶ್ಫಿಕರ್ ಅವರು ನ್ಯೂಜಿಲ್ಯಾಂಡ್ ನ ಕೈಲ್ ಜೇಮಿಸನ್ ಎಸೆದ ಚೆಂಡು ಸ್ಟಂಪ್ ನತ್ತ ಹೋಗುತ್ತಿರುವಾಗ ಕೈ ಹಾಕಿ ತಡೆದು ನಿಲ್ಲಿಸಿದರು. ಅಂಪೈರ್ ಔಟ್ ನೀಡಿದರು.
ಮುಶ್ಫಿಕರ್ ಈ ರೀತಿ ಔಟಾದ ಬಾಂಗ್ಲಾದ ಮೊದಲ ಆಟಗಾರ ಎನಿಸಿಕೊಂಡರು. ಈ ಹಿಂದೆ ಮೊಹಿಂದರ್ ಅಮರನಾಥ್, ಮೊಹ್ಸಿನ್ ಖಾನ್, ಮೈಕೆಲ್ ವಾನ್, ಮುಂತಾದವರು ಇದೆ ರೀತಿ ಅಪರೂಪದ ಔಟಾದ ಪಟ್ಟಿಯಲ್ಲಿರುವ ಕ್ರಿಕೆಟಿಗರು. ಮುಶ್ಫಿಕರ್ ಬಾಲ್ ಗೆ ಕೈ ಹಾಕಿ ಔಟಾದ 11 ನೇ ಆಟಗಾರರ ಎನಿಸಿಕೊಂಡರು. ಬಾಂಗ್ಲಾದ ಮೊದಲ ಇನ್ನಿಂಗ್ಸ್ ನಲ್ಲಿ ಮುಶ್ಫಿಕರ್ ಅವರದ್ದೇ 35 ರನ್ ಗರಿಷ್ಠ ಸ್ಕೋರ್.
ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 172 ರನ್ ಗಳಿಗೆ ಆಲೌಟಾಯಿತು. ನ್ಯೂಜಿಲ್ಯಾಂಡ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದು12 ಓವರ್ ಗಳಲ್ಲಿ 51 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.