Advertisement

ಜರ್ಮನ್‌: ಧಾರ್ಮಿಕ ಕೇಂದ್ರ, ಮ್ಯೂಸಿಯಂ ತೆರೆಯಲು ಅನುಮತಿ

02:47 PM May 02, 2020 | sudhir |

ಜರ್ಮನಿ: ಜರ್ಮನ್‌ನಲ್ಲೂ ಸೋಂಕು ಪ್ರಸರಣ ಕಡಿಮೆಯಾದ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್‌ ನಿರ್ಬಂಧದಲ್ಲಿ ಮತ್ತಷ್ಟು ಸಡಿಲಿಕೆ ಮಾಡಿದೆ.

Advertisement

ಸದ್ಯ ದೇಶದಲ್ಲಿ ಸೋಂಕು ಪ್ರಸರಣ ಪ್ರಮಾಣ ಶೇ.1.0ಕ್ಕಿಂತ ಕಡಿಮೆ ಇದ್ದು, ಮರಣ ಪ್ರಮಾಣದಲ್ಲಿ ಶೇ. 4ರಷ್ಟು ಕಡಿತವಾಗಿದೆ. ಈ ಹಿನ್ನೆಲೆ ದೇಶದಲ್ಲಿನ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸುತ್ತಿದ್ದು, ಧಾರ್ಮಿಕ ಕೇಂದ್ರ, ಮ್ಯೂಸಿಯಂ ಹಾಗೂ ಮೃಗಾಲಯಗಳನ್ನು ತೆರೆಯಲು ಸಮ್ಮತಿಸಲಾಗಿದೆ.

ನೈರ್ಮಲ್ಯ ಕಾಪಾಡಿಕೊಳ್ಳಿ
ಸೋಂಕು ಹರಡುವುದನ್ನು ತಡೆಗಟ್ಟಲು ನಿಗದಿತ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯ ಎಂದಿರುವ ಸರಕಾರ, ಧಾರ್ಮಿಕ ಕೇಂದ್ರ, ಮ್ಯೂಸಿಯಂ ಹಾಗೂ ಮೃಗಾಲಯಗಳ ಪ್ರವೇಶದ್ವಾರದಲ್ಲಿ ಸ್ಯಾನಿಟೇಜರ್‌ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದು, ಎಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆಯೂ ಆದೇಶ ಹೊರಡಿಸಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ಈಗಾಗಲೇ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಂದಿನ ಹಂತದಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ತೆರೆಯಲು ಅನುಮತಿನ ನೀಡಬೇಕೋ ಬೇಡವೋ ಎಂಬುದನ್ನು ಮೇ 6ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಸರಕಾರ ಹೇಳಿದೆ.

ಕೆಲ ವಾರಗಳಿಂದ ಬಂದ್‌ ಆಗಿದ್ದ ಮಕ್ಕಳ ಆಟದ ಮೈದಾನಗಳನ್ನು ಹಾಗೂ ಪಾರ್ಕ್‌ಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ್ದು, ಸೋಂಕು ತಗುಲದಂತೆ ಜಾಗ್ರತೆ ವಹಿಸುವಂತೆ ಪೋಷಕರಿಗೆ ಸೂಚಿಸಿದೆ.

Advertisement

ಕೋವಿಡ್‌-19ನಿಂದ ದೇಶಕ್ಕೆ ಎದುರಾಗಿರುವ ಕಷ್ಟಗಳನ್ನು ಪರಿಹರಿಸಲು 10 ಮಿಲಿಯನ್‌ (ಜರ್ಮನ್‌ ರೂಪಾಯಿ ಮೌಲ್ಯ) ಮೊತ್ತದ ಆರ್ಥಿಕ ನೆರವನ್ನು ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next