Advertisement
ಮ್ಯೂಸಿಯಂನಲ್ಲಿ ಏನೇನಿದೆ?ಬಳ್ಳಾರಿ ಎಸ್‌ಪಿ ಕಚೇರಿ ಆವರಣದ ನವೀಕೃತ ಹಳೆಯ ಕಟ್ಟಡದಲ್ಲಿ ಈ ಪೊಲೀಸ್ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಮುಟ್ಟುಗೋಲು ಹಾಕಿದ್ದ ಚಿನ್ನಾಭರಣಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಹಳೆಯ ಕಾಲದ ತಕ್ಕಡಿ, ದೂರದ ವಸ್ತು-ವ್ಯಕ್ತಿಗಳನ್ನು ಹತ್ತಿರವಾಗಿ ಸ್ಪಷ್ಟವಾಗಿ ನೋಡುವ ಬೈನಾಕುಲರ್, ರಿಜಿಸ್ಟರ್ ಪುಸ್ತಕ, ವಾದ್ಯವೃಂದ ಸಲಕರಣೆ (ಬ್ಯಾಂಡ್ ಸೆಟ್), ಹಿಂದಿನ ಕಾಲದಿಂದ ಇದುವರೆಗಿನ ಪೊಲೀಸ್ ಸಮವಸ್ತ್ರ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 1960ರಿಂದ 1980ರ ನಡುವೆ ಬಳಸಿದ್ದ ಎಫ್‌ಎಂ 713 ವಾಕಿಟಾಕಿ, ಆಪಾದಿತರ ಬಂಧನ ಹಾಗೂ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಬಳಸುತ್ತಿದ್ದ ಕೈಕೋಳ, ಲೀಡಿಂಗ್ ಚೈನ್, ಭದ್ರತೆ ನೀಡುವಾಗ ದೇಹ, ಕೈ, ಕಾಲುಗಳ ರûಾಕವಚಗಳು, ಹೆಲ್ಮೆಟ್, ನಿಷಿದ್ಧ-ನಿಷೇಧಿ ತ ವಸ್ತುಗಳನ್ನು ಪತ್ತೆ ಹಚ್ಚುವ ಹ್ಯಾಂಡ್ ಹೆಲ್ಪ್ ಮೆಟಲ್ ಡಿಟೆಕ್ಟರ್, ವಿವಿಧ ರೀತಿಯ ಬಂದೂಕು, ಪಿಸ್ತೂಲ್, ಬ್ರಿಟಿಷರ ಅವಧಿ ಯಲ್ಲಿನ ಗಂಟೆ ಬಾರಿಸುವ ವಿವಿಧ ರೀತಿಯ ಗೋಡೆ ಗಡಿಯಾರಗಳು ಸೇರಿದಂತೆ ಇನ್ನಿತರ ನೂರಾರು ವರ್ಷಗಳ ಹಿನ್ನೆಲೆಯುಳ್ಳ ವಸ್ತುಗಳು ನೋಡುಗರಲ್ಲಿ ಕುತೂಹಲ ಮೂಡಿಸುತ್ತವೆ.
ದೇಶದಲ್ಲಿ ಪೊಲೀಸ್ ವ್ಯವಸ್ಥೆ 184 ವರ್ಷಗಳ ಇತಿಹಾಸ ಹೊಂದಿದೆ. 1838ನೇ ಸಾಲಿನ ವರದಿ ಪ್ರಕಾರ ಆರಂಭದಲ್ಲಿ ಪೊಲೀಸರು ನಿರ್ವಹಿಸ ಬೇಕಿದ್ದ ಕೆಲಸವನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಅಮರಗಾರರು, ಅಂಕಮಾಲೆ, ಪಟೇಲ್, ಶಾನುಭಾಗ್ ಸೇರಿ ಹಲವರು ನಿರ್ವಹಿಸುತ್ತಿದ್ದರು. ಅನಂತರ ಸುಧಾರಣೆಯಾದ ಪೊಲೀಸ್ ವ್ಯವಸ್ಥೆಯಲ್ಲಿ 1847ರಲ್ಲಿ ಹೈದರಾಬಾದ್ ಪೊಲೀಸ್ ವ್ಯವಸ್ಥೆ, 1857ರಲ್ಲಿ ಮದ್ರಾಸ್ ಪೊಲೀಸ್, 1883ರಲ್ಲಿ ಮೈಸೂರು ಪೊಲೀಸ್, ಬಾಂಬೆ, ಕೊಡಗು ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿವೆ. ರಿವಾಲ್ವರ್-ಪಿಸ್ತೂಲ್ ಪ್ರದರ್ಶನ
ಪೊಲೀಸ್ ಇಲಾಖೆಯ ಅತ್ಯಂತ
ಪ್ರಮುಖ ಆಯುಧ ಪಿಸ್ತೂಲ್ ಬಂದೂಕುಗಳಾಗಿದ್ದು ಮ್ಯೂಸಿ ಯಂನಲ್ಲಿ ಮಹಾಯುದ್ಧಗಳಲ್ಲಿ ಬಳಕೆ ಯಾಗಿದ್ದ ಮಾದರಿಯ ಬಂದೂಕು, ಪಿಸ್ತೂಲ್, ರಿವಾಲ್ವರ್‌ಗಳಾದ 303 ನಂ.1 ಮಾರ್ಕ್ ರೈಫಲ್, 303 ನಂ.4 ಮಾರ್ಕ್ ರೈಫಲ್, ನಂ.5 ಮಾರ್ಕ್ ರೈಫಲ್, 455 ರಿವಾಲ್ವರ್, 38 ರಗೇರ್ ರಿವಾಲ್ವರ್, 38 ರಿವಾಲ್ವರ್ ಮಿನಿ, 410 ಮಸ್ಕೆಟ್ ಬಂದೂಕು, 45 ಸಿಎಂಟಿ (ಕಾರ್ಬನ್ ಮಷಿನ್ ಥಾಂಪ್ಸನ್ ಗನ್) ಪ್ರದರ್ಶಿಸಲಾಗಿದೆ. ಬಾಡಿ ಪ್ರೊಟೆಕ್ಟರ್ (ದೇಹ ರಕ್ಷಾ ಕವಚ), ಲೆಗ್ ಪ್ರೊಟೆಕ್ಟರ್, ಹ್ಯಾಂಡ್ ಪ್ರೊಟೆಕ್ಟರ್, ಹೆಲ್ಮೆಟ್‌ಗಳನ್ನೂ ಇಲ್ಲಿ ನೋಡಬಹುದಾಗಿದೆ. ಹೀಗೆ ಬ್ರಿಟಿಷರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಇಲಾಖೆಯ ಕಡತಗಳು, ಗಡಿಯಾರಗಳು, ಬ್ಯಾಡ್ಜ್ಗಳು, ಪೊಲೀಸರಿಗೆ ಬಡ್ತಿಯಾದಾಗ ನೀಡುವ ಸ್ಟಾರ್‌ಗಳ ಮಾಹಿತಿ ಯನ್ನು ಮ್ಯೂಸಿಯಂನಲ್ಲಿ ತಿಳಿಯಬಹು ದಾಗಿದೆ. ಹೊಸದಾಗಿ ಇಲಾಖೆಗೆ ಸೇರುವ ಪೊಲೀಸ್ ಸಿಬಂದಿಗಳಿಗೆ ಒಳ್ಳೆಯ ಮಾಹಿತಿ ನೀಡಲಿದೆ.
Related Articles
Advertisement