ಬಜಪೆ: ಬಜಪೆ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಸಲೀಂ ಅವರು ಡೆನ್ಮಾರ್ಕ್‌ನಲ್ಲಿ ಜು. 22ರಿಂದ 28ರ ವರೆಗೆ ನಡೆಯುವ 19ರ ವಯೋಮಿತಿಯ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾಟಕ್ಕೆ ಗೋಲ್ ಕೀಪರ್ ಆಗಿ ಆಯ್ಕೆ ಯಾಗಿದ್ದಾರೆ. ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿ ಎಂಬುದು ವಿಶೇಷ.
ಭಾರತೀಯ ಫುಟ್ಬಾಲ್ ತಂಡ ಜು.18ರಂದು ಹೊರಡ ಲಿದೆ. ಈಗಾಗಲೇ ಹೊಸದಿಲ್ಲಿಯಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು ಮುಸ್ಕಾನ್ ಸಲೀಂ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ .
ಎ. 15ರಿಂದ 19ರ ವರೆಗೆ ಹೊಸದಿಲ್ಲಿಯಲ್ಲಿ ನಡೆದ ಅಂಡರ್-19 ರಾಷ್ಟ್ರೀಯ ಫುಟ್ಬಾಲ್ ಪಂದ್ಯಾಟದಲ್ಲಿ ಬಜಪೆಯ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿತ್ತು. ಇದರಲ್ಲಿ ಬೆಸ್ಟ್ ಗೋಲ್‌ಕೀಪರ್ ಪ್ರಶಸ್ತಿಯನ್ನು ಮುಸ್ಕಾನ್ ಸಲೀಂ ಪಡೆದಿದ್ದರು. ಈ ಕಾರಣಕ್ಕಾಗಿ ನ್ಯಾಶನಲ್ ಫುಟ್ಬಾಲ್ ಅಸೋಸಿಯೇಶನ್‌ಆಯ್ಕೆ ಸಮಿತಿ ಅವರನ್ನು ಗೋಲ್‌ಕೀಪರ್ ಆಗಿ ಆಯ್ಕೆ ಮಾಡಿದೆ.
ಮುಸ್ಕಾನ್ ಬಜಪೆ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಆವರಿಂದ ತರಬೇತು ಪಡೆಯುತ್ತಿದ್ದಾರೆ.
ಅಂಡ್‌ಮಾನ್ ನಿಕೋಬಾರ್ ಹಾಗೂ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಮುಸ್ಕಾನ್ ಸಲೀಂ ಅವರು ಗೋಲ್‌ಕೀಪರ್ ಆಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.
ಬಜಪೆ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಫುಟ್ಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈಗಾ ಗಲೇ ಹಲವಾರು ಪ್ರಶಸ್ತಿಯನ್ನು ಗೆದ್ದಿದೆ. ಅದರಲ್ಲೂ ಹುಡುಗಿಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೆಚ್ಚಿನ ಸಾಧನೆ ಮಾಡಿದೆ.