Advertisement
ಜಿಲ್ಲಾ ಮಕ್ಕಳ ರಕ್ಷಣ ಘಟಕದ ದೂರಿನನ್ವಯ ಮಠದ ಶ್ರೀ ಸಹಿತ ವಸತಿ ನಿಲಯದ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ, ಪರಮಶಿವಯ್ಯ, ವಕೀಲ ಗಂಗಾಧರಯ್ಯ ಅವರ ವಿರುದ್ಧ ಪೋಕೊÕà ಕಾಯಿದೆಯಡಿನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement
ಈ ಮಧ್ಯೆ, ಶನಿವಾರ ಇಡೀ ದಿನ ಚಿತ್ರದುರ್ಗದ ಮಠದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರು, ವಿವಿಧ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಮಠದ ಭಕ್ತರು ಮಠಕ್ಕೆ ಆಗಮಿಸಿ ಸ್ವಾಮೀಜಿಯವರನ್ನು ಬೆಂಬಲಿಸಿದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಠಕ್ಕೆ ಭೇಟಿ ನೀಡಿ ಈ ದೂರಿನ ಬಗ್ಗೆ ನಂಬಿಕೆ ಇಲ್ಲ ಎಂದರು.
ಮತ್ತೊಂದೆಡೆ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ.
21ನೇ ಶತಮಾನದ ಕರಾಳ ಘಟನೆ: ಮುರುಘಾ ಶ್ರೀಚಿತ್ರದುರ್ಗ: ಮುರುಘಾ ಶರಣರ ಬದುಕಿನಲ್ಲಿ ಅತ್ಯಂತ ದೊಡ್ಡ ಕಿರುಕುಳ ಇದಾಗಿದೆ. 21ನೇ ಶತಮಾನದ ಕರಾಳ ಘಟನೆ ಇದಾಗಿದೆ. ರೋಲ್‌ಕಾಲ್, ಬ್ಲಾಕ್‌ವೆುàಲ್ ತಂತ್ರದ ಮೂಲಕ ಅಧಿಕಾರ ಬೇಕು ಎಂಬ ಧೋರಣೆ ಮುಖ್ಯವಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ಮಠದಲ್ಲಿ ಭಕ್ತರ ಜತೆ ಜರಗಿದ ಅನೌಪಚಾರಿಕ ಮಾತುಕತೆ ವೇಳೆ ಮಾತನಾಡಿರುವ ಶರಣರು, ಜಗತ್ತಿನಲ್ಲಿ ಧರ್ಮಾಂಧರು ಹಾಗೂ ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ಎದುರಾಗುತ್ತದೆ. ಗಾಂಧೀಜಿ, ಬಸವಣ್ಣ ಕೂಡ ನೋವಿನ ದಿನಗಳನ್ನು ಎದುರಿಸಿದ್ದಾರೆ ಎಂದು ಹೇಳಿದರು.
ಮಠದ ಒಳಗೆ ಇರುವವರೇ ಷಡ್ಯಂತ್ರ, ಪಿತೂರಿ ನಡೆಸಿದ್ದಾರೆ. ಈ ಸಮಸ್ಯೆ ಶಾಶ್ವತವಲ್ಲ. ಯಾರೊಬ್ಬರೂ ದುಃಖಿಸಬೇಡಿ. ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ. ಸಾಧ್ಯವಾದರೆ ಸಮಸ್ಯೆ ಬಗೆಹರಿಸಿಕೊಳ್ಳೋಣ, ಇಲ್ಲವೇ ಹೋರಾಟ ಮಾಡೋಣ. ಎರಡಕ್ಕೂ ನಾವು ಸಿದ್ಧ. ಸಮರ ಹಾಗೂ ಸಂಧಾನದ ಹಾದಿಗಳು ನಮ್ಮ ಎದುರಿನಲ್ಲಿವೆ ಎಂದಿದ್ದಾರೆ. ಎಲ್ಲ ಸಮಾಜ ಸುಧಾರಕರ ಕಾಲದಲ್ಲಿಯೂ ಸಾತ್ವಿಕ ಮತ್ತು ದುಷ್ಟಶಕ್ತಿಯ ನಡುವೆ ಹೋರಾಟ ನಡೆದಿವೆ. ಸಾತ್ವಿಕರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ಅನೇಕರು ನಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಏಸುಕ್ರಿಸ್ತರನ್ನು ಶಿಲುಬೆಗೆ ಏರಿಸಿದವರು ಅದೇ ಧರ್ಮದವರು. ಪೈಗಂಬರರಿಗೆ ಕಿರುಕುಳ ನೀಡಿದವರು, ಗೌತಮ ಬುದ್ಧನಿಗೆ ಹಂದಿಯ ಮಾಂಸದ ರಸ ಉಣಿಸಿದವರು ಅದೇ ಧರ್ಮದವರು ಎಂದು ಮುರುಘಾ ಶರಣರು ಹೇಳಿದ್ದಾರೆ. ಮಠದ ಉದ್ಯೋಗಿಯೊಬ್ಬ ಸರಿ ಇರಲಿಲ್ಲ. ಆತನೇ ಏನೋ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ಎಂಬವರ ವಿರುದ್ಧವೂ ದೂರು ನೀಡಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ.
– ಆರಗ ಜ್ಞಾನೇಂದ್ರ, ಗೃಹ ಸಚಿವ