Advertisement
ಬಾದಾಮಿ ತಾಲೂಕು ಕೆರಕಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇದಾರನಾಥ ಶುಗರ್ ಅನ್ನು ನ್ಯಾಯ ಮಂಡಳಿಯಲ್ಲಿ ಕಾನೂನು ಬದ್ಧವಾಗಿ ಖರೀದಿ ಮಾಡಲಾಗಿದೆ. 10 ವರ್ಷದಿಂದ ಬಂದ್ ಆಗಿದ್ದ ಈ ಕಾರ್ಖಾನೆ ಪುನಾರಂಭಿಸಿದ್ದು, ಈ ಭಾಗದ ರೈತರಿಗೆ ಅನುಕೂಲವಾಗಿದೆ. ಎಷ್ಟೋ ಜನ ರೈತರು, ಈ ಕಾರ್ಖಾನೆ ಆರಂಭಿಸಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ. ಆದರೆ,ಕಾರ್ಖಾನೆಗೆ ಕಬ್ಬು ಕೊಡದ ಕೆಲವರು ಹೋರಾಟ ಮಾಡುತ್ತಿದ್ದಾರೆ ಎಂದರು.
ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ಸಿಕ್ಕಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು. ದೇಶದಲ್ಲಿ ಸಕ್ಕರೆ ಉತ್ಪಾದನೆ ಮಾಡುವ ಉದ್ಯಮ ಸಮೂಹಗಳಲ್ಲಿ ಎಂಆರ್‌ಎನ್ ಉದ್ಯಮ ಸಮೂಹ 3ನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ
ಸ್ಥಾನದಲ್ಲಿದೆ. ಅಲ್ಲದೇ ಸಧ್ಯ 8.50 ಲಕ್ಷ ಎಥೆನಾಲ್ ಉತ್ಪಾದನೆಯಾಗುತ್ತಿದ್ದು, ಅದನ್ನು 26 ಲಕ್ಷ ಲೀಟರ್ ಗೆ ಹೆಚ್ಚಿಸುವ ಕಾರ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ರವಿವಾರ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಸಿಎಂ, ಕೇಂದ್ರ ಹಾಗೂ ರಾಜ್ಯದ ಹಲವರು ಸಚಿವರು ಆಗಮಿಸಲಿದ್ದಾರೆ ಎಂದರು. ಇದನ್ನೂ ಓದಿ:ಕೊರೊನಾ, ಹಳದಿ ನೊಣಕ್ಕೆ ನಲುಗಿದ ಅಲ್ಫೋನ್ಸೋ: ಧೈರ್ಯ ಕಳೆದುಕೊಂಡ ದಲ್ಲಾಳಿಗಳು
Related Articles
ಉಪ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಇದರಿಂದ ಆದಾಯ ಹೆಚ್ಚಲಿದ್ದು, ಶೇ.70ರಷ್ಟು ಆದಾಯ ರೈತರಿಗೆ ನೀಡಲು ನಮ್ಮ ಉದ್ಯಮ ಸಮೂಹ ನಿರ್ಧರಿಸಿದೆ. ಇದರಿಂದ ರೈತರ ಆದಾಯವೂ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದರು.
Advertisement
ರೈತರಿಗೆ ವರದಾನ: ಈ ಭಾಗದಲ್ಲಿ ಎಥೆನಾಲ್ ಕಾರ್ಖಾನೆ ಸ್ಥಾಪಿಸುವುದರಿಂದ ರೈತರಿಗೆ ವರದಾನವಾಗಲಿದೆ. ರೈತರ ಉತ್ಪನಗಳು ತಕ್ಷಣಕ್ಕೆ ಮಾರಾಟವಾಗದಿದ್ದರೆ ಹಾಳಾಗುತ್ತವೆ. ಹಾನಿಯಾದ ಉತ್ಪನ್ನಗಳಿಂದಲೂ ಎಥೆನಾಲ್ ಉತ್ಪಾದನೆಗೆ ಅವಕಾಶವಿದೆ. ಹೈಟೆಕ್ ತಂತ್ರಜ್ಞಾನದೊಂದಿಗೆ ಈ ಕಾರ್ಖಾನೆ ಆರಂಭಗೊಳ್ಳುತ್ತಿದೆ. ಜಿಲ್ಲೆಯ ರೈತರಿಗೆ ಇದೊಂದು ಸುವರ್ಣ ಅವಕಾಶವೆಂದು ಹೇಳಿದರು.