Advertisement
ಬೀಳಗಿ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಅವರು, ಮುಂದಿನ 30 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಬೀಳಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ನಡೆಸಲಾಗಿದೆ. ಹೀಗಾಗಿ ವಿದ್ಯುತ್, ನೀರಾವರಿಯಲ್ಲಿ ಬೀಳಗಿ ಮತಕ್ಷೇತ್ರ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಮುಂದಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಬೀಳಗಿಯಲ್ಲಿ ಅನುಷ್ಠಾನಗೊಳಿಸಿದ್ದೇವೆ ಎಂದು ಹೇಳಿದರು.
ವಿದ್ಯತ್ ವಿತರಣಾ ಸ್ಥಾವರಗಳ ವಿಸ್ತರಣೆಯ ಜೊತೆಗೆ 9 ಹೊಸ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಪ್ರಸ್ತಾವಣೆ
ಸಲ್ಲಿಸಲಾಗಿದೆ. ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ನಾವು ಈ ಬಾರಿಯೂ ಚುನಾವಣೆ ಎದುರಿಸುತ್ತಿದ್ದೇವೆ.
ಬೀಳಗಿ ಸಮಗ್ರ ಅಭಿವೃದ್ಧಿಗೆ ಮತ್ತೂಮ್ಮೆ ಆಶೀರ್ವದಿಸಿ ಎಂದು ಹೇಳಿದರು. ಬೀಳಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ದೇಶದಲ್ಲಿಯ ಕಾಂಗ್ರೆಸ್ ಸ್ಥಿತಿ ಹಾಗೂ ಬೀಳಗಿ ಕಾಂಗ್ರೆಸ್ ಸ್ಥಿತಿ ಭಿನ್ನವಾಗಿಲ್ಲ. ಜನತೆ ಕಾಂಗ್ರೆಸ್ ಮೇಲೆ ಭರವಸೆ ಕಳೆದುಕೊಂಡು ಬಹಳ ವರ್ಷಗಳಾಗಿವೆ. ಜನರನ್ನು ನಂಬಿಸಲು ಹೊಸ ವೇಷ ಹಾಕಿಕೊಂಡು ಮತ್ತೆ ಜನರ ಬಳಿ ಬಂದಿದ್ದಾರೆ. ಜನತೆ ಜಾಗೃತರಾಗಿರಬೇಕು. ನಮ್ಮ ಹಿರಿಯರು ಹಲವು ವರ್ಷಗಳ ಹಿಂದೆ ಮನೆಯ ಬಾಗಿಲ ಮೇಲೆ ನಾಳೆ ಬಾ ಎಂದು ಬರೆಯುತ್ತಿದ್ದರು. ಈಗಲೂ ಚುನಾವಣಾ ಪ್ರಚಾರ ವೇಳೆ ಸುಳ್ಳು ಗ್ಯಾರೆಂಟಿ ಕಾರ್ಡ್ ಹಿಡಿದು ಕೆಲವರು ಮನೆ ಬಾಗಿಲಿಗೆ ಬರುತ್ತಾರೆ. ಹೀಗಾಗಿ ಕಾಂಗ್ರೆಸ್ಸಿಗರು ಬಂದಾಗ ನಾಳೆ ಬಾ ಎಂದು ಹೇಳಿ ಎಂದರು.
Related Articles
Advertisement
ಬೀಳಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ಮೇಲಿನ ಭರವಸೆ ಕಳೆದುಕೊಂಡು ಬಹಳ ದಿನವಾಗಿವೆ.ಈಗ ಜನರನ್ನು ನಂಬಿಸಲು ಹೊಸ ವೇಷ ಹಾಕಿಕೊಂಡು ಬರುತ್ತಿದ್ದಾರೆ. ಜನ ಜಾಗೃತರಾಗಿರಬೇಕು.
-ಮುರುಗೇಶ ನಿರಾಣಿ, ಬೀಳಗಿ ಬಿಜೆಪಿ ಅಭ್ಯರ್ಥಿ