Advertisement

ಸಕ್ರೆಬೈಲು ಬಿಡಾರಕ್ಕೆ ಬಂತು ಮುರುಘಾಮಠದ ಕನೇನಿ

07:01 PM Mar 06, 2021 | Team Udayavani |

ಶಿವಮೊಗ್ಗ: ತುಂಗಾ ತೀರದ ಪ್ರಸಿದ್ಧ ಆನೆ ಬಿಡಾರಕ್ಕೆ ಚಿತ್ರದುರ್ಗದ ಮುರುಘಾಮಠದ ಹೆಣ್ಣಾನೆ ಹನಿಮೂನ್‌ಗೆ ಬಂದಿದೆ. ಕನೇನಿ (25) ಹನಿಮೂನ್‌ಗೆ ಬಂದಿರುವ ಆನೆ. ಮಠದಲ್ಲಿ ಇದ್ದ ಆನೆಗೆ ಪ್ರಾಪ್ತ ವಯಸ್ಸಾಗಿದ್ದು, ಸಂತಾನವೃದ್ಧಿಯ ಸಮಯವಾಗಿದೆ. ಹೀಗಾಗಿ ಆಡಳಿತ ಮಂಡಳಿ ನಿಶ್ಚಯದಂತೆ ಕನೇನಿಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿದೆ.

Advertisement

ಮಠದ ಆಡಳಿತ ಮಂಡಳಿ ಈ ಬಗ್ಗೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗಕ್ಕೆ ಮನವಿ ಸಲ್ಲಿಸಿತ್ತು. ಇಲಾಖೆ ಕೂಡಾ ಕನೇನಿ ಹನಿಮೂನ್‌ಗೆ ಗ್ರೀನ್‌ಸಿಗ್ನಲ್‌ ನೀಡಿದೆ. ಅನುಮತಿ ಪಡೆದ ಮುರುಘಾಮಠದ ಆಡಳಿತ ಮಂಡಳಿಯವರು ಕನೇನಿಯನ್ನು ಸಂಭ್ರಮದಿಂದ ಸಕ್ರೆಬೈಲ್‌ ಆನೆ ಬಿಡಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಮೂರರಿಂದ ನಾಲ್ಕು ತಿಂಗಳ ಅವ ಧಿಯಲ್ಲಿ ಆನೆ ಬಿಡಾರದಲ್ಲಿ ವಾಸ್ತವ್ಯ ಹೂಡಲಿರುವ ಕನೇನಿ ಇಲ್ಲಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಇಲ್ಲಿಯ ವಾತಾವರಣಕ್ಕೆ ಹೊಂದಾಣಿಕೆ ಆಗಬೇಕಿದೆ. ಮಠದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಕನೇನಿಗೆ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ತಿನ್ನಿಸುವುದರ ಮೂಲಕ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯಾಧಿಕಾರಿ ಮಂಜುನಾಥ್‌, ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯರಾದ ಡಾ| ವಿನಯ್‌, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಕೃಷ್ಣಪ್ಪ, ಡಾ| ಪ್ರಸನ್ನಕುಮಾರ್‌, ಡಾ| ಕುಮಾರ್‌, ಡಾ| ತಿಪ್ಪೇಸ್ವಾಮಿ, ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಪಟೇಲ್‌ ಶಿವಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next