Advertisement

ಮೌಡ್ಯಕ್ಕೆ ತನ್ನ 6 ವರ್ಷದ ಕಂದನನ್ನೇ ಬಲಿಕೊಟ್ಟ ಹೆತ್ತ ತಾಯಿ! ಕೇರಳದಲ್ಲೊಂದು ಹೇಯ ಕೃತ್ಯ

09:50 PM Feb 08, 2021 | Team Udayavani |

ಕೇರಳ : ಮೌಡ್ಯಕ್ಕೆ ಶರಣಾದ ಕ್ರೂರಿ ತಾಯಿಯೋರ್ವಳು ತನ್ನ 6 ವರ್ಷದ ಕಂದನನ್ನೇ ಕತ್ತು ಸೀಳಿ ಕೊಲೆ ಮಾಡಿರುವ ಹೇಯ ಘಟನೆ ದೇವರ ನಾಡು ಎಂದು ಕರೆಯಿಸಿಕೊಳ್ಳುವ ಕೇರಳದಲ್ಲಿ ನಡೆದಿದೆ.

Advertisement

ಮೂರು ತಿಂಗಳ ಗರ್ಭವತಿಯಾಗಿರುವ ಕೊಲೆಗಾತಿ ತಾಯಿ ಭಾನುವಾರ ರಾತ್ರಿ ತನ್ನ ಮಗನನ್ನು ಹತ್ಯೆ ಮಾಡಿದ್ದಾಳೆ. ಈ ವಿಷಯವನ್ನು ಸ್ವತಃ ಪೊಲೀಸರಿಗೆ ತಿಳಿಸಿದ್ದು, ದೇವರಿಗೆ ನನ್ನ ಮಗನನ್ನು ಬಲಿದಾನ ಮಾಡಿದ್ದಾಗಿ ಹೇಳಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:‘ಮಂತ್ರಿಗಳೇ ನಮಗೆ ನೇಮಕಾತಿ ಆದೇಶ ನೀಡಿ’ : ಸಚಿವ ಪಾಟೀಲ್ ಮನೆ ಎದುರು ಧರಣಿ

ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ನಿದ್ರೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next