ಮಂಗಳೂರು: ನಗರದ ಉದ್ಯಮಿಯೊಬ್ಬರನ್ನು ಕೊಲೆಗೆ ಸ್ಕೆಚ್ ಹಾಕಿದ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ಆರೋಪಿ ತುಮಕೂರಿನ ಸಂಜಯ್ (30)ನನ್ನು ಗ್ರಾಮಾಂತರ ಪೊಲೀಸರು ತುಮಕೂರಿನಲ್ಲಿ ಬಂಧಿಸಿದ್ದಾರೆ.
2009ರ ಅ. 8ರಂದು ನಗರದ ಉದ್ಯಮಿಯೊಬ್ಬರ ಕೊಲೆಗೆ ಪಿತೂರಿ ಪ್ರಕರಣದಲ್ಲಿ ಆರೋಪಿ ಸಂಜಯ್‌ನಲ್ಲಿ ಬಂಧಿಸಲಾಗಿತ್ತಾದರೂ ಬಳಿಕ ಆತ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.
ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನಿಗೆ ಕೋರ್ಟ್ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರ ತುಮಕೂರಿನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಎಎಸ್‌ಐ ಚಂದ್ರಶೇಖರ್ ಮತ್ತು ಕಾನ್ಸ್‌ಟೆಬಲ್ ವಿಶ್ವನಾಥ್ ಭಾಗವಹಿಸಿದ್ದರು.
2009ರಲ್ಲಿ ಕೊಲೆ ಸ್ಕೆಚ್ ಹಾಕಿದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ತಂಡ ಪೊಲೀಸರ ಮೇಲೆಯೇ ಪ್ರತಿ ದಾಳಿ ಮಾಡಿತ್ತು.
ಈ ವೇಳೆ ನಡೆದ ಶೂಟೌಟ್ ನಡೆದಿದ್ದು, ಬಿಜಾಪುರದ ಸರ್ದಾರ್ ಸಾವಿಗೀಡಾಗುವುದರೊಂದಿಗೆ ಆತನ ಜತೆಗಿದ್ದ ಆರೋಪಿಗಳಾದ ಬೆಂಗಳೂರಿನ ಪ್ರವೀಣ್, ತುಮಕೂರಿನ ಸಂಜಯ್, ಬಳ್ಳಾರಿಯ ಶಿವಕುಮಾರ್‌ನನ್ನು ಬಂಧಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಚಿಕ್ಕಮಗಳೂರಿನ ಮಲ್ಲಿಕ್ ತಲೆಮರೆಸಿಕೊಂಡಿದ್ದ.