Advertisement

ಕೊಲೆ, ದರೋಡೆಗೆ ಸಂಚು: 6 ಮಂದಿ ಸೆರೆ, ಸೊತ್ತು ವಶ

03:45 AM Feb 20, 2017 | Team Udayavani |

ಮಂಗಳೂರು: ತಣ್ಣೀರುಬಾವಿ ಬೀಚ್‌ ಬಳಿ ವ್ಯಕ್ತಿಯೊಬ್ಬರ ಕೊಲೆಗೆ ಮತ್ತು ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ 6 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ 2 ಪಿಸ್ತೂಲು, 7 ಸಜೀವ ಮದ್ದು ಗುಂಡುಗಳು, 2 ಚೂರಿ, 3 ಮೊಬೈಲ್‌ ಫೋನ್‌, ಮಾರುತಿ ಸ್ವಿಫ್ಟ್‌ ಕಾರು ಮತ್ತು ಆಟೋ ರಿಕ್ಷಾವನ್ನು ವಶ ಪಡಿಸಿಕೊಂಡಿದ್ದಾರೆ. 

Advertisement

ಕೃಷ್ಣಾಪುರ 7ನೇ ಬ್ಲಾಕ್‌ನ ಸಫಾÌನ್‌ ಹುಸೈನ್‌ ಯಾನೆ ಸುಹೈನ್‌ ಯಾನೆ ಸುಭಾಷ್‌ (33) ಮತ್ತು ಮೊಹಮದ್‌ ಫೈಝಲ್‌ ಇಬ್ರಾಹಿಂ ಶೇಖ್‌ (33), ಎಮ್ಮೆಕೆರೆಯ ಅಬ್ದುಲ್‌ ನಾಸಿರ್‌ ಯಾನೆ ಡಾನ್‌ ನಾಸಿರ್‌ (34), ಮುಕ್ಕ ಸುರತ್ಕಲ್‌ನ ಶಂಸುದ್ದೀನ್‌ (27), ಉಳ್ಳಾಲ ಹಳೆಕೋಟೆಯ ಉಮ್ಮರ್‌ ಫಾರೂಕ್‌ ಯಾನೆ ಮಾನಾ ಫಾರೂಕ್‌ (25) ಮತ್ತು ಮೊಹಮದ್‌ ಅನ್ಸಾರ್‌ (30) ಬಂಧಿತರು. 

ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡ ಕೆಲವರು ರವಿವಾರ ಬೆಳಗ್ಗೆ ತಣ್ಣೀರುಬಾವಿ ಬೀಚ್‌ ರಸ್ತೆಯಲ್ಲಿ ಕಾರು ಮತ್ತು ರಿಕ್ಷಾವೊಂದರಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಕಾರು ಮತ್ತು ರಿಕ್ಷಾವನ್ನು ಅಡ್ಡಗಟ್ಟಿ ಅದರಲ್ಲಿದ್ದ ಆರೋಪಿಗಳನ್ನು ಮತ್ತು ಅವರ ಬಳಿ ಇದ್ದ ಶಸ್ತ್ರಾಸ್ತÅಗಳನ್ನು ವಶಕ್ಕೆ ಪಡೆದುಕೊಂಡರು. ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ನ ಡಿಸಿಪಿಗಳಾದ ಕೆ. ಎಂ. ಶಾಂತರಾಜು ಮತ್ತು ಡಾ | ಸಂಜೀವ್‌ ಎಂ. ಪಾಟೀಲ್‌ ಅವರು ರವಿವಾರ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 

2 ತಿಂಗಳ ಹಿಂದೆ ಹೊರಗೆ ಬಂದಿದ್ದ ಸಫಾನ್‌
ಸಫಾÌನ್‌ ಹುಸೈನ್‌ ಮೇಲೆ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಪೊಲೀಸರ ಮೇಲೆ ಹಲ್ಲೆ ಸಹಿತ 23‌ ಪ್ರಕರಣಗಳು ದಾಖಲಾಗಿವೆ. ಗೂಂಡಾ ಕಾಯ್ದೆಯಡಿ ಒಂದು ವರ್ಷದ ಬಂಧನ ಅವಧಿಯನ್ನು ಕಳೆದು ಎರಡು ತಿಂಗಳ ಹಿಂದೇಯಷ್ಟೇ ಬಿಡುಗಡೆ ಹೊಂದಿ ಹೊರಗೆ ಬಂದಿದ್ದನು. ದೇರಳಕಟ್ಟೆಯ ಬ್ಲೂ ಫಿಲಂ ಚಿತ್ರೀಕರಣ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದನು. 

ಮೊಹಮದ್‌ ಫೈಝಲ್‌ ಇಬ್ರಾಹಿಂ ಶೇಕ್‌ ವಿರುದ್ಧ ಕೊಲೆಗೆ ಯತ್ನ, ದರೋಡೆ, ಜೈಲಿನಲ್ಲಿ ಗಲಾಟೆ ಮುಂತಾದ 8 ಪ್ರಕರಣಗಳಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದನು. 

Advertisement

ಶಂಸುದ್ದೀನ್‌ ವಿರುದ್ಧ  ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಜೈಲ್‌ನಲ್ಲಿ ಗಲಾಟೆ ಮತ್ತಿತರ 8 ಪ್ರಕರಣಗಳು ದಾಖಲಾಗಿದ್ದು, 8 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದನು.
 
ಆರೋಪಿ ಅಬ್ದುಲ್‌ ನಾಸಿರ್‌ ಯಾನೆ ಡಾನ್‌ ನಾಸಿರ್‌ ವಿರುದ್ಧ ಕೊಲೆಗೆ ಯತ್ನ, ಅಪಹರಣ, ದರೋಡೆ, ಕೋಮು ಗಲಭೆ ಮುಂತಾದ 9 ಪ್ರಕರಣಗಳು ದಾಖಲಾಗಿವೆ. ಉಮರ್‌ ಫಾರೂಕ್‌ ವಿರುದ್ಧ ಕೊಲೆ ಯತ್ನ, ದರೋಡೆ ಯತ್ನ, ಹಲ್ಲೆ ಸೇರಿದಂತೆ ಮೂರು ಪ್ರಕರಣಗಳಿವೆ. 

6ನೇ ಆರೋಪಿ ಮೊಹಮದ್‌ ಅನ್ಸಾರ್‌ ವಿರುದ್ಧ ಯಾವುದೇ ಹಳೆ ಆರೋಪಗಳಿಲ್ಲ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ಸಹಚರನಾಗಿ ಗುರುತಿಸಿಕೊಂಡಿದ್ದಾನೆ. 

ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್‌ ವೈ. ನಾಯಕ್‌, ಸಬ್‌ ಇನ್ಸ್‌ಪೆಕ್ಟರ್‌ ಶ್ಯಾಂ ಸುಂದರ್‌, ಸಿಬಂದಿ ರಾಮ ಪೂಜಾರಿ, ಶೀನಪ್ಪ, ಗಣೇಶ್‌, ಚಂದ್ರಹಾಸ ಸನಿಲ್‌, ಚಂದ್ರ ಶೇಖರ, ಚಂದ್ರ, ಯೋಗೀಶ್‌, ಸುನಿಲ್‌, ಪ್ರಶಾಂತ್‌ ಶೆಟ್ಟಿ, ರಾಜೇಂದ್ರ ಪ್ರಸಾದ್‌, ದಾಮೋದರ, ಮಣಿ. ಅಬ್ದುಲ್‌ ಜಬ್ಟಾರ್‌, ಸುಧೀರ್‌ ಶೆಟ್ಟಿ,. ಇಸಾಕ್‌, ಅಶಿತ್‌, ವಿಶಾಲ್‌ ಡಿ’ಸೋಜಾ, ತೇಜ ಕುಮಾರ್‌ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.  ಈ ಪ್ರಕರಣದ ಕೆಲವು  ಆರೋಪಿಗಳಿಗೆ ಇತ್ತೀಚೆಗೆ  ಹತ್ಯೆಯಾದ ಕಾಲಿಯಾ ರಫೀಕ್‌ನ ನಂಟು ಇದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next