Advertisement

ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸಾಧು ಹತ್ಯೆ

11:33 PM May 24, 2020 | Sriram |

ಔರಂಗಾಬಾದ್‌: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಕರ್ನಾಟಕ ಮೂಲದ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ ಮಹಾರಾಜ್‌ (33) ಎಂಬ ಸ್ವಾಮೀಜಿಯನ್ನು ದುಷ್ಕರ್ಮಿಗಳು ಹತ್ಯೆಗೈದಿ ದ್ದಾರೆ. ಅವರ ಅನುಯಾಯಿ ಭಗವಾನ್‌ ಶಿಂಧೆ ಎಂಬ ವ್ಯಕ್ತಿಯನ್ನೂ ಕೊಲ್ಲಲಾಗಿದೆ. ಶಿವಾಚಾರ್ಯ ಸ್ವಾಮೀಜಿ ನಾಂಡೇಡ್‌ನ‌ ಉಮ್ರಿಯಲ್ಲಿ ಲಿಂಗಾಯತ ಮಠ ನಿರ್ಮಿಸಿ ನೆಲೆಸಿದ್ದರೆಂದು ಮೂಲಗಳು ತಿಳಿಸಿವೆ.

Advertisement

ಎಪ್ರಿಲ್‌ 16ರಂದು ಪಾಲ್ಘರ್ ನ ದೇಗುಲ ಒಂದರಲ್ಲಿ ಮೂವರು ಸಾಧು ಗಳ ಹತ್ಯೆ ನಡೆಸಲಾಗಿತ್ತು. ಮೊದಲು ಶಿಂಧೆ, ಅನಂತರ ಸಾಧು ಹತ್ಯೆ ದುಷ್ಕರ್ಮಿಗಳು ಮೊದಲು ಶಿಂಧೆ ಯವರನ್ನು ಕೊಂದಿದ್ದಾರೆ. ಬಳಿಕ ಆಶ್ರಮದಲ್ಲಿ ಸ್ವಾಮೀಜಿಯವರ ಮಲಗುವ ಕೊಠಡಿಯನ್ನು ಪ್ರವೇಶಿಸಿ ಅಲ್ಲಿ ಸ್ವಾಮೀಜಿಯವರನ್ನು ಹತ್ಯೆಗೈದಿದ್ದಾರೆ. ಅನಂತರ ಶವವನ್ನು ಕಾರಿಗೆ ತುಂಬಿ ಬೇರೆಡೆ ಸಾಗಿಸಲು ಯತ್ನಿಸಿ ದದರೂ ಕಾರು ಆಶ್ರಮದ ಗೇಟ್‌ಗೆ ಢಿಕ್ಕಿ ಹೊಡೆದಿದ್ದರಿಂದ, ಶವವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾರೆ ಎಂದು ಜಿಲ್ಲಾ ಎಸ್‌ಪಿ ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಕಳವು ಉದ್ದೇಶದ ಹತ್ಯೆ?
ಸ್ವಾಮೀಜಿಯವರನ್ನು ಹತ್ಯೆಗೈದ ಬಳಿಕ ನಗದು, ಬೆಲೆಬಾಳುವ ವಸ್ತುಗಳನ್ನು ದುಷ್ಕರ್ಮಿಗಳು ಒಯ್ದಿದ್ದಾರೆ. ಕಳವಿನ ಉದ್ದೇಶದಿಂದಲೇ ಈ ಕೊಲೆಗಳು ನಡೆದಿವೆ ಎಂದು ಮಾಗಾರ್‌ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಯಿನಾಥ ಲಿಂಗಾಡೆ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.

ಮೇಲ್ನೋಟಕ್ಕೆ ಇದು ಸಮುದಾಯ, ಧರ್ಮ ಉದ್ದೇಶದ ಕೊಲೆಯಲ್ಲ ಎಂದು ಸ್ಪಷ್ಟವಾಗಿದ್ದರೂ ತನಿಖೆಯಿಂದ ನೈಜ ಕಾರಣ ಹೊರಬೀಳಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next