Advertisement
ಮದ್ಯಪಾನಿಯಾದ ಬಾಬು ಮತ್ತು ಸೀಮಂತಿನಿ ವಾಗ್ವಾದದಲ್ಲಿ ತೊಡಗಿದ್ದು, ಮಧ್ಯಾಹ್ನ ತನಕವೂ ಮುಂದುವರಿದಿತ್ತು. ಮನೆಯೊಳಗಡೆ ಬಾಬು ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತತ್‌ಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಾಬು ಅವರ ದೇಹದಲ್ಲಿ ಕಡಿದ ಹಲವು ಗಾಯಗಳಿದ್ದುವು. ತಲೆ, ಕಿವಿ ಭಾಗ ಮತ್ತು ಕಾಲಿನಲ್ಲಿ ಆಳವಾದ ಗಾಯಗಳು ಪತ್ತೆಯಾಗಿವೆ. ಮನೆಯೊಳಗೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.—
ರೈಲು ಢಿಕ್ಕಿ ಹೊಡೆದು ಸಾವು
ಕಾಸರಗೋಡು: ಮೊಗ್ರಾಲ್‌ನಲ್ಲಿ ರೈಲು ಢಿಕ್ಕಿ ಹೊಡೆದು ಮೊಗ್ರಾಲ್ ಲೀಗ್ ಕಚೇರಿ ಪರಿಸರದ ಮೀತಲೆ ವಳಪ್‌ನ ಯು.ಕೆ. ಅಬ್ದುಲ್ ರಹಿಮಾನ್ (65) ಸಾವಿಗೀಡಾದರು. ಇವರು ಎರಿಯಾಲ್ ನಿವಾಸಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
—
ಗಾಂಜಾ ಸಹಿತ ಇಬ್ಬರ ಬಂಧನ
ಮಂಜೇಶ್ವರ: ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾವನ್ನು ವಶಪಡಿಸಿಕೊಂಡ ಮಂಜೇಶ್ವರ ಪೊಲೀಸರು ಈ ಸಂಬಂಧ ಕುಂಜತ್ತೂರು ಬಾಚಳಿಕೆ ಜುಮಾ ಮಸೀದಿ ಬಳಿಯ ನಿವಾಸಿ ಅಲ್ಲಾಮ ಇಕ್ಬಾಲ್ (22) ಮತ್ತು ಕುಂಜತ್ತೂರು ಜುಮಾ ಮಸೀದಿ ರಸ್ತೆ ಕಲ್ಪಣೆ ಹೌಸ್‌ನ ಮೊಹಮ್ಮದ್ ಫಯಾಸ್ (20)ನನ್ನು ಬಂಧಿಸಿದ್ದಾರೆ. ಇವರನ್ನು ಪಲ್ಲೆದಪಡು³ವಿನಿಂದ ಬಂಧಿಸಲಾಗಿದ್ದು, ಬೈಕ್ ವಶಪಡಿಸಿಕೊಳ್ಳಲಾಗಿದೆ.
—
ಮರಳು ಸಾಗಾಟ: ಕೇಸು ದಾಖಲು
ಕುಂಬಳೆ: ಇಚ್ಲಂಗೋಡು ಪಯ್ನಾರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟಕ್ಕೆ ಖಾಸಗಿ ವ್ಯಕ್ತಿಯ ಹಿತ್ತಿಲ ಮೂಲಕ ರಸ್ತೆ ನಿರ್ಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದ ಮಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
—
ಸ್ಕೂಟರ್ ನಿಲ್ಲಿಸದೆ ಪರಾರಿ
ಕುಂಬಳೆ: ಹೇರೂರಿನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರು ನಿಲ್ಲಿಸಲು ಸೂಚಿಸಿದರೂ ಸ್ಕೂಟರ್ ನಿಲ್ಲಿಸದೆ ಪರಾರಿಯಾಗಿದೆ. ಈ ಸಂಬಂಧ ಸ್ಕೂಟರ್ ಸವಾರನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.