ಬೆಂಗಳೂರು : ”ಮೋದಿ” ಅಂದರೆ ”ಮರ್ಡರ್ ಆಫ್ ಡೆಮಾಕ್ರಸಿ ಇನ್ ಇಂಡಿಯಾ” (ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ)ಎಂದರ್ಥ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದರು. ಇದೇ ವೇಳೆ ರಾಜ್ಯದಲ್ಲಿ ಉತ್ತಮ ಸರ್ಕಾರ ಇದೆ, ಉತ್ತಮ ಮುಖ್ಯಮಂತ್ರಿ ಇದ್ದಾರೆ. ಉತ್ತಮ ಉಸ್ತುವಾರಿ ವೇಣುಗೋಪಾಲ್ ಇದ್ದಾರೆ, ಉತ್ತಮ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್‌ವರ್ ಇದ್ದಾರೆ.2018 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
ರಾಜ್ಯದಲ್ಲಿ ಮಹಾಘಟಬಂಧನ್ ಅಗತ್ಯ ಇಲ್ಲ. ಆದರೆ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಬೇಕಿದೆ ಎಂದರು.