ನೆಲಮಂಗಲ: ಸಂಬಂಧಿಕರ ಜಮೀನು ವ್ಯಾಜ್ಯದಲ್ಲಿ ನ್ಯಾಯ ಕೇಳಲು ಹೋದ ವ್ಯಕ್ತಿಯನ್ನು ಸ್ವಗ್ರಾಮದ ಸಂಬಂಧಿಕರೇ ಹಲ್ಲೆ ಮಾಡಿ ಹತ್ಯೆಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೊರೆ ಬೈರಸಂದ್ರದಲ್ಲಿ ಸಂಭವಿಸಿದೆ.
ಪುಟ್ಟರಾಜು(68)ಸಂಬಂಧಿಕರಿಂದ ಹಲ್ಲೆಗೊಳಗಾಗಿ ಕೊಲೆಯಾಗಿರುವ ವ್ಯಕ್ತಿ. ಈತ ತೊರೆ ಬೈ ರಸಂದ್ರ ನಿವಾಸಿಯಾಗಿದ್ದು, ಗುರುವಾರ ಜಮೀನು ವ್ಯಾಜ್ಯದ ಬಗ್ಗೆ ನ್ಯಾಯ ಮಾಡುವುದಾಗಿ ಆರೋಪಿಗಳು ತೋಟದ ಕೆಲಸ ಮಾಡುತ್ತಿದ್ದ ಪುಟ್ಟರಾಜು ಅವರನ್ನು ಕರೆಸಿಕೊಂಡಿದ್ದು, ನ್ಯಾಯ ಮಾಡುವ ನೆಪದಲ್ಲಿ ಪುಟ್ಟರಾಜುವಿನ ಮೇಲೆ ಹಲ್ಲೆ ಮಾಡಿದ್ದಾರೆ.
ನ್ಯಾಯ ಮಾಡಲು ಬಂದವರ ಮಾತು ಕೇಳದ ಆರೋಪಿಗಳು ಏಕಾಏಕಿ ಪುಟ್ಟರಾಜುವಿನ ಮೇಲೆರಗಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಸ್ಥಳದಲ್ಲೇ ಪುಟ್ಟರಾಜು ಕುಸಿದು ಬಿದ್ದಿದ್ದಾರೆ. ತಕ್ಷಣ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತರಾದರೂ ಎಂದು ಪುಟ್ಟರಾಜುವಿನ ಮಗ ತಿಳಿಸಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟರಾಜು ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆರೋಪ: ನಾವು ಉಳುಮೆ ಮಾಡುತ್ತಿರುವ ಜಮೀನು ನಮಗೆ ಬಿಟ್ಟು ಕೊಡಿ ಎಂದು ನ್ಯಾಯ ಕೇಳಿದ್ದಕ್ಕೆ ಗ್ರಾಮದ ಮಂಜುನಾಥ್ ಅಲಿಯಾಸ್ ಮಿಲ್ಟ್ರಿ ಮಂಜು (49), ಶೇಖರಯ್ಯ(58) ಪವನ್ (23) ಗೌತಮ್ (35) ಹಾಗೂ ಬೈರಪ್ಪ ಸೇರಿ ದಂತೆ ಐದು ಜನರು ಪುಟ್ಟರಾಜುವಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ, ಕೊಲೆ ಮಾಡಿರುವವರು ಪೊಲೀಸ್ ಇಲಾಖೆ ಹಾಗೂ ನಿವೃತ್ತ ಸೈನಿಕ ಎಂದು ಹೇಳಿಕೊಂಡು ನಮ್ಮ ಮೇಲೆ ದಬ್ಟಾಳಿಕೆ ಮಾಡುತ್ತಿದ್ದರು. ಇವರಿಗೆ ನ್ಯಾಯಯುತವಾಗಿ ಕಠಿಣ ಶಿಕ್ಷೆಯಾಗಬೇಕು ಎಂದು ಸಂಬಂಧಿ ಉದಯ ಕುಮಾರ್ ಆರೋಪಿಸಿದ್ದಾರೆ.
ಜೈಲು ಪಾಲು: ಗ್ರಾಮದ ಮುಖಂಡರ ಸಮ್ಮುಖದಲ್ಲಿ ಜಮೀನು ವಿವಾದ ವನ್ನು ಬಗೆಹರಿಸಿಕೊಳ್ಳಬೇಕೆಂದು ಗುರುವಾರ ಮಧ್ಯಾ ಹ್ನದ ವೇಳೆ ತೊರೆಪಾಳ್ಯದಲ್ಲಿ ಸ್ಥಳೀಯ ಮುಖಂಡರ ಮುಂದೆ ಜಮೀನು ವಿಚಾರವಾಗಿ ತೀವ್ರವಾದ ಚರ್ಚೆಯನ್ನು ನಡೆಸಲಾ ಗುತಿತ್ತು, ಈ ವೇಳೆ ಸಂಬಂಧಿಕರ ಪರವಾಗಿ ನ್ಯಾಯ ಕೇಳಲು ಹೋದ ಪುಟ್ಟರಾಜು ಅವರ ಮೇಲೆ ಆರೋಪಿಗಳು ಏಕಾಏಕಿ ಮುಗಿಬಿದ್ದು ಹಲ್ಲೆ ಮಾಡಿದ ಕಾರಣ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತಿತ್ತು, ಆದರೆ ಮಾರ್ಗ ಮಧ್ಯೆದಲ್ಲಿ ಪುಟ್ಟರಾಜು ಕೊನೆಯುಸಿ ರೆಳೆದಿದ್ದು, ಆರೋಪಿಗಳು ಜೈಲುಪಾಲಾಗಿದ್ದಾರೆ.