ಮುಂಬಯಿ: ಸಿನಿಮಾ ನಿರ್ದೇಶಕ, ಮರ್ಡರ್ ಸಿನಿಮಾದ ಸಂಭಾಷಣೆಕಾರ ಸುಬೋಧ್ ಚೋಪ್ರಾ(49ವರ್ಷ) ಅವರು ಶುಕ್ರವಾರ (ಮೇ 14) ನಿಧನರಾಗಿದ್ದು, ಅವರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉಸಿರಾಟದ ತೊಂದರೆಯಿಂದ ವ್ಯಕ್ತಿ ಸಾವು :ವೈದ್ಯರನ್ನು ನೂಕಾಡಿದ ಸಂಬಂಧಿಕರು
ಸುಬೋಧ್ ಚೋಪ್ರಾ ಅವರಿಗೆ ಕೋವಿಡ್ ಸೋಂಕು ದೃಢವಾದ ನಂತರ ಚಿಕಿತ್ಸೆ ಪಡೆದಿದ್ದು, ಕಳೆದ ಶನಿವಾರ ಸೋಂಕಿನಿಂದ ಅವರು ಗುಣಮುಖರಾಗಿದ್ದರು. ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿರುವ ಚೋಪ್ರಾ ಸಹೋದರ ಶಾಂಕಿ ಅವರು, ಸುಬೋಧ್ ಅವರು ಕೋವಿಡ್ ನಿಂದ ಮೇ 08ರಂದು ಗುಣಮುಖರಾಗಿದ್ದರು. ಆದರೆ ನಂತರ ಅವರ ಆರೋಗ್ಯ ಚಿಂತಾಜನಕವಾಗಿದ್ದು, ಶುಕ್ರವಾರ ಹೃದಯಸ್ತಂಭನದಿಂದ ವಿಧಿವಶರಾಗಿರುವುದಾಗಿ ತಿಳಿಸಿದ್ದಾರೆ.
ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ನಟನೆಯ ಮರ್ಡರ್, ಇರ್ಫಾನ್ ಖಾನ್ ಅಭಿನಯದ ರೋಗ್ ಸೇರಿದಂತೆ ಮುಂತಾದ ಚಿತ್ರಗಳಿಗೆ ಸುಭೋದ್ ಚೋಪ್ರಾ ಸಂಭಾಷಣೆ ಬರೆದಿದ್ದರು. 1997ರಲ್ಲಿ ರಿಪೋರ್ಟರ್ ಟಿವಿ ಸರಣಿಗಾಗಿ ಸಂಭಾಷಣೆ ಬರೆಯುವ ಮೂಲಕ ಚೋಪ್ರಾ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು.
ಮಲಯಾಳಂನ ವಸುಧಾ ಚಿತ್ರವನ್ನು ಸುಬೋಧ್ ಚೋಪ್ರಾ ನಿರ್ದೇಶಿಸಿದ್ದರು. ಮಹೇಶ್ ಭಟ್ ನಿರ್ದೇಶನದ ಹಕೀಕತ್ ಎಂಬ ಡಾಕ್ಯುಮೆಂಟರಿ ಸರಣಿಗೆ ಸ್ಕ್ರಿಫ್ಟ್ ಅನ್ನು ಚೋಪ್ರಾ ಬರೆದಿದ್ದರು. ಮಾನವಹಕ್ಕು ಉಲ್ಲಂಘನೆಯ ನೈಜ ಜೀವನದ ಕೋರ್ಟ್ ಪ್ರಕರಣಗಳ ಆಧಾರೊತ ಈ ಸರಣಿ ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು.