Advertisement

ಟಾಯ್ಲೆಟ್‌ ಬಳಕೆ ಜಗಳ: ಕೊಲೆ ಅಪರಾಧಿಯನ್ನು ಕೊಂದ ವಿಚಾರಣಾಧೀನ ಕೈದಿ

07:05 AM Mar 04, 2019 | udayavani editorial |

ಮುಜಫ‌ರನಗರ, ಉತ್ತರ ಪ್ರದೇಶ : ಸಹರಣಪುರ ಜಿಲ್ಲಾ ಬಂಧೀಖಾನೆಯಲ್ಲಿ ವಿಚಾರಣಾಧೀನ ಕೈದಿಯೋರ್ವ ಶೌಚಾಲಯ ಬಳಕೆ ವಿಷಯದಲ್ಲಿ ಉಂಟಾದ ಜಗಳದ ಪರಾಕಾಷ್ಠೆಯಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಹೊಡೆದು ಕೊಂದ ಘಟನೆ ನಡೆದಿದೆ.

Advertisement

ಪತ್ನಿಯ ಕೊಲೆ ಕೇಸಿನಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮೊಹಮ್ಮದ್‌ ಆಜಂ ಎಂಬಾತನನ್ನು ವಿಚಾರಣಾಧೀನ ಕೈದಿ ಅನ್ವರ್‌ ಎಂಬಾತ ಹೊಡೆದು ಕೊಂದ ಎಂದು ಸಹರಣಪುರ ಜಿಲ್ಲಾ ಜೈಲು ಸುಪರಿಂಟೆಂಡೆಂಟ್‌ ವೀರೇಶ್‌ ರಾಜ್‌ ಶರ್ಮಾ ತಿಳಿಸಿದರು. 

ಅನ್ವರ್‌ ವಿರುದ್ಧ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಜೈಲು ಅಧಿಕಾರಿಗಳನ್ನು ನಿರ್ಲಕ್ಷ್ಯ ತೋರಿರುವ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದು ನಗರ ಎಸ್‌ಪಿ ವಿನೀತ್‌ ಕುಮಾರ್‌ ಭಟ್ನಾಗರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next