ಹುಬ್ಬಳ್ಳಿ: ಅದರಗುಂಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಶನಿವಾರ ಸಂಜೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿ, ವಿಕೋಪಕ್ಕೆ ಹೋದಾಗ ಪರಸ್ಪರರು ಬಡಿಗೆಯಿಂದ ಹೊಡೆದಾಡಿಕೊಂಡಿದ್ದರು. ಈ ವೇಳೆ ಶಿವಪ್ಪ ಉಳ್ಳಾಗಡ್ಡಿ ಮತ್ತು ಮಕ್ತುಂಸಾಬ ನದಾಫಗೆ ಹೆಚ್ಚಿನ ಗಾಯವಾಗಿತ್ತು. ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಕುಂದಗೋಳ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿಯೇ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆಯು ರಾಜಕೀಯ ತಿರುವು ಪಡೆದುಕೊಂಡಿತ್ತು. ಆದರೆ ವೈಯಕ್ತಿಕ ಕಾರಣಕ್ಕೆ ಹೊಡೆದಾಟ ನಡೆದಿತ್ತು ಎಂದು ಗಾಯಾಳುಗಳು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರೈಲ್ವೆ ಬೋಗಿಯಲ್ಲಿ ಶವ ಪತೆ
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಹೆಗ್ಗೇರಿ ಬಸವನಗರ ಸ್ಮಶಾನ ಬಳಿಯ ಅಬ್ರಾಹಂ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ರವಿವಾರ ನಡೆದಿದೆ. ಈ ಹಿಂದೆ ರವಿವಾರ ರಾತ್ರಿಯೇ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ಇಂದು ರಾತ್ರಿ ಸಹ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಿಡಿಗೇಡಿಗಳ ಪತ್ತೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೆ ಚರ್ಚ್‌ನ್ ಆಡಳಿತ ಮಂಡಳಿಗೆ ಚುನಾವಣಾ ನಡೆದಿತ್ತು. ಈ ವೇಳೆ ಒಂದು ಗುಂಪಿನ ಸದಸ್ಯರು ಪರಾಭವಗೊಂಡಿದ್ದರು. ಇದೇ ವಿಷಯವಾಗಿ ಗುಂಪುಗಳ ನಡುವೆ ಒಂದಿಷ್ಟು ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.
Advertisement
ಘಟನೆಯಲ್ಲಿ ಅದರಗುಂಚಿ ಗ್ರಾಮದ ಶಿವಪ್ಪ ಬಿ. ಉಳ್ಳಾಗಡ್ಡಿ, ಮಕ್ತುಂಸಾಬ್ ನದಾಫ್ ಸೇರಿದಂತೆ ಇನ್ನಿತರರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗ್ರಾಮದ ಮಲ್ಲಿಕಾರ್ಜುನ ಬುರಡಿ, ಗುರಪ್ಪ ಬುರಡಿ, ಮಹಾಂತೇಶ ಬುರಡಿ ಎಂಬುವರನ್ನು ಬಂಧಿಸಿದ್ದಾರೆ. ಪರಾರಿಯಾದವರ ಪತ್ತೆಗೆ ಜಾಲ ಬೀಸಿದ್ದಾರೆ.
Related Articles
Advertisement
ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಹುಬ್ಬಳ್ಳಿ- ಚಿಕ್ಕಜಾಜೂರ ಪ್ಯಾಸೆಂಜರ್ (56916) ರೈಲಿನ ಬೋಗಿಯಲ್ಲಿ ಮಲಗಿದ್ದಲ್ಲಿಯೇ ಸ್ವಾಭಾವಿಕವಾಗಿ ಮೃತಪಟ್ಟ ವೃದ್ಧರೊಬ್ಬರ ಶವ ರೈಲ್ವೆ ಪೊಲೀಸರಿಗೆ ಶುಕ್ರವಾರ ದೊರೆತಿದೆ. ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದ ಸುಮಾರು 65 ವರ್ಷದ ಅಪರಿಚಿತ ವೃದ್ಧ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಇಲ್ಲದೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. 5 ಅಡಿ 6 ಅಂಗುಲ ಎತ್ತರ, ಕಪ್ಪುಮೈಬಣ್ಣ, ದುಂಡು ಮುಖ, ದಪ್ಪ ಮೂಗು, ಸದೃಢ ಶರೀರ ಹೊಂದಿದ್ದಾರೆ.
ಸಬ್‌ವೇ ಬಳಿ ಶವ ಪತ್ತೆ: ಇಲ್ಲಿನ ರೈಲ್ವೆ ನಿಲ್ದಾಣದ ವೇದಿಕೆ ನಂ. 4-5ರ ಸಬ್‌ವೇ ಪಕ್ಕದಲ್ಲಿ 65-70 ವರ್ಷದ ವೃದ್ಧರೊಬ್ಬರ ಶವ ರೈಲ್ವೆ ಠಾಣೆ ಪೊಲೀಸರಿಗೆ ಶನಿವಾರ ಸಿಕ್ಕಿದೆ. ಅಪರಿಚಿತ ವೃದ್ಧ ಯಾವುದೋ ಕಾಯಿಲೆಯಿಂದ ಬಳಲಿ ಸರಿಯಾಗಿ ಚಿಕಿತ್ಸೆ ದೊರೆಯದೆ ಮಲಗಿದಲ್ಲಿಯೇ ಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆ. 5 ಅಡಿ 4ಅಂಗುಲ ಎತ್ತರ ಹೊಂದಿದ್ದಾರೆ. ಶವಗಳನ್ನು ಕಿಮ್ಸ್ ಶವಾಗಾರದಲ್ಲಿ ಇಡಲಾಗಿದೆ. ವಾರಸುದಾರರು ದೂ: 2364751, ಮೊ: 9480802126 ಸಂಪರ್ಕಿಸಬಹುದು.
ಚರ್ಚ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟಹುಬ್ಬಳ್ಳಿ: ಹಳೇಹುಬ್ಬಳ್ಳಿ ಹೆಗ್ಗೇರಿ ಬಸವನಗರ ಸ್ಮಶಾನ ಬಳಿಯ ಅಬ್ರಾಹಂ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ರವಿವಾರ ನಡೆದಿದೆ. ಈ ಹಿಂದೆ ರವಿವಾರ ರಾತ್ರಿಯೇ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ಇಂದು ರಾತ್ರಿ ಸಹ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಿಡಿಗೇಡಿಗಳ ಪತ್ತೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೆ ಚರ್ಚ್‌ನ್ ಆಡಳಿತ ಮಂಡಳಿಗೆ ಚುನಾವಣಾ ನಡೆದಿತ್ತು. ಈ ವೇಳೆ ಒಂದು ಗುಂಪಿನ ಸದಸ್ಯರು ಪರಾಭವಗೊಂಡಿದ್ದರು. ಇದೇ ವಿಷಯವಾಗಿ ಗುಂಪುಗಳ ನಡುವೆ ಒಂದಿಷ್ಟು ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.