Advertisement

ಹೈದ್ರಾಬಾದ್‌:ಹಾಡ ಹಗಲೇ,ನೂರಾರು ಜನರೆದುರೇ ಕೊಚ್ಚಿ ಕೊಚ್ಚಿ ಕೊಲೆ!

02:28 PM Sep 26, 2018 | |

ಹೈದ್ರಾಬಾದ್‌: ಅತ್ತಾಪುರದಲ್ಲಿ ಬುಧವಾರ ನಡುರಸ್ತೆಯಲ್ಲೇ, ಹಾಡಹಗಲೇ ನೂರಾರು ಜನರ ಎದುರು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. 

Advertisement

ನೂರಾರು ಸಾರ್ವಜನಿಕರು ಮತ್ತು  ವಾಹನ ಸವಾರರ ಎದುರಿನಲ್ಲೇ ಈ ಭೀಕರ ಹತ್ಯೆ ನಡೆದಿದೆ. ಸಾರ್ವಜನಿಕರು ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದರೂ ಪ್ರಾಣಭಯದಿಂದ ಹಿಂದೆ ಸರಿದರು. 

ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಒಬ್ಟಾತ ನೆಲಕ್ಕೆ ಬಿದ್ದಾತನನ್ನು ಮನಬಂದಂತೆ ಕೊಚ್ಚಿ ಅಟ್ಟಹಾಸ ಮೆರೆದಿದ್ದಾನೆ. 

ಹತ್ಯೆಗೀಡಾದ ವ್ಯಕ್ತಿ ರಮೇಶ್‌ ಎಂದು  ತಿಳಿದು ಬಂದಿದ್ದು, ಈತ ಶಂಶಾಬಾದ್‌ನಲ್ಲಿ ನಡೆದ ಮಹೇಶ್‌ ಗೌಡ್‌ ಎಂಬಾತನ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಮಹೇಶ್‌ ಗೌಡ್‌ ಸಂಬಂಧಿಕರು ದ್ವೇಷದಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 

ಹತ್ಯೆ ನಡೆದ ಸ್ಥಳದಲ್ಲಿ ಟ್ರಾಫಿಕ್‌ ಪೊಲೀಸ್‌ ಸೇರಿದಂತೆ ಹಲವರು ಮೂಕ ಪ್ರೇಕ್ಷಕರಾದರು. ಕೆಲವರು ಬೆಚ್ಚಿ ಬಿದ್ದು ಸ್ಥಳದಿಂದ ಓಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next