Advertisement
ಹೆಣ್ಣೂರಿನ ವಡ್ಡರಪಾಳ್ಯ ನಿವಾಸಿ ಅಭಿಷೇಕ್(19) ಗುಂಡೇಟು ತಿಂದು ಬಂಧನಕ್ಕೊಳಗಾದವನು. ಆರೋಪಿಯ ಎಡಗಾಲಿಗೆ ಗುಂಡೇಟು ಬಿದ್ದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೇ ವೇಳೆ ಆರೋಪಿಯಿಂದ ಹಲ್ಲೆಗೊಳಗಾದ ಕಾನ್‌ಸ್ಟೆàಬಲ್ ಸಂತೋಷ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
Related Articles
Advertisement
ಈ ವೇಳೆ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಆರೋಪಿಯ ಮೇಲೆ ಎಡಗಾಲಿಗೆ ಗುಂಡು ಹೊಡೆದು ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು. ಬಂಧಿತ ಅಭಿಷೇಕ್ ವಿರುದ್ಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ಕಳೆದ 10 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.
ಹಳೇ ದ್ವೇಷವೇ ಕಾರಣ: ಸೆಪ್ಟೆಂಬರ್ ಗಣೇಶ ಹಬ್ಬದ ಸಂದರ್ಭದಲ್ಲಿ ವಡ್ಡರಪಾಳ್ಯದಲ್ಲಿ ಗಣಪತಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಆರೋಪಿ ಅಭಿಷೇಕ್ ಬಾಗಲೂರು ಲೇಔಟ್‌ನ ಸ್ನೇಹಿತರಾದ ಅರ್ಜುನ್, ಗುರುಬ್ರಹ್ಮ, ದಿಲೀಪ್ ಮತ್ತು ಅವಿನಾಶ್‌ರನ್ನು ಕರೆತಂದು ಡ್ಯಾನ್ಸ್ ಮಾಡಿದ್ದ. ಈ ವೇಳೆ ಕ್ಲುಲಕ ಕಾರಣಕ್ಕೆ ಆರೋಪಿ ಅಭಿಷೇಕ್ ಮೇಲೆ ಕೇಶವ ಮತ್ತು ಸಾರ್ವಜನಿಕರು ಹಲ್ಲೆ ನಡೆಸಿದ್ದರು.
ಸಾರ್ವಜನಿಕ ಹಲ್ಲೆಯಿಂದ ಆಕ್ರೋಶಗೊಂಡಿದ್ದ ಅಭಿಷೇಕ್ ತನ್ನ ನಾಲ್ವರು ಸಹಚರರೊಂದಿಗೆ ಕೇಶವನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ನ.30ರಂದು ಹೆಣ್ಣೂರು ಬಂಡೆ ಬಳಿ ಕೇಶವನನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಬಟ್ಟೆ ಬದಲಿಸಲು ಬಂದಿದ್ದ: ನ.30ರಂದು ತನ್ನ ಸಹಚರರ ಜತೆ ಸೇರಿ ಕೇಶವನನ್ನು ಹತ್ಯೆಗೈದು ಅದೇ ಬಟ್ಟೆಯಲ್ಲಿ ಅಭಿಷೇಕ್ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ವಡ್ಡರಪಾಳ್ಯದಲ್ಲಿರುವ ತನ್ನ ಮನೆಗೆ ಬಂದು ಬಟ್ಟೆ ಬದಲಿಸಿ ಇನ್ನೊಂದಿಷ್ಟು ಬಟ್ಟೆಗಳನ್ನು ತುಂಬಿಕೊಂಡು ತಮಿಳುನಾಡು ಕಡೆ ತಲೆಮರೆಸಿಕೊಳ್ಳಲು ತೀರ್ಮಾನಿಸಿದ್ದ.
ಈ ಮಾಹಿತಿ ಪಡೆದ ಹೆಣ್ಣೂರು ಪೊಲೀಸರು ಡಿ. 4ರ ನಸುಕಿನ 2 ಗಂಟೆ ಸುಮಾರಿಗೆ ಆರೋಪಿ ಹೆಣ್ಣೂರು ಬಂಡೆ ಬಳಿ ಬರುತ್ತಿದ್ದಂತೆ ದಾಳಿ ನಡೆಸಿ ಬಂಧಿಸಿದ್ದಾರೆ. ಸಹಚರರಾದ ಮತ್ತೂಬ್ಬ ಆರೋಪಿ ಗುರುಬ್ರಹ್ಮ ಎಂಬಾತನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಅರ್ಜುನ್, ಅವಿನಾಶ್ ಮತ್ತು ದಿಲೀಪ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.