ಬೆಂಗಳೂರು: “ರಾಹುಲ್‌ಗಾಂಧಿ ಎಂದರೆ “ಆರ್‌ಆರ್ ಆರ್” (ರಾಹುಲ್ ರಿಪಿಟೇಷನ್, ರೆØಟೋರಿಕ್) ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್ ಲೇವಡಿ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಹೋದ ಕಡೆಯೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆಯೇ ಹೊರತು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ.ಹೀಗಾಗಿ ರಾಹುಲ್ ಗಾಂಧಿ ಎಂದರೆ ರಿಪಿಟೇಷನ್ (ಪುನರಾವರ್ತನೆ), ರೆØಟೋರಿಕ್ (ಅನಗತ್ಯ ಮಾತು) ಎಂದು ವಿಶ್ಲೇಷಿಸಬಹುದು ಎಂದು ಹೇಳಿದರು.
ಲಿಂಗಾಯತ- ವೀರಶೈವರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಚುನಾವಣಾ ಗಿಮಿಕ್ ಆಗಿದ್ದು, ಜನತಾ ನ್ಯಾಯಾಲಯದಲ್ಲಿ ಕಾಂಗ್ರೆಸ್ ಷಡ್ಯಂತ್ರವನ್ನು ಬಿಚ್ಚಿಡಲಾಗುವುದು. ರಾಜ್ಯ ಸರ್ಕಾರದ ಕ್ರಮದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಈ ಹಿಂದೆ ಪ್ರತ್ಯೇಕ ಧರ್ಮವಾಗಿ ಗುರುತಿಸಲು ಮುಂದಾಗಿರಲಿಲ್ಲ. 2017ರ ಡಿ.22ರಂದು ಸಮಿತಿ ರಚಿಸಿ ಅಲ್ಪಾವಧಿಯಲ್ಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ. ವಿಭಜಿಸಿ ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಇದಕ್ಕೆ ರಾಜ್ಯದಲ್ಲಿ ಮಾತ್ರವಲ್ಲದೆ ಇತರೆಡೆಯೂ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದರು.
2013ರಲ್ಲೇ ವೀರಶೈವ ಮಹಾಸಭಾ ಪ್ರತ್ಯೇಕ ಧರ್ಮ ಮಾನ್ಯತೆಗೆ ಮನವಿ ಸಲ್ಲಿಸಿದ್ದು, ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯಿಲಿ, ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಶಿಫಾರಸು ಮಾಡಿದ್ದರೂ ಅಂದಿನ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅಲ್ಪಸಂಖ್ಯಾತ ಸ್ಥಾನ ನೀಡಲು ಸಾಧ್ಯವಿಲ್ಲ ಎಂದಿದ್ದರು. ನಂತರ ಹಲವು ವರ್ಷ ಸುಮ್ಮನಿದ್ದ ಕಾಂಗ್ರೆಸ್ ಸರ್ಕಾರ ಡಿಸೆಂಬರ್‌ನಲ್ಲಿ ಸಮಿತಿ ರಚಿಸಿತು. ಸಮಿತಿ ಆರು ತಿಂಗಳ ಕಾಲಾವಕಾಶ ಕೋರಿದರೂ ನೀಡದೆ ವರದಿ ಪಡೆಯಲಾಗಿದೆ. ಇಷ್ಟು ದಾಖಲೆ ಅವಧಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಕರಪತ್ರವೂ ಸಿದ್ಧವಾಗಿಲ್ಲ ಎಂದು ಲೇವಡಿ ಮಾಡಿದರು.
ಮಾ.26ರಿಂದ “ಬೆಂಗಳೂರು ರಕ್ಷಿಸಿ’
ಬೆಂಗಳೂರು ರಕ್ಷಿಸಿ ಅಭಿಯಾನ ಮುಗಿದಿಲ್ಲ. ಬೆಂಗಳೂರು ಹೇಗೆ ಕ್ರೈಮ್ ಸಿಟಿ, ಗಾಬೇìಜ್ ಸಿಟಿ, ಗೂಂಡಾ ಸಿಟಿ, ಮಾಫಿ ಸಿಟಿಯಾಗಿ ಪರಿವರ್ತನೆಯಾಗಿದೆ ಎಂಬುದನ್ನು ನಗರ ಪ್ರತಿ ಮನೆ, ಜನರಿಗೆ ತಿಳಿಸಲು ಮಾ.26ರಿಂದ ಎರಡನೇ ಹಂತದಲ್ಲಿ “ಬೆಂಗಳೂರು ರಕ್ಷಿಸಿ’ ಅಭಿಯಾನ ಆರಂಭವಾಗಲಿದೆ ಎಂದು ಮುರಳೀಧರರಾವ್ ಹೇಳಿದರು.