ದೇವನಹಳ್ಳಿ: ಕಂದಾಯ ಸಚಿವ ಆರ್. ಅಶೋಕ್ ಗ್ರಾಮವಾಸ್ತವ್ಯ ಹೂಡಿ ದಲಿತರ ಮನೆಯಲ್ಲಿ ಉಪಹಾರ ಸೇವಿಸುವುದರ ಮೂಲಕ ರಾಜಕೀಯ ಗಿಮಿಕ್ ಮಾಡಲು ಹೊರಟಿದ್ದಾರೆ. ಕಂದಾಯ ಇಲಾಖೆ ಬಗ್ಗೆ ಸಚಿವರಿಗೆ ಕಾಳಜಿ ಇಲ್ಲ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಅನೇಕ ಸಮಸ್ಯೆ ಜನರನ್ನು ಕಾಡುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಸುಮ್ಮನಿದ್ದ ಕಂದಾಯ
ಸಚಿವರು ದಿಢೀರ್ ರಾಜಕೀಯ ಗಿಮಿಕ್ ಮಾಡಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಮಾಡಿದ್ದು, ಕಾಟಾಚಾರಕ್ಕೆ ಗ್ರಾಮವಾಸ ¤ವ್ಯ ಮಾಡಲು ಹೊರಟಿದ್ದಾರೆ. ಸ್ಮಶಾನಗಳಿಗೆ ಜಾಗದ ಸಮಸ್ಯೆ, ಎಸ್‌ಸಿ, ಎಸ್‌ಟಿ ವಸತಿ ರಹಿ ತರಿಗೆ, ಬಡವರಿಗೆ, ಒಂದು ನಿವೇಶನ, ಸಾಗುವಳಿ ಚೀಟಿ ಕೊಡಲು ಆಗಿಲ್ಲ ಎಂದು ದೂರಿದರು.
ಜನರ ಮೇಲೆ ಹೊರೆ: ಮೋದಿ ಸರ್ಕಾರ ದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್‌ಗಳ ಬೆಲೆ ಏರಿಸುವುದರ ಮೂಲಕ ಜನರ ಮೇಲೆ ಹೊರೆ ನೀಡುತ್ತಿದೆ. ಅಗತ್ಯ ವಸ್ತುಗಳ ಏರಿಕೆಯಿಂದ ದೇಶದ ಸಾಮಾನ್ಯಜನರು ಪರದಾಡುವಂತಾಗಿ ದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಮಸೂದೆ ವಿರುದ್ಧ ದೆಹಲಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾಯ್ದೆ ವಾಪಾಸ್ ಪಡೆಯುವ ಯಾವುದೇ ಮಾತಿಲ್ಲ. ಮುಂದಿನ ದಿನದಲ್ಲಿ ಸ್ವಾಭಿಮಾನಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್, ಜಿಲ್ಲಾ ಬಿಎಸ್‌ಪಿ ಉಸ್ತುವಾರಿ ತಿಮ್ಮರಾಯಪ್ಪ, ತಾಲೂಕು ಕಾರ್ಯದರ್ಶಿ ಗಂಗಯ್ಯ ಇದ್ದರು.
ಉಸ್ತುವಾರಿ ಸಚಿವರನ್ನು ಬದಲಾಯಿಸಿ :
ಕಚೇರಿಯಲ್ಲಿಯೇ ಕುಳಿತು ಎಲ್ಲ ಸಮಸ್ಯೆ ಬಗೆಹರಿಸಬಹುದು. ಇವರಿಗೆ ಇಚ್ಛಶಕ್ತಿ ಕೊರತೆ ಇದೆ. ಕೇವಲ ಬೆಂಗಳೂರು, ಬಿಬಿಎಂಪಿ ಕಸದ ಮೇಲೆ ಕಣ್ಣು ಜಾಸ್ತಿ, ಇವರಿಗೆ ಕಂದಾಯ ಇಲಾಖೆ ಬಗ್ಗೆ ಎಳ್ಳಷ್ಟು ತಿಳಿದುಕೊಂಡಿಲ್ಲ. ಅನುಭವಿ ಸಚಿವರಿಗೆ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಕಂದಾಯ ಇಲಾಖೆ ನೀಡಿದರೆ ಒಳ್ಳೆಯದು. ಅದರಜೊತೆ ಬೆಂಗಳೂರು ಗ್ರಾಮಾಂತರಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.