Advertisement
ಭಾರತೀಯ ಚಿಕಿತ್ಸಾ ಪದ್ಧತಿಗಳಲ್ಲೊಂದಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಪದ್ಧತಿಯು ಭಾರತ ಸರ್ಕಾರದ ಆಯುಷ್ ಇಲಾಖೆಯ ಅಧೀನಕ್ಕೊಳಪಟ್ಟಿದೆ. ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೇಮಿತವಾಗಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ (ಫಿಸಿಕ್ಸ್, ಕೆಮೆಸ್ಟ್ರೀ ಮತ್ತು ಬಯೋಲಜಿ) ದಲ್ಲಿ ಕನಿಷ್ಠ ಶೇಕಡಾ ೫೦ ಅಂಕ ಗಳಿಸಿರುವ ಯಾವುದೇ ವಿದ್ಯಾರ್ಥಿಯೂ ಉತ್ತಮ ವೈದ್ಯನಾಗಿ ರೂಪುಗೊಂಡು ಸಮಾಜಕ್ಕೆ ಆರೋಗ್ಯ ಸೇವೆ ಸಲ್ಲಿಸುವ ಮಹತ್ತರವಾದ ಕೊಡುಗೆಯನ್ನು ನೀಡಬಹುದಾಗಿದೆ.
ಇದೊಂದು ವಿಶಿಷ್ಟವಾದ ಔಷಧಿ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಇಲ್ಲಿ ವೈದ್ಯರು ಅನೇಕ ಖಾಯಿಲೆಗಳಿಗೆ ಔಷಧಿಯಾಗಿ “ಪಂಚಮಹಾಭೂತ” ಅಂದರೆ ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶಗಳನ್ನು ಚಿಕಿತ್ಸಾ ವಿಧಾನ/ಸಾಧನಗಳಾಗಿ ಬಳಸುತ್ತಾರೆ. ಇಲ್ಲಿನ ಅಸಾಮಾನ್ಯ ಸಂಗತಿಯೆಂದರೆ ವೈದ್ಯರು ಕೇವಲ ಚಿಕಿತ್ಸೆ ನೀಡುತ್ತಾರೆ, ಆದರೆ ಖಾಯಿಲೆಗಳನ್ನು ಪ್ರಕೃತಿಯೇ ಈ ಕೆಲವು ಚಿಕಿತ್ಸಾ ವಿಧಾನಗಳ ಮೂಲಕ ಗುಣಪಡಿಸುತ್ತದೆ. ಅವುಗಳೆಂದರೆ ಶುದ್ಧೀಕರಿಸಿದ ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆ, ವೈಜ್ಞಾನಿಕ ಅಂಗ ಮರ್ದನ (ಮಸಾಜ್) ಅಕ್ಯುಪಂಕ್ಚರ್, ಬಣ್ಣ ಮತ್ತು ಅಯಸ್ಕಾಂತ ಚಿಕಿತ್ಸೆ, ಸೂರ್ಯಸ್ನಾನ, ಆಹಾರ ಪೋಷಣೆ ಮತ್ತು ಪಥ್ಯಾಹಾರ, ಶುದ್ಧೀಕರಣ ಮತ್ತು ಉಪವಾಸ ಚಿಕಿತ್ಸೆ, ಯೋಗ ಚಿಕಿತ್ಸೆ, ಯೊಗ-ಪ್ರಾಣಾಯಾಮ-ಧ್ಯಾನದಲ್ಲಿನ ವಿಶೇಷ ತಂತ್ರಗಳು, ಮನೋ ವೈದ್ಯ ಶಾಸ್ತ್ರದಲ್ಲಿ ಯೋಗ ಸಮಾಲೋಚನೆ, ಜೀವನ ಶೈಲಿಯ ನಿರ್ವಹಣೆ ಇತ್ಯಾದಿ. ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನದಲ್ಲಿ ಪ್ರಕೃತಿಗೆ ಮರಳಿ ಶರಣಾಗುವುದರಿಂದ ಮತ್ತು ಪ್ರಾಕೃತಿಕ ನಿಯಮಗಳನ್ನು ಪಾಲಿಸುವುದರಿಂದ ಸರಿಸುಮಾರು ಶೇಕಡಾ 70 ರಷ್ಟು ಮನುಕುಲದ ತೀವ್ರ ಮತ್ತು ದೀರ್ಘಕಾಲದ ಖಾಯಿಲೆಗಳನ್ನು ನಿರ್ವಹಣೆ ಮಾಡಬಹುದು, ಹತೋಟಿಗೆ ತರಬಹುದು ಮತ್ತು ಹಲವನ್ನು ಗುಣಪಡಿಸಬಹುದಾಗಿದೆ.
Related Articles
Advertisement
ಈ ಕೋರ್ಸಿನ ವ್ಯಾಪ್ತಿ ಮತ್ತು ಪ್ರಯೋಜನ: ಸ್ವಿಜರ್ಲೆಂಡ್ ಸೇರಿ ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಯೋಗ ಮತ್ತು ಆಯುರ್ವೇದವು ಅಧಿಕೃತ ಚಿಕಿತ್ಸಾ ಕ್ರಮವಾಗಿ ಅಂಗೀಕರಿಸಲ್ಪಟ್ಟಿದೆ. ಈ ಕೋರ್ಸಿನ ಅವಧಿ ಪೂರ್ಣವಾದ ಬಳಿಕ ಈ ಆರೋಗ್ಯ ಕ್ಷೇತ್ರಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುರ್ವೇದ ಆಸ್ಪತ್ರೆ/ಕಾಲೇಜು, ಯೋಗ ಮತ್ತು ಫಿಟ್‌ನೆಸ್ ಕೇಂದ್ರಗಳು, ಫಿಸಿಯೋಥೆರೆಪಿ ಮತ್ತು ಪುನಃಶ್ಚೇತನ ಕೇಂದ್ರ, ಫಿಟ್‌ನೆಸ್ ತರಬೇತುದಾರರಾಗಿ, ಹಿರಿಯ ನಾಗರೀಕರ (ವೃದ್ಧರ) ಕ್ಲಿನಿಕ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜೀವನ ಶೈಲಿ ನಿರ್ವಹಣಾ ಕ್ಲಿನಿಕ್, ಬೊಜ್ಜು ಕ್ಲಿನಿಕ್, ಆಹಾರ ಪೋಷಣೆ ಮತ್ತು ಪಥ್ಯಾಹಾರ ವಿಭಾಗ, ಅಕ್ಯುಪಂಕ್ಚರ್ ವೈದ್ಯರಾಗಿ, ಯೋಗದ ಆಪ್ತ ಸಮಾಲೋಚಕರಾಗಿ, ಮಾನಸಿಕ ಖಾಯಿಲೆಗಳ ಕ್ಲಿನಿಕ್‌ನಲ್ಲಿ, ನೋವು ನಿರ್ವಹಣಾ ಕ್ಲಿನಿಕ್, ಸ್ಪಾಗಳಲ್ಲಿ-ಕ್ರೂಸ್ (ಹಡಗು) ಗಳಲ್ಲಿ ಆರೋಗ್ಯ ತರಬೇತುದಾರರಾಗಿ, ಸಂಶೋಧಕ ವಿದ್ವಾಂಸರಾಗಿ, ಬೋಧಕರಾಗಿ, ಯೋಗ ಶಿಕ್ಷಕರಾಗಿ ಸೇವೆಸಲ್ಲಿಸಬಹುದು.