ಅಜೆಕಾರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ಅನಂತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಾಧ್ಯವಾಗಿ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗವಾದ ಮುನಿಯಾಲುವಿಗೆ ಪದವಿ ಕಾಲೇಜನ್ನು ಒದಗಿಸಲಾಗಿದ್ದು ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಮುನಿಯಾಲು ಚಟ್ಕಲ್‌ಪಾದೆ ಬಳಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿಗೆ ಮೂಲ ಸೌಕರ್ಯ ಒದಗಿಸುವ ಜತೆಗೆ ಮುಂದಿನ ವರ್ಷದಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಮುಂದುವರಿದ ಕಾಮಗಾರಿ ನಡೆಸಲಾಗುವುದು. ತಾಲೂಕಿನಾದ್ಯಂತ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಮುನಿಯಾಲು ಚಟ್ಕಲ್‌ಪಾದೆಯಿಂದ ಕಾಡುಹೊಳೆ ಸೇತುವೆವರೆಗೆ ರಸ್ತೆಯನ್ನು ಅಗಲಗೊಳಿಸಿ ಚತುಷ್ಪಥ ಕಾಮಗಾರಿ ನಡೆಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ವರಂಗ ಗ್ರಾ.ಪಂ. ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ವಹಿಸಿದ್ದರು.ಈ ಸಂದರ್ಭ ಸುನಿಲ್ ಕುಮಾರ್ ಅವರನ್ನು ಗ್ರಾಮಸ್ಥರ ಪರವಾಗಿ ಸಮ್ಮಾನಿಸಲಾಯಿತು.ಸಭಾ ಕಾರ್ಯಕ್ರಮಕ್ಕೂ ಮುನ್ನ ದಿನೇಶ್ ಪೈ ಅವರ ನೇತೃತ್ವದಲ್ಲಿ ಅರ್ಚಕ ಬಂಗಾರ್ ಭಟ್ ಅವರು ವಿವಿಧ ಧಾರ್ಮಿಕ ಕಾರ್ಯಗಳನ್ನು ಕಟ್ಟಡದಲ್ಲಿ ನೆರವೇರಿಸಿದರು.
ಜಿ.ಪಂ. ಸದಸ್ಯೆ ಜ್ಯೋತಿಹರೀಶ್, ಕಾರ್ಕಳ ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಮಾಲಿನಿ ಜೆ. ಶೆಟ್ಟಿ, ಸದಸ್ಯರಾದ ಸುಲತಾ ನಾಯ್ಕ, ರಮೇಶ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಗೋಪಿನಾಥ್ ಭಟ್, ಸದಸ್ಯರಾದ ದಿನೇಶ್ ಪೈ, ಗುತ್ತಿಗೆದಾರರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಮುನಿಯಾಲು ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಶ್ರೀಧರ್ ಪೈ, ಉದ್ಯಮಿಗಳಾದ ಶಂಕರ್ ಶೆಟ್ಟಿ, ಮಂಜುನಾಥ್ ಕೆ., ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಬಾಯರಿ ಉಪಸ್ಥಿತರಿದ್ದರು
ಗೋಪಿನಾಥ್ ಭಟ್ ಸ್ವಾಗತಿಸಿದರು. ವರುಣ್ ಭಟ್ ಪ್ರಾರ್ಥಿಸಿದರು, ಸೀತಾರಾಮ್ ಹೆಬ್ಟಾರ್ ಹಾಗೂ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಪೈ ಪ್ರಸ್ತಾವನೆಗೈದರು. ರತ್ನಾಕರ್ ಪೂಜಾರಿ ವಂದಿಸಿದರು.
ಮುನಿಯಾಲುವಿನಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿದ್ದು ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳ ಬೇಕಾದರೆ ಸರಕಾರಿ ಬಸ್ಸಿನ ವ್ಯವಸ್ಥೆ ಅತ್ಯಗತ್ಯ ಈ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸತೀಶ್ ಶೆಟ್ಟಿ ಮುಟ್ಲುಪಾಡಿ ಮನವಿ ಮಾಡಿದರು. ಕೆರ್ವಾಶೆ, ಶಿರ್ಲಾಲು, ಅಂಡಾರು, ಮುನಿಯಾಲು ಮಾರ್ಗವಾಗಿ ಹೆಬ್ರಿಗೆ ಹಾಗೂ ಕಬ್ಬಿನಾಲೆ, ಮುನಿಯಾಲು ಮಾರ್ಗವಾಗಿ ಪಡುಕುಡೂರು ಸಂಪರ್ಕಿಸುವಂತೆ ಸರಕಾರಿ ಬಸ್ಸಿನ ವ್ಯವಸ್ಥೆ ಆಗಬೇಕಿದೆ ಎಂದು ಹೇಳಿದರು.
ಸರಕಾರಿ ಬಸ್‌ಗೆ ಮನವಿ